ಹಣಕಾಸು ವರ್ಷ 2016-17ರ ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಗೆ ಅಗಸ್ಟ್ 5 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಹಣಕಾಸು ವರ್ಷ 2016-17ರ ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಗೆ ಅಗಸ್ಟ್ 5 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಹಿಂದೆ ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಹಾಗೂ ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿತ್ತು.
ಅವಧಿ ವಿಸ್ತಾರಕ್ಕೆ ಕಾರಣ
ತೆರಿಗೆದಾರರು ಕೊನೆ ಘಳಿಗೆಯಲ್ಲಿ ರಿಟರ್ನ್ ಫೈಲಿಂಗ್ ಗಾಗಿ ಇ-ಫೈಲಿಂಗ್ ವೆಬ್ಸೈಟ್ incometaxindiaefiling.gov.in ನಲ್ಲಿ ಮುಗಿಬಿದ್ದಿರುವುದರಿಂದ ತೊಂದರೆ ಉಂಟಾಗಿದ್ದು, ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?
2 ಕೋಟಿ ಐಟಿಆರ್ ಸಲ್ಲಿಕೆ
ಇಲ್ಲಿಯವರೆಗೆ ಸುಮಾರು 2 ಕೋಟಿ ಐಟಿ ರಿಟರ್ನ್ಸ್ ವಿವರಗಳನ್ನು ಆನ್ಲೈನ್ (ವಿದ್ಯುನ್ಮಾನ) ಮೂಲಕ ಸಲ್ಲಿಸಲಾಗಿದ್ದು, ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಸುವಂತೆ ತೆರಿಗೆದಾರರಲ್ಲಿ ಇಲಾಖೆ ಮನವಿ ಮಾಡಿದೆ.
ಆಧಾರ್-ಪ್ಯಾನ್ ಲಿಂಕ್ ಕಡ್ಡಾಯ
ಜುಲೈ 1ರಿಂದ ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ತೆರಿಗೆ ಇಲಾಖೆಯು ನೋಟು ನಿಷೇಧದ ನಂತರ ಬ್ಯಾಂಕು ಖಾತೆಗಳಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇರಿಸಿದ್ದರೆ ಅಂತಹ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ.
ಇ-ಫೈಲಿಂಗ್ ವೆಬ್ಸೈಟ್
ಆದಾಯ ತೆರಿಗೆ ಇಲಾಖೆಯ ಅಧಿಕೃತ ತಾಣ http://incometaxindiaefiling.gov.in ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ. ಕೊನೆ ಸಂದರ್ಭದಲ್ಲಿ ಇಲಾಖೆಯ ಇಂಟರ್ನೆಟ್ ತಾಣದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಿರುವ ಬಗ್ಗೆ ದೂರುಗಳು ದಾಖಲಾಗಿವೆ. ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?


Click it and Unblock the Notifications