ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿ ಮದುವೆ ವಿಶೇಷ ಸ್ಥಾನಮಾನ ಪಡೆದಿದ್ದು, ಮಹಾ ಸಂಭ್ರಮದ ವಿಶೇಷ ಘಟ್ಟವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ಮೈಲಿಗಲ್ಲು. ಈ ಸುಖಭಾವನೆಯ ನಂತರ ನೀವು ಬದುಕಿನ ಹೊಸ ಮಾರ್ಗಕ್ಕೆ ಹೊಂದಿಕೊಂಡು ಹಣಕಾಸಿನ ವಿಷಯವೂ ಸೇರಿದಂತೆ ಹಲವಾರು ವಿಷಯಗಳನ್ನು ನಿರ್ವಹಿಸಬೇಕಾಗುತ್ತದೆ. ಹಣಕಾಸಿನ ಮಾತುಕತೆಯಲ್ಲಿ ಯಾವುದೆ ಪ್ರಣಯವೂ ಇರುವುದಿಲ್ಲ. ಅದರೆ ನೀವು ನಿಮ್ಮ ಸಂಗಾತಿಯೊಂದಿಗೆ ಅಗತ್ಯವಾಗಿ ಚರ್ಚಿಸಬೇಕಾದ ವಿಷಯಗಳಲ್ಲಿ ಇದು ಒಂದಾಗಿದೆ. ನೀವು ಇದನ್ನು ಮಾಡುತ್ತೀರಿರೆಂದರೆ ಅದು ತುಂಬಾ ಒಳ್ಳೆಯ ವಿಚಾರ.

  ಮದುವೆ ಆಗುವವರಿಗೆ ಹಾಗು ದಂಪತಿಗಳಿಗೆ ಹಣಕಾಸು ಜೀವನಕ್ಕೆ ಸಂಬಂಧಿಸಿದಂತೆ ಸಹಾಯಕವಾಗಬಲ್ಲ ಕೆಲ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ..  ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

  ಹಣದ ಬಗ್ಗೆ ಸಂಗಾತಿಗಳ ಮನೋಧೋರಣೆ

  ನೀವು ನಿಮ್ಮ ವೇತನದ ಮೇಲೆ ಜೀವನ ನಡೆಸುತ್ತಿದ್ದೀರಾ? ಹಣವನ್ನು ಉಳಿತಾಯ ಮಾಡುತ್ತಿದ್ದಿರಾ? ನೀವು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುತ್ತೀರಾ? (ಷೇರು ಮಾರುಕಟ್ಟೆ ಮತ್ತು ಈಕ್ವಿಟಿ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದು) ಅಥವಾ ನೀವು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲವೆ? (ಸ್ಥಿರ ಠೇವಣಿ ಮತ್ತು ಡೆಬಿಟ್ ಫಂಡ್ಸ್). ಹೂಡಿಕೆ ಮಾಡುವ ಬಗ್ಗೆ ಯೋಜಿಸುತ್ತಿದ್ದಿರಾ? ಸಾಲದಿಂದ ಮುಕ್ತವಾಗಿರುವುದಲ್ಲಿ ವಿಶ್ವಾಸ ಹೊಂದಿದ್ದೀರಾ ಅಥವಾ ವೈಯಕ್ತಿಕ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಡೆಬ್ಟ್ ನಿರ್ವಹಣೆಯಲ್ಲಿ ಸಮಸ್ಯೆಗಳಿಲ್ಲವೆ? ಕುಟುಂಬ ಮತ್ತು ಸ್ನೇಹಿತರಿಗೆ ಹಣವನ್ನು ಸಾಲವಾಗಿ ಕೊಡುವುದು ಅಥವಾ ಪಡೆಯುವುದರಲ್ಲಿ ನಿಮ್ಮ ಪಾತ್ರವೇನು? ಇದರ ಬಗೆಗಿನ ನಿಮ್ಮ ಮನೋಧೋರಣೆ ಹಣಕಾಸು ಜೀವನದಲ್ಲಿ ಮುಖ್ಯ ಪಾತ್ರವಹಿಸುತ್ತದೆ.

  ಹಣಕಾಸಿನ ಯೋಗಕ್ಷೇಮ

  ಒಂದು ಸಾರಿ ಕೌಟುಂಬಿಕ ಜೀವನ ಪ್ರಾರಂಭಿಸಿದ ನಂತರದಲ್ಲಿ ಹಣದ ಬಗ್ಗೆ ನಿಮ್ಮ ವೈಯಕ್ತಿಕ ದೃಷ್ಟಿಕೋನ ಮತ್ತು ಧೋರಣೆ ದಂಪತಿಗಳ ಹಣಕಾಸಿನ ಯೋಗಕ್ಷೇಮಕ್ಕೆ ಭದ್ರ ಅಡಿಪಾಯ ಹಾಕಲು ಸಹಕರಿಸುತ್ತದೆ. ಮದುವೆಯಾಗುವ ಮೊದಲು ನೀವು ಈ ಮೇಲಿನ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದರೆ ಸಂತಸದ ಸಂಗತಿ. ಇಲ್ಲದಿದ್ದರೆ ಹಣಕಾಸಿ ನಿರ್ವಹಣಾ ಕಾರ್ಯಕ್ಕೆ ಈಗಲಾದರೂ ಪ್ರಾರಂಭಿಸಬೇಕಾಗುತ್ತದೆ.

  ವೈಯಕ್ತಿಕ ಮತ್ತು ಹಣಕಾಸಿನ ಗುರಿಗಳನ್ನು ಚರ್ಚಿಸಿ

  ವೈಯಕ್ತಿಕ ಗುರಿಗಳು, ಹಣಕಾಸಿನ ಗುರಿಗಳು, ಜತೆಗೆ ದೀರ್ಘಾವಧಿ ಮತ್ತು ಅಲ್ಫಾವಧಿ ಗುರಿಗಳು, ಸ್ವಯಂ ಸೇವಕರಾಗಿ ಸಾಮಾಜಿಕ ಕಾರ್ಯನಿರ್ವಹಿಸುವುದು ಒಂದೇಡೆಯಾದರೆ, ವಿಶ್ರಾಂತಿ ಅಥವಾ ಉದ್ಯೋಗ ಬದಲಾವಣೆ, ಕೌಟುಂಬಿಕ ಜೀವನದ ಆರಂಭ, ಕಾರು ಖರೀದಿ, ಮನೆ ಖರೀದಿಸುವುದು, ನಿವೃತ್ತಿ ಜೀವನದ ಯೋಜನೆ ಹೀಗೆ ಅಲ್ಪಾವಧಿ ಮತ್ತು ದೀರ್ಘಾವಾಧಿ ಗುರಿಗಳನ್ನು ನಿಗದಿಪಡಿಸಿಕೊಂಡು ಮಾಸಿಕ/ವಾರ್ಷಿಕವಾಗಿ ಅದನ್ನು ಪೂರ್ಣಗೊಳಿಸಬಹುದು. ಈ ವಿಚಾರವಾಗಿ ನಿಮ್ಮ ಯೋಜನೆ ಹಾಗೂ ಮಾರ್ಗ ಎರಡೂಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿ, ವಿಮರ್ಶಿಸಿ ಮುನ್ನಡೆಯಬೇಕಾಗುತ್ತದೆ. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ?

  ವೈಯಕ್ತಿಕ ಆಸ್ತಿ ಮತ್ತು ಹೊಣೆಗಾರಿಕೆ

  ದಂಪತಿಗಳಿಬ್ಬರೂ ತಿಂಗಳಿಗೆ ಎಷ್ಟು ಗಳಿಸುತ್ತೀರಿ, ಎಷ್ಟು ಖರ್ಚುಮಾಡುತ್ತೀರಿ, ಪ್ರತಿ ತಿಂಗಳು ಎಷ್ಟು ಉಳಿಸುತ್ತೀರಿ ಎಂಬುದನ್ನು ನಮೂದಿಸಿ. ನಿಮ್ಮ ಬ್ಯಾಂಕ್ ಖಾತೆಗಳು, ಹೂಡಿಕೆಗಳು ( ಷೇರುಗಳು, ಮ್ಯೂಚುವಲ್ ಫಂಡ್, ಚಿನ್ನ, ಆಸ್ತಿ ಮತ್ತಿತರ), ಸಂಬಳ ಹೊರತುಪಡಿಸಿದ ಆದಾಯದ ಮೂಲಗಳು, ಅಸ್ತಿತ್ವದಲ್ಲಿರುವ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಟ್ಟಿಮಾಡಿ.
  * ನೀವು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಮತ್ತು ನಿಮ್ಮ ಆಸ್ತಿ ಹಂಚಿಕೆ ಕಾರ್ಯತಂತ್ರವನ್ನ್ಜು ಯೋಜಿಸುವ ಬಗ್ಗೆ ನಿರ್ಧರಿಸಿ.
  * ವೈವಾಹಿಕ ಜೀವನವನ್ನು ಯಾವುದೇ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಠೇವಣಿಗಳಿಲ್ಲದೆ ಪ್ರಾರಭಿಸವುದು ಸೂಕ್ತವಾಗಿದೆ. ಒಂದು ವೇಳೆ ಸಾಲ ಮಾಡಿದ್ದಲ್ಲಿ ನೀವು ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಸಾಲ ತೀರಿಸಿ ಮುಕ್ತರಾಗಬೇಕು.

  ಖರ್ಚುಗಳನ್ನು ಒಟ್ಟಿಗೆ ನಿರ್ವಹಿಸಿ

  ಮದುವೆಗೆ ಮೊದಲು ವೈಯಕ್ತಿಕ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದು, ಮದುವೆಯ ನಂತರವೂ ಈ ಖಾತೆಯನ್ನು ಮುಂದುವರೆಸಬಹುದು. ಜತೆಗೆ ಒಂದು ಜಂಟಿ ಖಾತೆ ತೆರೆಯಲು ಮರೆಯದಿರಿ. ಮನೆಯ ವೆಚ್ಚಗಳನ್ನು ಉತ್ತಮವಾಗಿ ನಿರ್ವಹಿಸಲು ಸಪ್ಲಿಮೆಂಟರಿ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು.
  * ಯಾವಾಗ ಖರ್ಚು ಮಾಡಬೇಕು, ಯಾರು ಯಾವುದಕ್ಕೆ ಖರ್ಚು ಮಾಡಬೇಕು, ಸಂಬಳದ ಎಷ್ಟು ಭಾಗ ಜಂಟಿ ಖಾತೆಗೆ ಹೋಗಬೇಕು ಇವುಗಳೇಲ್ಲವೂ ವೈಕ್ತಿಕ ವಿಚಾರವಾಗಿದ್ದು, ಪ್ರತಿ ದಂಪತಿಗಳು ವಿಭಿನ್ನ ದೃಷ್ಟಿಕೋನ ಹೊಂದಿರುತ್ತಾರೆ.
  * ದಂಪತಿಗಳಿಬ್ಬರು ಕೆಲಸ ಮಾಡುತ್ತಿದ್ದಾರಾ ಅಥವಾ ಇಲ್ಲವೇ ಎಂಬುದರ ಮೇಲೆ ಬಹಳ ವಿಚಾರಗಳು ಅವಲಂಬಿಸಿರುತ್ತವೆ. ಇದನ್ನು ವ್ಯಾಖ್ಯಾನಿಸುವುದು ಹಾಗು ಒಪ್ಪಿಕೊಳ್ಳುವುದು ಬಹಳ ಮುಖ್ಯ.

  ಬಜೆಟ್ ಪ್ಲಾನ್ ಮಾಡಿ ಸರಿಯಾಗಿ ನಿರ್ವಹಿಸಿ

  ಹಣಕಾಸು ಶಿಸ್ತಿನ ಒಂದು ಪ್ರಮುಖ ಅಂಶವೆಂದರೆ ನಮ್ಮ ಬಳಿ ಇರುವ ಸಂಪನ್ಮೂಲದಲ್ಲಿಯೇ ಜೀವಿಸುವುದನ್ನು ಕಲಿತುಕೊಳ್ಳುವುದು. ನಿಮಗೆ ಹೀಗೆ ಬದುಕುವುದನ್ನು ಕಲಿಯಲು ಬಜೆಟ್ ಯೋಜನೆ ರೂಪಿಸುವುದು ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸಿ ಕೊಡುತ್ತದೆ.

  ತುರ್ತು ನಿಧಿ ಮೀಸಲಿಡಿ

  ತುರ್ತುಸ್ಥಿತಿ ಎನ್ನುವುದು ಯಾವುದೇ ಕ್ಷಣದಲ್ಲಿ ಬೇಕಾದರೂ ಸಂಭವಿಸಬಹುದು. ಅದು ನಿಮ್ಮ ಸಂಗಾತಿಯು ಕೆಲಸ ಕಳೆದುಕೊಳ್ಳುವುದು, ಆನಾರೋಗ್ಯ, ಸಾವು ಅಥವಾ ನೈಸರ್ಗಿಕ ವಿಪತ್ತುಗಳಿಂದ ನಷ್ಟವಾಗುವುದು. ಹೀಗೆ ಏನೇ ಇರಬಹುದು. ಹಾಗಾಗಿ ಅಂತಹ ಸಂದರ್ಭಗಳನ್ನು ನಿಭಾಯಿಸಲು ಅಥವಾ ಎದುರಿಸಲು ನೀವು ಆರ್ಥಿಕವಾಗಿ ಸಿದ್ದರಾಗಿರಬೇಕು.
  * ಒಮ್ಮೆ ನೀವು ನಿಮ್ಮ ಖರ್ಚುಗಳನ್ನು ಪರಿಶೀಲಿಸಿದ ನಂತರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ 6 ರಿಂದ 12 ತಿಂಗಳ ಜೀವನ ವೆಚ್ಚಕ್ಕೆ ಸಾಕಾಗುವಷ್ಟು ಹಣವನ್ನು ತುರ್ತು ನಿಧಿಯ ಭಾಗವಾಗಿ ಮೀಸಲಿಡಿ.
  * ತುರ್ತುನಿಧಿಯ ಹಣವನ್ನು ಎಲ್ಲಿ ಮತ್ತು ಹೇಗೆ ಇಟ್ಟುಕೊಳ್ಳುವುದು ಎಂಬುದು ವೈಯಕ್ತಿಕ ಆಯ್ಕೆಯಾಗಿದೆ. ಇದನ್ನು ಬೇರೆ ಉಳಿತಾಯ ಖಾತೆ, ನಿಗದಿತ ಠೇವಣಿ ಅಥವಾ ಲಿಕ್ವಿಡ್ ಫಂಡ್ ನಲ್ಲಿಡಬಹುದು.
  * ಈ ಹಣ ನಿಮ್ಮಿಬ್ಬರಿಗೂ ಸುಲಭವಾಗಿ ಲಭ್ಯವಾಗುವಂತೆ ಇರಬೇಕು ಎಂಬುದು ಇಲ್ಲಿ ಪ್ರಮುಖವಾಗಿದೆ.

  ಕಾಗದ ಪತ್ರಗಳನ್ನು ನಿರ್ವಹಿಸುವುದು

  ದೀರ್ಘಾಕಾಲದಿಂದ ಮಹಿಳೆಯರು ಸಾಮಾನ್ಯವಾಗಿ ಮದುವೆಯ ನಂತರ ತಮ್ಮ ಕೊನೆಯ ಹೆಸರನ್ನು ಬದಲಾಯಿಸುತ್ತಾರೆ. ಕೆಲವರು ಮೊದಲಿದ್ದ ಮತ್ತು ವಿವಾಹದ ನಂತರ ಬದಲಾಯಿಸಿದ ಕೊನೆಯ ಹೆಸರುಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಭವಿಷ್ಯದಲ್ಲಿ ಉಂಟಾಗುವ ತೊಂದರೆ ಮತ್ತು ಕಾಗದದ ಪತ್ರಗಳ ಕೆಲಸದಿಂದಾಗಿ ತಮ್ಮ ಹೆಸರನ್ನು ಬದಲಿಸಲು ಬಯಸುತ್ತಾರೆ. ನೀವು ಆಯ್ದುಕೊಳ್ಳುವ ಯಾವುದೇ ಆಯ್ಕೆ, ವೈವಾಹಿಕ ಸ್ಥಿತಿಯನ್ನು ಎಲ್ಲಾ ದಾಖಲೆಗಳಲ್ಲಿ ಮತ್ತು ಕೆಲಸದಲ್ಲಿ ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ನಿಮ್ಮ ಸಂಗಾತಿಯೇ ನಿಮ್ಮನ್ನು ಸಂಪರ್ಕಿಸುವ ಮುಂದಿನ ವ್ಯಕ್ತಿಯಾಗಿರುತ್ತಾರೆ.
  * ನಿವಿಬ್ಬರು ಪ್ರಸ್ತುತ ಒಂದೆ ನಗರದಲ್ಲಿ ವಾಸಿಸುತ್ತಿದ್ದೀರಾ ಅಥವಾ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೀರಾ, ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರಾ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ? ನೀವು ಪೋಷಕರೊಂದಿಗೆ ನೆಲೆಸುವಿರಾ ಅಥವಾ ಪ್ರತ್ಯೇಕವಾಗಿ ನೆಲೆಸುವಿರಾ? ಇವುಗಳ ಆಧಾರದ ಮೇಲೆ ನಿಮ್ಮ ಪಾಸ್ಪೋರ್ಟ್, ಬ್ಯಾಂಕ್, ಕ್ರೆಡಿಟ್ ಕಾರ್ಡ್, ಬ್ರೋಕರ್, ಮ್ಯೂಚುವಲ್ ಫಂಡ್ ಹಾಗು ಕೆಲಸ ಮಾಡುವ ಸಂಸ್ಥೆಯೊಂದಿಗೆ ನಿಮ್ಮ ವಿಳಾಸವನ್ನು ನವೀಕರಿಸಬೇಕು .
  * ನೀವು ಜಂಟಿ ಖಾತೆಗಳನ್ನು ನಿರ್ವಹಿಸುತ್ತಿದ್ದರೆ, ಜಂಟಿ ಇಮೇಲ್ ಐ.ಡಿ ಗೆ ಲಿಂಕ್ ಮಾಡುವುದು ಒಳ್ಳೆಯದು. ಆದರಿಂದ ಈ ಖಾತೆಗಳ ಅಥವಾ ಕಾರ್ಡ್‌ಗಳ ಎಲ್ಲ ಬಿಲ್ ಸ್ಟೇಟ್‍ಮೆಂಟ್ ಮತ್ತು ಸಂವಹನಗಳ ಬಗ್ಗೆ ನೀವಿಬ್ಬರೂ ತಿಳಿದಿರುತ್ತೀರಿ.
  * ನೀವು ಮದುವೆಯಾಗುವುದಕ್ಕೆ ಮೊದಲು ನಿಮ್ಮ ಎಲ್ಲಾ ಬ್ಯಾಂಕ್, ವಿಮೆ ಮತ್ತು ಹೂಡಿಕೆಯ ಖಾತೆಗಳಿಗೆ ನಿಮ್ಮ ತಾಯಿ ಅಥವಾ ನಿಮ್ಮ ತಂದೆ ಫಲಾನುಭವಿಗಳಾಗಿರುತ್ತಾರೆ. ಮದುವೆಯ ನಂತರ ಇದನ್ನು ನೀವು ನಿಮ್ಮ ಸಂಗಾತಿಯ ಹೆಸರಿಗೆ ಬದಲಾಯಿಸಬಹುದು.
  * ಕೊನೆಯ ಹೆಸರು ತಪ್ಪಾಗುವುದು, ತಪ್ಪು ವಿಳಾಸ ಮತ್ತು ಫಲಾನುಭವಿಯ ಹೆಸರು ಇವುಗಳ ಕಾರಣದಿಂದ ಉಂಟಾಗುವ ಸಮಸ್ಯೆಯನ್ನು ತಪ್ಪಿಸಲು ಸರಿಯಾದ ಮತ್ತು ನವೀಕರಿಸಿದ ಕಾಗದಪತ್ರಗಳು ಮುಖ್ಯವಾಗುತ್ತವೆ.

  ನಿಮ್ಮ ವಿಮಾ ರಕ್ಷಣೆಯನ್ನು (ವಿಮಾ ಕವರೇಜ್) ಪರಿಶೀಲಿಸಿ

  ನೀವು ಜೀವ ವಿಮಾ ಪಾಲಿಸಿಯನ್ನು ಹೊಂದಿದ್ದೀರಾ? ಆ ಕವರೇಜ್ ಸಮರ್ಪಕವಾಗಿದೆಯೆ ಅಥವಾ ಅದನ್ನು ಹೆಚ್ಚಿಸಬೇಕೇ ಎಂದು ಪರೀಕ್ಷಿಸಿ. ಒಂದು ಅವಧಿಯ ವಿಮಾ ಪಾಲಿಸಿ ಉತ್ತಮವಾದದ್ದು. ನಿಮಗೆ ಆರೋಗ್ಯ ವಿಮಾ ಪಾಲಿಸಿ ಸಹ ಇದ್ದು ಅದನ್ನು ಸ್ವತಃ ನೀವು ಅಥವಾ ನೀವು ಕೆಲಸ ಮಾಡುವ ಸಂಸ್ಥೆಯ ಮೂಲಕ ತೆಗೆದುಕೊಳ್ಳಬಹುದು. ಮದುವೆಯ ನಂತರ ನಿಮ್ಮ ವಿಮಾ ಕವರೇಜ್ ಅನ್ನು ಹೆಚ್ಚಿಸಬಹುದು ಅಥವಾ ವೈಯಕ್ತಿಕ ಪಾಲಿಸಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಕುಟುಂಬದ ಪ್ಲೋಟರ್ ಆರೋಗ್ಯ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಬಹುದು.
  * ನಿಮ್ಮ ಪೋಷಕರು ಆರ್ಥಿಕವಾಗಿ ನಿಮ್ಮ ಮೇಲೆ ಅವಲಂಬಿತರಾಗಿದ್ದರೆಯೇ ಅಥವಾ ಅವರಿಗೆ ತಮ್ಮದೆ ಆದಾಯದ ಮೂಲಗಳಿವೆಯೆ? ಅವರು ಆರೋಗ್ಯ ವಿಮಾ ಯೋಜನೆಗೆ ಒಳಪಟ್ಟಿದ್ದಾರೆಯೇ? ಅವರಿಗೆ ವಯಸ್ಸಾದಂತೆ ಚಿಕಿತ್ಸೆಯ ಮತ್ತು ಔಷಧಿಗಳ ವೆಚ್ಚವೂ ಸಹ ಇರುತ್ತದೆ. ಮತ್ತು ಅದಕ್ಕೆ ನೀವು ಒಂದು ನಿಬಂಧನೆಯನ್ನು ಮಾಡಬೇಕಾಗಬಹುದು. ಹಿರಿಯ ನಾಗರಿಕರಿಗೆ ಹಲವಾರು ಆರೋಗ್ಯ ವಿಮಾ ಯೋಜನೆಗಳಿವೆ, ಪ್ರೀಮಿಯಂಗಳು ಅಧಿಕವಾಗಿದ್ದರೂ ಅದರ ಕವರೇಜ್ ಯೋಗ್ಯವಾಗಿರುತ್ತದೆ.
  * ಕನಿಷ್ಟ ಪ್ರಮಾಣದ ಕವರೇಜ್, ನಕಲಿ ಕವರೇಜ್ ಅಥವಾ ತಪ್ಪಿಹೋಗುವ ಕವರೇಜ್ ಗಳನ್ನು ಪರಿಶೀಲಿಸಿ ಮತ್ತು ಅಂತರವನ್ನು ಭರ್ತಿಮಾಡಿ.

  ಹಣಕಾಸಿನ ವಿಚಾರ ಅರಿತುಕೊಳ್ಳಿ ಮತ್ತು ಪರಸ್ವರ ನಂಬಿ

  ತುಂಬಾ ಸಾಮಾನ್ಯವಾಗಿ, ವಿಶೇಷವಾಗಿ ಭಾರತದಂತಹ ಸಾಂಪ್ರದಾಯಿಕ ಕುಟುಂಬಗಳಲ್ಲಿ ಹಣಕಾಸು ಮತ್ತು ಹೂಡಿಕೆಗಳನ್ನು ಪತಿಯೇ ನಿರ್ವಹಿಸುವುದು ಸಾಮಾನ್ಯವಾಗಿದೆ. ಪತ್ನಿಯರಿಗೆ ದಿನನಿತ್ಯದ ಖರ್ಚುಗಳನ್ನು ಹೊರತುಪಡಿಸಿ ಬೇರೆ ಹಣದ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ. ತುರ್ತು ಪರಿಸ್ಥಿತಿ ಇದ್ದರೆ ಇದು ತೊಂದರೆಯಾಗಬಹುದು. ಏಕೆಂದರೆ ಆಕೆಯೂ ಕುಟುಂಬದ ಹಣಕಾಸು, ಬಾಕಿ ಸಾಲಗಳು/ಬಿರ್ಲ ಗಳು, ವಿಮಾ ಕವರೇಜ್, ವಿಲ್ ಅಸ್ತಿತ್ವ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ. 

  * ಪ್ರಾರಂಭದಿಂದಲೇ ಹಣಕಾಸು ಮತ್ತು ದಾಖಲಾತಿ ಕಾಗದ ಪತ್ರಗಳ ವಿಚಾರವಾಗಿ ಇಬ್ಬರಿಗೂ ತಿಳಿದಿರಬೇಕಾಗುತ್ತದೆ. ಇಲ್ಲದಿದ್ದರೆ ಮುಂದೊಂದು ದಿನ ಪರಸ್ಪರ ಇಬ್ಬರಲ್ಲಿ ಜಗಳ ಮತ್ತು ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಅದು ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು.

  English summary

  How to save money as a married couple, here is couples financial planning

  Marriage is a landmark event in one's life. But after the initial euphoria comes the realisation that from now on you have to adjust to a whole new way of living which includes managing your finances.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more