For Quick Alerts
ALLOW NOTIFICATIONS  
For Daily Alerts

ಜಿಯೋಗೆ ತಿರುಗೇಟು! ರೂ. 1,399 ಬೆಲೆಗೆ ಏರ್ಟೆಲ್ 4G ಸ್ಮಾರ್ಟ್ಫೋನ್ ಲಭ್ಯ!!

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್, ಮೊಬೈಲ್ ತಯಾರಿಕಾ ಕಾರ್ಬನ್ ಮೊಬೈಲ್ಸ್ ಇಂಡಿಯಾ ಸಹಯೋಗದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ.

By Siddu
|

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್, ಮೊಬೈಲ್ ತಯಾರಿಕಾ ಕಾರ್ಬನ್ ಮೊಬೈಲ್ಸ್ ಇಂಡಿಯಾ ಸಹಯೋಗದಲ್ಲಿ ಅತಿ ಕಡಿಮೆ ಬೆಲೆಯ 4G ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ.

 

ರಿಲಾಯನ್ಸ್ ಸಂಸ್ಥೆ ಜಿಯೋಫೋನ್ ಪರಿಚಯಿಸಿದ ನಂತರ ಜಿಯೋಗೆ ತಿರುಗೇಟು ನೀಡಲು ಏರ್ಟೆಲ್, ಐಡಿಯಾ, ಬಿಎಸ್ಎನ್ಎಲ್ ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಜಿಯೋ ಫೋನ್ ಮೂಲಕ ಟಿವಿ ಕನೆಕ್ಷನ್ ಸಾಧ್ಯ

ಫೋನ್ ಬೆಲೆ

ಫೋನ್ ಬೆಲೆ

ಕಾರ್ಬನ್‌ A40' ಸ್ಮಾರ್ಟ್‌ಫೋನ್ ರೂ. 1,399 ದೊರೆಯಲಿದೆ ಎಂದು ಏರ್ಟೆಲ್ ಹೇಳಿದೆ. ಆರಂಭದಲ್ಲಿ ಗ್ರಾಹಕರು ರೂ. 2,899 ಪಾವತಿಸಬೇಕು. ಉಳಿದ ಮೊತ್ತ ಕ್ಯಾಶ್ ಬ್ಯಾಕ್ ರೂಪದಲ್ಲಿ ಮರು ಪಾವತಿಸಲಾಗುತ್ತದೆ.

ತಿಂಗಳ ರೀಚಾರ್ಜ್‌ ಪ್ಲಾನ್

ತಿಂಗಳ ರೀಚಾರ್ಜ್‌ ಪ್ಲಾನ್

ಪ್ರತಿ ತಿಂಗಳೂ ಮೂರು ವರ್ಷಗಳವರೆಗೆ ರೂ. 169 ರೀಚಾರ್ಜ್ ಮಾಡಿಸಬೇಕು. ಒಂದೂವರೆ ವರ್ಷಗಳ ನಂತರ ರೂ. 500 ಹಾಗೂ 3 ವರ್ಷಗಳ ನಂತರ ರೂ. 1000 ಮೊತ್ತ ಮರುಪಾವತಿ ಮಾಡಲಾಗುತ್ತದೆ.

ರೀಚಾರ್ಜ್ ಮಾಡಿಸದಿದ್ದರೆ?
 

ರೀಚಾರ್ಜ್ ಮಾಡಿಸದಿದ್ದರೆ?

ಕೆಲ ಗ್ರಾಹಕರಿಗೆ ಪ್ರತಿ ತಿಂಗಳೂ ರೂ. 169 ರೀಚಾರ್ಜ್ ಮಾಡಿಸಲು ಇಷ್ಟ ಇರುವುದಿಲ್ಲ. ಅಂತಹ ಗ್ರಾಹಕರು ತಮಗೆ ಇಷ್ಟದ ದರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರು ತಮಗೆ ಬರಬೇಕಾದ ನಗದನ್ನು ಮರಳಿ ಪಡೆಯಲು 18 ತಿಂಗಳ ಅವಧಿಯಲ್ಲಿ ಮೂರು ಸಾವಿರ ಮೊತ್ತದ ರೀಚಾರ್ಜ್ ಮಾಡಿಸಬೇಕಾಗುತ್ತದೆ ಎಂದು ಏರ್ಟೆಲ್ ತಿಳಿಸಿದೆ.

ಏರ್ಟೆಲ್ ಸ್ಮಾರ್ಟ್ಫೋನ್ ವೈಶಿಷ್ಟತೆ

ಏರ್ಟೆಲ್ ಸ್ಮಾರ್ಟ್ಫೋನ್ ವೈಶಿಷ್ಟತೆ

* ಟಚ್‌ಸ್ಕ್ರೀನ್‌
* ಎರಡು ಸಿಮ್‌ ಸೌಲಭ್ಯ
* ಗುಣಮಟ್ಟದ ಕ್ಯಾಮರಾ
* ಯೂಟ್ಯೂಬ್‌
* ವಾಟ್ಸ್ ಆಪ್ ಮತ್ತು ಫೇಸ್ಬುಕ್‌ ಸೌಲಭ್ಯ

ಏರ್ಟೆಲ್ ಫೋನ್ - ಜಿಯೋಫೋನ್ ಹೋಲಿಕೆ

ಏರ್ಟೆಲ್ ಫೋನ್ - ಜಿಯೋಫೋನ್ ಹೋಲಿಕೆ

ಏರ್ಟೆಲ್ ಕಾರ್ಬನ್ ಎ40 ಹಾಗು ರಿಲಯನ್ಸ್ ಜಿಯೋಫೋನ್ ವೈಶಿಷ್ಟ್ಯಗಳ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ.

50 ಕೋಟಿ ಗ್ರಾಹಕರ ಗುರಿ!

50 ಕೋಟಿ ಗ್ರಾಹಕರ ಗುರಿ!

ಜಿಯೋಫೋನ್ ಈಗಾಗಲೇ 50 ಕೋಟಿ ಗ್ರಾಹಕರನ್ನು ಪಡೆಯುವ ಗುರಿ ಹೊಂದಿದೆ. ಏರ್ಟೆಲ್ ಕೂಡ 50 ಕೋಟಿ ಗ್ರಾಹಕರ ಗುರಿ ಹೊಂದಿದೆ! ಜಿಯೋ ಸ್ಮಾರ್ಟ್ಫೋನ್ ಬಿಡುಗಡೆ ನಂತರ ಏರ್ಟೆಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿರುವುದರಿಂದ ತನ್ನ ಗ್ರಾಹಕರನ್ನು ಉಳಿಸಲು ಅಗ್ಗ ಬೆಲೆಯಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಅಗತ್ಯವಿದೆ!

ಬಿಎಸ್ಎನ್ಎಲ್ ಫೋನ್ ಬರಲಿದೆ!

ಬಿಎಸ್ಎನ್ಎಲ್ ಫೋನ್ ಬರಲಿದೆ!

ಜಿಯೋ, ಏರ್ಟೆಲ್ ಗೆ ಸವಾಲು! ಕೇವಲ ರೂ. 2000 ಬೆಲೆಗೆ ಬಿಎಸ್ಎನ್ಎಲ್ ಫೋನ್ ಲಾಂಚ್!!ಜಿಯೋ, ಏರ್ಟೆಲ್ ಗೆ ಸವಾಲು! ಕೇವಲ ರೂ. 2000 ಬೆಲೆಗೆ ಬಿಎಸ್ಎನ್ಎಲ್ ಫೋನ್ ಲಾಂಚ್!!

English summary

Airtel-Karbonn 4G smartphone to take on Reliance Jio Phone

India’s largest telecom company Bharti Airtel Ltd has tied up with Karbonn Mobile India Pvt. Ltd to introduce an affordable 4G smartphone, taking on Reliance Jio Infocomm Ltd’s 4G-enabled feature phone.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X