ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಂಡು ಜಿಯೋದೊಂದಿಗೆ ಪೈಪೋಟಿ ನೀಡುವ ಅನಿವಾರ್ಯತೆಯಲ್ಲಿದೆ.ಹೀಗಾಗಿ ರೂ. 5 ಮತ್ತು ರೂ. 8ರ ಅತಿ ಕಡಿಮೆ ಬೆಲೆಯ ಕರೆ ಮತ್ತು ಡೇಟಾ ಯೋಜನೆಗಳನ್ನು ಬಿಡುಗಡೆಗೊಳಿಸುತ್ತಿದೆ.
ಜಿಯೋ ಕಡಿಮೆ ಬೆಲೆಯ ಟ್ಯಾರಿಪ್ ಪ್ಲಾನ್ ಹಾಗೂ ಜಿಯೋಫೋನ್ ಅಲೆಗೆ ಸಿಲುಕಿರುವ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ! ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಂಡು ಜಿಯೋದೊಂದಿಗೆ ಪೈಪೋಟಿ ನೀಡುವ ಅನಿವಾರ್ಯತೆಯಲ್ಲಿದೆ.
ಹೀಗಾಗಿ ಏರ್ಟೆಲ್ (airtel) ಜಿಯೋದಂತೆ ರೂ. 5 ಮತ್ತು ರೂ. 8ರ ಅತಿ ಕಡಿಮೆ ಬೆಲೆಯ ಕರೆ ಮತ್ತು ಡೇಟಾ ಯೋಜನೆಗಳನ್ನು ಬಿಡುಗಡೆಗೊಳಿಸುತ್ತಿದೆ.
ರೂ. 5 ಪ್ಲಾನ್
ರೂ. 5 ಯೋಜನೆಯಡಿಯಲ್ಲಿ, ಪ್ರಿಪೇಡ್ ಗ್ರಾಹಕರು 4g ಸಿಮ್ ಹೊಂದಿರಬೇಕಾಗಿದ್ದು, 3g/4g ವೇಗದ 4GB ಡೇಟಾ ಏಳು ದಿನಗಳ ಅವಧಿಗೆ ಲಭ್ಯವಿರುತ್ತದೆ. ಈ ಪ್ಲಾನ್ ನ್ನು ಒಂದು ಬಾರಿ ರೀಚಾರ್ಜ್ ಮಾಡಬಹುದು. ಪ್ರಿಪೇಡ್ ನ ಎಲ್ಲಾ ಚಂದಾದಾರರಿಗೆ ಈ ಯೋಜನೆ ಸಿಗುವುದು ಕಷ್ಟ. ಏರ್ಟೆಲ್ ಅತಿ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್ಫೋನ್ ಬಿಡುಗಡೆ!!
ರೂ. 8 ಪ್ಲಾನ್
ಏರ್ಟೆಲ್ ಪರಿಚಯಿಸಿರುವ ಈ ಪ್ಲಾನ್ ಮೂಲಕ ಮುಖ್ಯವಾಗಿ ಸ್ಥಳೀಯ ಮತ್ತು ಎಸ್ಟಿಡಿ ಧ್ವನಿ ಕರೆಗಳನ್ನು ಮಾಡಬಹುದು. ಒಂದು ನಿಮಿಷಕ್ಕೆ 30 ಪೈಸೆಯಂತೆ ಕರೆಗಳನ್ನು ಆನಂದಿಸಬಹುದಾಗಿದ್ದು, 54 ದಿನಗಳ ವ್ಯಾಲಿಡಿಟಿ ಹೊಂದಿದೆ.
ಬೇರೆ ಆಫರ್ ಗಳೇನು?
ಈ ಮೇಲಿನ ಆಫರ್ ಗಳ ಜತೆಗೆ ರೂ. 8 ರಿಂದ ರೂ. 399 ವರೆಗೆ ಹಲವು ಆಫರ್ ಗಳನ್ನು ಘೋಷಿಸಿದೆ.
ರೂ. 40 ಯೋಜನೆ: ರೂ. 35 ಟಾಕ್ ಟೈಮ್, ಅನಿಯಮಿತ ಅವಧಿ
ರೂ. 60 ಯೋಜನೆ: ರೂ. 58 ಟಾಕ್ ಟೈಮ್, ಅನಿಯಮಿತ ಅವಧಿ
ರೂ. 199 ಯೋಜನೆ: 28 ದಿನಗಳವರೆಗೆ ಅನಿಯಮಿತ ಸ್ಥಳೀಯ ಮೊಬೈಲ್ ಕರೆಗಳು ಮತ್ತು 1gb 2g/3g/4g ಡೇಟಾ ಸೌಲಭ್ಯ
ರೂ. 399 ಪ್ಲಾನ್
ಕಳೆದ ವಾರ ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ರೂ. 399ಕ್ಕೆ ಹೊಸ ಪ್ಲಾನ್ ಘೋಷಣೆ ಮಾಡಿದೆ. ಈ ಮೂಲಕ ಅನ್ ಲಿಮಿಟೆಡ್ ಕರೆ ಹಾಗು ಪ್ರತಿದಿನ 1GB ಯಂತೆ 84 ದಿನ 4G ವೇಗದ ಡೇಟಾ ನೀಡಲಿದೆ. ಜಿಯೋ ಕೂಡ ರೂ. 399 ಇದೇ ಆಫರ್ ನ್ನು ಹಿಂದೆಯೇ ಪರಿಚಯಿಸಿತ್ತು. ಜಿಯೋಗೆ ಕೌಂಟರ್! ಬಿಎಸ್ಎನ್ಎಲ್ ಅನಿಯಮಿತ ಕರೆ, ಭರ್ಜರಿ ಡೇಟಾ ಆಫರ್!!


Click it and Unblock the Notifications