ಜಿಎಸ್ಟಿ ಎಫೆಕ್ಟ್: ಹೊಂಡಾ ಕಾರುಗಳ ಬೆಲೆ ರೂ. 1.31 ಲಕ್ಷ ಇಳಿಕೆ
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಪರಿಣಾಮದಿಂದಾಗಿ ಹೊಂಡಾ ಕಂಪನಿ ಕಾರುಗಳ ಬೆಲೆಯನ್ನು ರೂ. 1.31 ಲಕ್ಷದವರೆಗೆ ಇಳಿಕೆ ಮಾಡಿದೆ.
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗುತ್ತಿರುವ ಪರಿಣಾಮದಿಂದಾಗಿ ಹೊಂಡಾ ಕಂಪನಿ ಕಾರುಗಳ ಬೆಲೆಯನ್ನು ರೂ. 1.31 ಲಕ್ಷದವರೆಗೆ ಇಳಿಕೆ ಮಾಡಿದೆ.

ಹೊಂಡಾ ಕಂಪನಿ ಬ್ರಿವೋ ಮಾಡೆಲ್ ಕಾರುಗಳ ಬೆಲೆ ರೂ. 12,279 ಹಾಗೂ ಅಮೇಜ್ ಕಾರುಗಳ ಬೆಲೆಯನ್ನು ರೂ. 14,825ರಷ್ಟು ಕಡಿಮೆ ಮಾಡಿದೆ. ಎಸ್‌ಯುವಿ ಸಿಆರ್-V ಕಾರುಗಳ ಬೆಲೆಯನ್ನು ರೂ. 1,31,663ರವರೆಗೆ ಕಡಿತಗೊಳಿಸಿದೆ.
ಸೆಡಾನ್ ಸಿಟಿ ಬೆಲೆಯನ್ನು ರೂ. 16,510 ಮತ್ತು ರೂ. 28,005 ವ್ಯಾಪ್ತಿಯಲ್ಲಿ ಕಡಿಮೆ ಮಾಡಿದೆ. ಜತೆಗೆ ಬಿಆರ್-ವಿ ಮಾಡೆಲ್ ಬೆಲೆ ರೂ. 30,387ರಷ್ಟು ಕಡಿತಗೊಂಡಿದೆ. (ಬೈಕ್ ಗಳ ಮೇಲೆ ರಿಯಾಯಿತಿ ಪಡೆಯಿರಿ..!)
ಜಾಗ್ವಾರ್ ಲ್ಯಾಂಡ್ ರೋವರ್, ಮಾರುತಿ ಸುಜುಕಿ, ಫೋರ್ಡ್, ಟೊಯೋಟಾ, ಹಾಗೂ ಬಿಎಂಡಬ್ಲ್ಯು ಕಾರು ಕಂಪನಿಗಳು ಈಗಾಗಲೇ ಕಾರುಗಳ ಮೇಲೆ ರಿಯಾಯಿತಿಯನ್ನು ಘೋಷಿಸಿವೆ. ಜಿಎಸ್ಟಿ ಮಹಿಮೆ..! ಮಾರುತಿ, ಹುಂಡೈ, ಜಾಗ್ವಾರ್, ಹೊಂಡಾ, ಫೊರ್ಡ್, ಆಡಿ, ಟಾಟಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್!!


Click it and Unblock the Notifications