For Quick Alerts
ALLOW NOTIFICATIONS  
For Daily Alerts

ಚುನಾವಣಾ ಚೀಟಿಗೆ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ?

ಕೇಂದ್ರ ಸರ್ಕಾರ ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲಾ ತಿಳಿದಿದೆ. ಆದರೆ ಚುನಾವಣಾ ಚೀಟಿಗೆ ಮಾತ್ರ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ ಎನ್ನುವುದು ತುಂಬಾ ಜನರ ಪ್ರಶ್ನೆ.

|

ಕೇಂದ್ರ ಸರ್ಕಾರ ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲಾ ತಿಳಿದಿದೆ. ಆದರೆ ಚುನಾವಣಾ ಚೀಟಿಗೆ ಮಾತ್ರ ಆಧಾರ್ ಕಡ್ಡಾಯ ಮಾಡುತ್ತಿಲ್ಲ ಏಕೆ ಎನ್ನುವುದು ತುಂಬಾ ಜನರ ಪ್ರಶ್ನೆ. ಅದರಲ್ಲೂ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿವೆ.

 

ಭ್ರಷ್ಟಾಚಾರ, ತೆರಿಗೆ ವಂಚನೆ, ಕಪ್ಪುಹಣ ತಡೆಗಾಗಿ ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಂತಸದ ವಿಚಾರ. ಈ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಡ್ಡಾಯ ಜೋಡಣೆ ಕಡ್ಡಾಯಗೊಳಿಸುತ್ತಿದೆ. ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಚುನಾವಣಾ ಚೀಟಿಗೆ ಏಕೆ ಮಾಡುತ್ತಿಲ್ಲ?

ಚುನಾವಣಾ ಚೀಟಿಗೆ ಏಕೆ ಮಾಡುತ್ತಿಲ್ಲ?

ಪ್ಯಾನ್ ಕಾರ್ಡ್, ಹಣಕಾಸು ವ್ಯವಹಾರ, ಪಡಿತರ ಚಿಟಿ, ಪಾಸ್ ಪೋರ್ಟ್, ಸರ್ಕಾರದ ಸೇವೆಗಳಿಗಾಗಿ ಆಧಾರ್ ಜೋಡಣೆ ಕಡ್ಡಾಯ ಮಾಡುತ್ತಿರುವ ಸರ್ಕಾರ ಚುನಾವಣಾ ಚೀಟಿಗೆ(Voter ID) ಆಧಾರ್ ಕಡ್ಡಾಯಕ್ಕಾಗಿ ಯಾಕೆ ಒತ್ತಾಯ ಮಾಡುತ್ತಿಲ್ಲ. ಸರ್ಕಾರವೆಂದರೆ ಬರೀ ರಾಜಕೀಯ ಪಕ್ಷಗಳೇ..?ಒಂದು ವೇಳೆ ಚುನಾವಣಾ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದರೆ ಇಲ್ಲಿಯವರೆಗೆ ಬರುತ್ತಿದ್ದ ಹಾಗೂ ಮುಂಬರಲಿರುವ ಚುನಾವಣೆಗಳಲ್ಲಿನ ಬಹುಮತದ ಲೆಕ್ಕಾಚಾರ ಉಲ್ಟಾಪಲ್ಟಾ ಆಗಬಹುದೆ? ಫಲಿತಾಂಶದ ಸತ್ಯಾಂಶಗಳು/ಅಂಕಿಅಂಶಗಳು ಧೂಳಿಪಟ ಆಗಬಹುದೆಂಬ ಭಯವೇ..? ಮುಂದಿನ ಚುನಾವಣೆಗಳಲ್ಲಿ ಪಕ್ಷಗಳು ಗೆಲ್ಲುವ ನಿಖರ ಸಾಧ್ಯತೆಗಳ ಲೆಕ್ಕಾಚಾರ ಇದು ಮಣ್ಣುಪಾಲು ಮಾಡಬಹುದೆಂಬ ರಾಜಕೀಯ ಲೆಕ್ಕಾಚಾರ ಇರಬಹುದೆ?

ಸೋಷಿಯಲ್ ಮೀಡಿಯಾ ಏನನ್ನತ್ತೆ?

ಸೋಷಿಯಲ್ ಮೀಡಿಯಾ ಏನನ್ನತ್ತೆ?

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಮತದಾರರ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡಿದರೆ ಮಹತ್ತರ ಬದಲಾವಣೆ, ಫಲಿತಾಂಶ ಸಾಧ್ಯವಿದೆ. ದೇಶದ ಚುನಾವಣಾ ಚರಿತ್ರೆಯಲ್ಲಿ ಇದೊಂದು ಮಹತ್ತರ ಬದಲಾವಣೆಯ ಪರ್ವ ಆಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ. ನಕಲಿ ಮತದಾನ ತಡೆಗೆ ಮತದಾರರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಮತದಾರ ಚೀಟಿ-ಆಧಾರ್ ಜೋಡಣೆ ಲಾಭಗಳೇನು?
 

ಮತದಾರ ಚೀಟಿ-ಆಧಾರ್ ಜೋಡಣೆ ಲಾಭಗಳೇನು?

1. ನಕಲಿ ಮತದಾನ ತಡೆಯಬಹುದು. ಬೆರಳ ತುದಿಗೆ ಶಾಯಿ ಹಾಕುವ ಬದಲು ಬೆರಳಿನ ಸ್ಕ್ಯಾನ್ ಮಾಡಿದರೆ ಸಾಕು. ಎರಡನೇ ಬಾರಿ ಸ್ಕ್ಯಾನ್ ಮಾಡಲಾಗದಂತ ನಿಯಮ ಯಂತ್ರದಲ್ಲಿ ಅಳವಡಿಸಿದರೆ ಸಾಕು.
2. ಒಬ್ಬ ವ್ಯಕ್ತಿ ಎರಡೆರಡು ಬಾರಿ ಮತದಾನ ಮಾಡುವುದು ಅಥವಾ ನಕಲಿ ಮತದಾನ ಮಾಡುವುದನ್ನು ಸುಲಭವಾಗಿ ತಡೆಯಬಹುದು.
2. ಮರಣಹೊಂದಿದ ವ್ಕ್ತಿಗಳು ಮತ ಚಲಾಯಿಸಲಾರರು!
3. ನಕಲಿ ಮತದಾನ ಅವಕಾಶ ಸಾದ್ಯವಿಲ್ಲದಿರುವುದರಿಂದ ಅಭ್ಯರ್ಥಿಯ ಏಜೆಂಟರುಗಳನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ.
4. ಮತದಾನಕ್ಕಾಗಿ ರಜೆಗಳನ್ನು ತಡೆಯಬಹುದು.
5. ಪೊಲೀಸ್/ಸೇನೆಗಳನ್ನು ಬಳಸುವುದನ್ನು ತಪ್ಪಿಸಬಹುದು.
6. ಸರ್ಕಾರಿ ಅಧಿಕಾರಿಗಳನ್ನುತಿಂಗಳುಗಟ್ಟಲೆ ಅಲೆದಾಡಿಸಬೇಕಿಲ್ಲ.
7. ಮತದಾರ ಬೆರಳಿನ ಸ್ಕ್ಯಾನ್ ಮಾಡಿದಾಗ ಆತನ ವಿಧಾನಸಭಾ ಕ್ಷೇತ್ರದ ಮಾಹಿತಿ ಪ್ರಕಟವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಬಹುದು.
8. ಮತದಾನ ಮಾಡಬೇಕಾದ ಕ್ಷೇತ್ರಗಳಿಗೆ ಹೋಗಿ ಮತ ಚಲಾಯಿಸುವ ಬದಲು ಇರುವ ನಗರ ಅಥವಾ ಸ್ಥಳಗಳಿಂದಲೇ ಮತ ಚಲಾವಣೆ ಅವಕಾಶ ಕಲ್ಪಿಸಬಹುದು. ಬ್ಯಾಂಕು ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿವೆ 4 ವಿಧಾನ

English summary

Why Aadhaar is not compulsory for election cards?

We all know that the Aadhaar is compulsory for all the central government schemes. But Aadhaar has not been compulsory for voter id.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X