Englishहिन्दी മലയാളം தமிழ் తెలుగు

ಬ್ಯಾಂಕು ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿವೆ 4 ವಿಧಾನ

Written By: Siddu
Subscribe to GoodReturns Kannada

ಕೇಂದ್ರ ಸರ್ಕಾರ ಈಗಂತೂ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡುತ್ತಿದ್ದು, ಆಧಾರ್ ಲಿಂಕ್ ಮಾಡಿದರೆ ಮಾತ್ರ ಹಣಕಾಸು ವ್ಯವಹಾರ ಸುಲಭ ಎನ್ನುವಂತಾಗಿದೆ.

ಆಧಾರ್ ಹಣಕಾಸು ವ್ಯವಹಾರ, ಗುರುತಿನ ಚೀಟಿ ಮತ್ತು ವಿಳಾಸದ ಗುರುತಾಗಿ ಪ್ರಮುಖ ಸ್ಥಾನ ಪಡೆಯುತ್ತಿದೆ. ಅನೇಕರಿಗೆ ಬ್ಯಾಂಕಿಗೆ ತೆರಳಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಲು ಸಾಧ್ಯ ಆಗದೆ ಇರಬಹುದು.
ಹಾಗಿದ್ದರೆ ಅಂತ ಗ್ರಾಹಕರು ಆಧಾರ್ ಲಿಂಕಿಂಗ್ ಮಾಡೋದು ಹೇಗೆ? ಯಾವ ವಿಧಾನಗಳ ಮೂಲಕ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬಹುದು ಎನ್ನುವುದನ್ನು ನೋಡೋಣ... ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

1. ಎಟಿಎಂ ಮೂಲಕ ಆಧಾರ್ ಲಿಂಕ್

ಯಾವುದೇ ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂ ಕೇಂದ್ರಗಳಿಗೆ ಬೇಟಿ ಕೊಟ್ಟುಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬಹುದು. ಉದಾಹರಣೆಗೆ ಎಸ್ಬಿಐ ಬ್ಯಾಂಕ್ ಮೂಲಕ ತಿಳಿದುಕೊಳ್ಳೋಣ..
* ಎಟಿಎಂ ಕಾರ್ಡ್ ಸ್ವೈಪ್ ಮಾಡಿ
* ಪಿನ್ ನಂಬರ್ ಎಂಟರ್ ಮಾಡಿ
* ಸರ್ವಿಸ್-ರಿಜಿಸ್ಟ್ರೇಷನ್ ಮೇನು ಆಯ್ಕೆ ಮಾಡಿ
* ಆಧಾರ್ ರಿಜಿಸ್ಟ್ರೇಷನ್ ಆಯ್ಕೆ ಮಾಡಿ
* ಖಾತೆ ವಿಧ ಆಯ್ಕೆ ಮಾಡಿ(ಉಳಿತಾಯ/ಚಾಲ್ತಿ)
* ನಂತರ ಆಧಾರ್ ನಂಬರ್ ನಮೂದಿಸಿ
* ಪುನಹ ಅದೇ ವಿವರ ನಮೂದಿಸಬೇಕು

2. ಎಸ್ಎಂಎಸ್ ಮೂಲಕ ಆಧಾರ್ ಲಿಂಕ್

ಈ ಸೇವೆ ಪಡೆಯಲು ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಣಿಯಾಗಿರಬೇಕು.
* ಯುಐಡಿ(space) ಆಧಾರ್ ನಂಬರ್(space) ಖಾತೆ ಸಂಖ್ಯೆ ಈ ರೂಪದಲ್ಲಿ 567676 ನಂಬರ್ ಗೆ ಎಸ್ಎಂಎಸ್ ಕಳುಹಿಸಿ.
* ಮೊಬೈಲ್ ನಂಬರ್ ನೋಂದಣಿ ಆಗದಿದ್ದರೆ ಅಥವಾ ಒಂದು ವೇಳೆ ನಿಮ್ಮ ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೂ ನಿಮಗೆ ಎಸ್ಎಂಎಸ್ ಬರುತ್ತದೆ.
* ಒಂದು ವೇಳೆ ಮೊಬೈಲ್ ನಂಬರ್ ಬ್ಯಾಂಕ್ ಜತೆ ಲಿಂಕ್ ಆಗಿದ್ದರೆ, ವಿನಂತಿಯ ದೃಢೀಕರಣ ಸಂದೇಶ ಪಡೆಯುವಿರಿ.
* ಆಧಾರ್ ನಂಬರ್ ನ್ನು ಬ್ಯಾಂಕ್ ನವರು ಯುಐಡಿಎಐ ಜತೆ ಪರಿಶೀಲನೆ ಮಾಡಿರಬೇಕು. ಆಕಸ್ಮಾತ್ ವೆರಿಪಿಕೆಷನ್ ವಿಫಲವಾದಲ್ಲಿ ಆಧಾರ್ ನಂಬರ್ ಅಥವಾ ಇ-ಆಧಾರ್ ನೊಂದಿಗೆ ಗ್ರಾಹಕರಿಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ.

3. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆಧಾರ್ ಲಿಂಕ್

* ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು www.onlinesbi.com ಗೇ ಲಾಗಿನ್ ಆಗಬೇಕು
* ಮೈ ಅಕೌಂಟ್ಸ್ ಅಡಿಯಲ್ಲಿ ನಿಮ್ಮ ಆಧಾರ್ ನಂಬರ್ ಲಿಂಕ್ ಮಾಡಿ(ಪರದೆಯ ಎಡಬಾಗದಲ್ಲಿ ಕಾಣಿಸಿಕೊಳ್ಳುತ್ತದೆ)
* ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸ್ಕ್ರೀನ್ ತೆರೆದುಕೊಳ್ಳುತ್ತದೆ
* ಅಕೌಂಟ್ ನಂಬರ್ ಆಯ್ಕೆ ಮಾಡಿ, ಆಧಾರ್ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
* ನೋಂದಾಯಿತ ಮೊಬೈಲ್ ಸಂಖ್ಯೆಯ ಕೊನೆಯ 2 ಅಂಕೆಗಳನ್ನು(non-editable) ಗ್ರಾಹಕರಿಗೆ ತೋರಿಸಲಾಗುತ್ತದೆ.
* ಮ್ಯಾಪಿಂಗ್ ಸ್ಟೇಟಸ್ ನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸೂಚಿಸಲಾಗುವುದು.

4 . ಬ್ರಾಂಚ್ ಮೂಲಕ ಲಿಂಕ್

ಗ್ರಾಹಕರು ತಮ್ಮ ಆಧಾರ್ ನಂಬರ್ ಅಥವಾ ಇ-ಆಧಾರ್ ನಂಬರ್ ಜತೆ ಎಸ್ಬಿಐ ಬ್ಯಾಂಕಿಗೆ ಬೇಟಿ ನೀಡಬೇಕು.
* ಬ್ಯಾಂಕಿನಲ್ಲಿ ರಿಕ್ವೆಸ್ಟಿಂಗ್ ಲೇಟರ್ ಜತೆ ಆಧಾರ್ ಝರಾಕ್ಸ್ ಪ್ರತಿಯ ಇರಿಸಿ ಸಲ್ಲಿಸಬೇಕು.
* ಅಗತ್ಯ ಪರಿಶೀಳನೆಯ ನಂತರ ಆಧಾರ್ ಲಿಂಕ್ ಯಶಸ್ವಿಯಾಗುತ್ತದೆ. ಗ್ರಾಹಕರ ನೋಂದಾಯಿತ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ. ಆನ್ ಲೈನ್ ಮೂಲಕ ಬ್ಯಾಂಕು ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

English summary

4 Ways To Link Aadhaar To Your SBI Bank Account

Aadhaar is popular and trusted across all financial institutions, as identity and address proof. Many individuals find it difficult to visit bank to submit aadhaar copy to update the same.
Story first published: Tuesday, May 16, 2017, 14:32 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns