ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಹೊಸ ಆನ್ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಹೊಸ ಆನ್ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ.
ಇಪಿಎಫ್ಒ ಸದಸ್ಯರು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮತ್ತು ಇತರ ಸಂಬಂಧಿತ ವಿವರಗಳನ್ನು ತಮ್ಮ ಆಧಾರ್ ಸಂಖ್ಯೆಗೆ ಆನ್ಲೈನ್ ಮೂಲಕ ಲಿಂಕ್ ಮಾಡಬಹುದು. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?
ಪ್ರಯೋಜನ
ಉದ್ಯೋಗ ಬದಲಾವಣೆ ಸಂದರ್ಭ
ಯುಎನ್ಎನ್ 12-ಅಂಕಿಯ ಪೋರ್ಟಬಲ್ ಸಂಖ್ಯೆಯಾಗಿದ್ದು, ಇಪಿಎಫ್ ಚಂದಾದಾರರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಉದ್ಯೋಗಗಳನ್ನು ಬದಲಿಸಿದಾಗಲೂ ಯುಎನ್ಎನ್ ಸಂಖ್ಯೆ ಉಪಯೋಗಕಾರಿಯಾಗಿದೆ.
ಯುಎಎನ್ ಲಿಂಕ್ ಯಾಕೆ?
ಪಿಎಫ್ ಖಾತೆ ಬ್ಯಾಲೆನ್ಸ್ ಪರಿಶೀಲಿಸಲು, ಪಿಎಫ್ ಕ್ಲೈಮ್ ಗಳನ್ನು ಸಲ್ಲಿಸಲು ಅಥವಾ ಪಿಎಫ್ ಖಾತೆಗಳಿಂದ ಸ್ವಲ್ಪ ಹಣ ವಿತ್ ಡ್ರಾ ಮಾಡುವಂತಹ ಹಲವು ಆನ್ಲೈನ್ ಸೇವೆಗಳನ್ನು ಪಡೆಯಲು ಯುಎಎನ್ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಬೇಕಿರುವುದು ಇಪಿಎಫ್ಓ ಸಂಸ್ಥೆಗೆ ಕಡ್ಡಾಯವಾಗಿ ಅಗತ್ಯವಿದೆ.
ಆಧಾರ್ ಜತೆ UAN ಲಿಂಕ್ ಮಾಡೋದು ಹೇಗೆ?
ಆಧಾರ್ ಮತ್ತು ಯುಎಎನ್ ಜೋಡಣೆಗಾಗಿ ಆನ್ಲೈನ್ ಸೌಲಭ್ಯವನ್ನು ಬಳಸಿ, ಈ ಹಂತಗಳನ್ನು ಅನುಸರಿಸಿ..
1. ಇಪಿಎಫ್ಒ ವೆಬ್ಸೈಟ್ www.epfindia.com ಗೆ ಭೇಟಿ ನೀಡಿ.
2. ವೆಬ್ಸೈಟ್ ನ ಮುಖಪುಟದಲ್ಲಿ 'ಆನ್ಲೈನ್ ಸೇವೆಗಳು' ವಿಭಾಗಕ್ಕೆ ಹೋಗಿ
3. 'ಆನ್ಲೈನ್ ಸೇವೆಗಳು' ಅಡಿಯಲ್ಲಿ 'ಇ-ಕೆವೈಸಿ ಪೋರ್ಟಲ್' ಕ್ಲಿಕ್ ಮಾಡಿ
4. ನಂತರ 'ಲಿಂಕ್ ಯುಎನ್ ಆಧಾರ್' ಮೇಲೆ ಕ್ಲಿಕ್ ಮಾಡಿ.
5. ಅಗತ್ಯ ಮಾಹಿತಿ ತುಂಬಿ, 'Genearate OTP' ಬಟನ್ ಕ್ಲಿಕ್ ಮಾಡಿ.
6. ನೀವು ಸ್ವೀಕರಿಸುವ OTP ಯನ್ನು ನಮೂದಿಸಿ, ನಂತರ ನಿಮ್ಮ ಆಧಾರ್ ಸಂಖ್ಯೆ ನಿಗದಿತ ಸ್ಥಳದಲ್ಲಿ ನಮೂದಿಸಿ
7. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ


Click it and Unblock the Notifications