ಈಗ ಮದ್ಯ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯ!

ಇನ್ಮುಂದೆ ಪಬ್ ಗಳಿಗೆ ಮದ್ಯ ಖರೀದಿ ಮಾಡುವುದು ಅಷ್ಟು ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ ಪಬ್ ಗಳಿಗೆ ಹೋಗಿ ಮದ್ಯ ಖರೀದಿ ಮಾಡುವ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.

ಈಗಂತೂ ಎಲ್ಲದಕ್ಕೂ ಆಧಾರ್ ಕಡ್ಡಾಯ! ಪ್ಯಾನ್ ಕಾರ್ಡ್, ಎಲ್ಪಿಜಿ ಸಿಲಿಂಡರ್, ಮೊಬೈಲ್ ಸಿಮ್, ಸರ್ಕಾರಿ ಯೋಜನೆಗಳು, ಬ್ಯಾಂಕ್ ಖಾತೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು. ಇದೀಗ ಮದ್ಯದ ಸರದಿ...!

ಇನ್ಮುಂದೆ ಪಬ್ ಗಳಿಗೆ ಮದ್ಯ ಖರೀದಿ ಮಾಡುವುದು ಅಷ್ಟು ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ ಪಬ್ ಗಳಿಗೆ ಹೋಗಿ ಮದ್ಯ ಖರೀದಿ ಮಾಡುವ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

ಆಧಾರ್ ಕಾರ್ಡ್ ಯಾಕೆ?

ಆಧಾರ್ ಕಾರ್ಡ್ ಯಾಕೆ?

ಮದ್ಯ ಮಾರಾಟ ಮಾಡುವ ಪಬ್ ಗಳಲ್ಲಿ ಮದ್ಯದ ಜತೆಗೆ ನಶೆಯ ಪದಾರ್ಥಗಳನ್ನು (ಡ್ರಗ್ಸ್) ಮಾರಾಟ ಮಾಡಲಾಗುತ್ತಿದೆ. ಇಂತಹ ಅನೇಕ ಜಾಲಗಳು ಪೋಲಿಸ್ ಬಲೆಗೆ ಬಿದ್ದಿವೆ. ಹೀಗಾಗಿ ಸರ್ಕಾರ ಪಬ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಇದರಿಂದ ಯಾರು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲು ಅಬಕಾರಿ ಇಲಾಖೆ ಸಹಾಯಕವಾಗಲಿದೆ.

ನೋಟಿಸ್ ಜಾರಿ

ನೋಟಿಸ್ ಜಾರಿ

ಸರ್ಕಾರ ನಗರದ ಪಬ್ ಮಾಲೀಕರಿಗೆ ಈ ಬಗ್ಗೆ ನೊಟೀಸ್ ಜಾರಿಗೊಳಿಸಿದ್ದು, ಮದ್ಯ ಖರೀದಿಗೆ ಬರುವ ಗ್ರಾಹಕರು ಆಧಾರ್ ಕಾರ್ಡ್ ತರುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ತಿಳಿಸಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಪಬ್ ಗೆ ಪ್ರವೇಶ ನೀಡಬೇಡಿ ಎಂದು ಸರ್ಕಾರ ಸೂಚನೆ ನೀಡಿದೆ.

ಪ್ರತ್ಯೇಕ ನೋಂದಣಿ ಪುಸ್ತಕ

ಪ್ರತ್ಯೇಕ ನೋಂದಣಿ ಪುಸ್ತಕ

ಪಬ್ ಗೆ ಬರುವ ಗ್ರಾಹಕರ ಮಾಹಿತಿ ಸಂಗ್ರಹಕ್ಕೆ ಪ್ರತ್ಯೇಕ ನೋಂದಣಿ ಪುಸ್ತಕ ಇಟ್ಟಕೊಳ್ಳುವಂತೆ ಪಬ್ ಮಾಲೀಕರಿಗೆ ಸರ್ಕಾರ ಸೂಚನೆ ನೀಡಿದೆ. ಮದ್ಯ ಖರೀದಿಗೆ ಬರುವ ಗ್ರಾಹಕರ ಕುರಿತುಸಂಪೂರ್ಣ ಮಾಹಿತಿ ಇಡುವಂತೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+