ರೂ. 1000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಹೊಸ ವಿನ್ಯಾಸದೊಂದಿಗೆ ಶೀಘ್ರವೇ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧತೆ ನಡೆಸಿದೆ.
ರೂ. 1000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಹೊಸ ವಿನ್ಯಾಸದೊಂದಿಗೆ ಶೀಘ್ರವೇ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧತೆ ನಡೆಸಿದೆ.
ಕಪ್ಪುಹಣ ಮತ್ತು ಖೋಟಾನೋಟು ಸಮಸ್ಯೆ ನಿಯಂತ್ರಿಸುವ ಪ್ರಯತ್ನವಾಗಿ ಕಳೆದ ವರ್ಷ ನವೆಂಬರ್ 8 ರಂದು ರೂ. 500 ಹಾಗು 1000 ನೋಟುಗಳನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ಮತ್ತೆ ರೂ. 1000 ಮುಖಬೆಲೆಯ ನೋಟುಗಳ ಮುದ್ರಣ ಕೆಲಸ ಆರ್ಬಿಐ ಶೀಘ್ರದಲ್ಲೇ ಆರಂಭಿಸಲಿದೆ. 200 ಹೊಸ ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ..
ಸುರಕ್ಷತೆಗೆ ಪ್ರಾಮುಖ್ಯತೆ
ಹಳೆಯ ರೂ. 1,000 ಮುಖಬೆಲೆಯ ನೋಟುಗಳಿಗೆ ಹೋಲಿಸಿದರೆ ಹೊಸ ನೋಟುಗಳು ಗಾತ್ರದಲ್ಲಿ ಚಿಕ್ಕದಾಗಿರಲಿವೆ. ಮುಖ್ಯವಾಗಿ ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ನೋಟಿನ ಬಣ್ಣದಲ್ಲಿಯೂ ವ್ಯತ್ಯಾಸ ಇರಲಿದೆ ಎಂದು ಮೂಲಗಳು ತಿಳಿಸಿವೆ.
2000 ನೋಟು ನಿಷೇಧ ಸಾಧ್ಯತೆ!
ಮುಂದಿನ ದಿನಗಳಲ್ಲಿ ರೂ. 2,000 ಮುಖಬೆಲೆಯ ನೋಟುಗಳನ್ನು ಕ್ರಮೇಣವಾಗಿ ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚು ಮುಖಬೆಲೆಯ ನೋಟುಗಳು ಕಪ್ಪುಹಣ ಸಂಗ್ರಹ ಸುಲಭವಾಗಿಸುತ್ತವೆ.
1000 ನೋಟು ಚಲಾವಣೆಗೆ ಕಾರಣ
ನೋಟು ರದ್ದತಿ ನಂತರ ಚಲಾವಣೆಗೆ ಬಂದಿರುವ ರೂ. 2000 ಮುಖಬೆಲೆಯ ನೋಟುಗಳಿಗೆ ಚಿಲ್ಲರೆ ಸಿಗುವುದು ಕೂಡ ಕಷ್ಟವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ 1000 ನೊಟುಗಳು ಬರಲಿವೆ!
1000 ನೋಟಿನ ವೈಶಿಷ್ಟ್ಯ?
ನವೆಂಬರ್ 8ಕ್ಕೆ ರದ್ದಾದ ರೂ. 1,000 ನೋಟುಗಳಿಗೆ ಹೋಲಿಸಿದರೆ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದೆ.
ಹೊಸ ವಿನ್ಯಾಸದೊಂದಿಗೆ, ಭದ್ರತಾ ವೈಶಿಷ್ಟ್ಯ ಹೊಂದಿರಲಿದೆ. ಅಂಧರು ನೋಟುಗಳನ್ನು ಗುರುತಿಸುವಂತೆ ಬ್ರೈಲ್‌ಸ್ನೇಹಿ ವಿನ್ಯಾಸ ಇರಲಿದೆ. ಸುಲಭವಾಗಿ ನಕಲು ಮಾಡಲಾಗದಂತ ಹೆಚ್ಚು ಸುರಕ್ಷತಾ ಅಂಶಗಳು ಇರಲಿದೆ.
200 ನೋಟು ಚಲಾವಣೆಗೆ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಆಗಸ್ಟ್ 25 (ಶುಕ್ರವಾರ) ಚಲಾವಣೆಗೆ ತಂದಿವೆ. 200 ಮುಖಬೆಲೆಯ ಹೊಸ ನೋಟುಗಳ ಗಾಢ ಹಳದಿ ಬಣ್ಣ ಹೊಂದಿದ್ದು, 66mm x 146 mm ಅಳತೆಯನ್ನು ಹೊಂದಿವೆ. ರೂ. 200 ಮುಖಬೆಲೆಯ ನೋಟುಗಳನ್ನು ಚರಿತ್ರೆಯಲ್ಲಿ ಮೊದಲ ಬಾರಿ ಪರಿಚಯಿಸಲಾಗಿದ್ದು, ಕಡಿಮೆ ಮುಖಬೆಲೆ ಕರೆನ್ಸಿ ಕೊರತೆಯನ್ನು ಕಡಿಮೆ ಮಾಡಲಿವೆ. ಈ ಹಿಂದೆ ರೂ. 500, 2000 ಮುಖಬೆಲೆಯ ನೋಟುಗಳನ್ನು ಕೇಂದ್ರ ಬಿಡುಗಡೆಗೊಳಿಸಿದೆ.


Click it and Unblock the Notifications