ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ, ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..

ದೀಪಾವಳಿ ಭಾಗವಾಗಿ ಜಿಯೋ ತನ್ನ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಪ್ಲಾನ್ ಗಳನ್ನು ಪರಿಷ್ಕರಿಸಿದೆ. ಇಲ್ಲಿ ಜಿಯೋ ಘೋಷಿಸಿರುವ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಯೋಜನೆಗಳ ಸಂಪೂರ್ಣ ವಿವರ ನೀಡಲಾಗಿದೆ.

ಜಿಯೋ ಘೋಷಿಸಿರುವ ಹೊಸ ಯೋಜನೆಗಳು ದುಬಾರಿಯಾಗಿವೆ ಎಂದೇ ಹೇಳಬಹುದು. ಜಿಯೋ ದೀಪಾವಳಿ ಭಾಗವಾಗಿ ಈಗಾಗಲೇ ಇರುವ ತನ್ನ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಪ್ಲಾನ್ ಗಳನ್ನು ಪರಿಷ್ಕರಿಸಿದ್ದು, ರೂ. 399ರ ಧನ್ ಧನಾ ಧನ್ ಯೋಜನೆ ಒಳಗೊಂಡಂತೆ ಎಲ್ಲಾ ಯೋಜನೆಗಳು ಮೊದಲಿಗಿಂತಲೂ ದುಬಾರಿಯಾಗಿವೆ. ಜಿಯೋಗೆ ತಿರುಗೇಟು! ರೂ. 1,399 ಬೆಲೆಗೆ ಏರ್ಟೆಲ್ 4G ಸ್ಮಾರ್ಟ್ಫೋನ್ ಲಭ್ಯ!!

ಇಲ್ಲಿ ಜಿಯೋ ಘೋಷಿಸಿರುವ ಹೊಸ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಯೋಜನೆಗಳ ಸಂಪೂರ್ಣ ವಿವರ ನೀಡಲಾಗಿದೆ..

ಯೋಜನೆಗಳು ದುಬಾರಿ ಹೇಗೆ?

ಯೋಜನೆಗಳು ದುಬಾರಿ ಹೇಗೆ?

ಹೊಸ ಟ್ಯಾರಿಪ್ ಅಡಿ ಪೊಸ್ಟ್ ಪೇಡ್ ಗ್ರಾಹಕರು ಮೊದಲಿಗಿಂತಲೂ ಕಡಿಮೆ ವ್ಯಾಲಿಡಿಟಿ ಪಡೆಯಲಿದ್ದಾರೆ. ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಚಂದಾದಾರರು ಹಿಂದಿನ 128kbps ವೇಗದಿಂದ 64kbps ವೇಗ (FUP) ಪಡೆದುಕೊಳ್ಳಲಿದ್ದಾರೆ. ಮುಖ್ಯವಾಗಿ ರೂ. 399ರ ಧನ್ ಧನಾ ಧನ್ ಆಫರ್ ಬೆಲೆ ಶೇ. 15ರಷ್ಟು ಏರಿಕೆಯಾಗಲಿದೆ. ಜಿಯೋ ದೀಪಾವಳಿ ಧಮಾಕಾ! ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್!!

ಜಿಯೋ ಪ್ರಿಪೇಯ್ಡ್ ಯೋಜನೆಗಳು

ಜಿಯೋ ಪ್ರಿಪೇಯ್ಡ್ ಯೋಜನೆಗಳು

ರೂ. 52

ಈ ಯೋಜನೆಯಲ್ಲಿ ಯಾವುದೂ ಬದಲಾಗಿಲ್ಲ. ಬಳಕೆದಾರರು ಅತಿ ವೇಗದ 150MB ಡೇಟಾ ಕ್ಯಾಪ್ ಬಳಸಬಹುದು. ಏಳು ದಿನಗಳ ಅವಧಿಗೆ ಒಟ್ಟು 1.05GB ಡೇಟಾ, 70 ಎಸ್ಎಂಎಸ್ ಮತ್ತು ಉಚಿತ ಕರೆಗಳನ್ನು ಪಡೆಯಬಹುದು.

ರೂ. 98

ರೂ. 98

ನೀವು ಕಡಿಮೆ ಬೆಲೆಯ ಆಯ್ಕೆಗಾಗಿ ನೋಡುತ್ತಿದ್ದಲ್ಲಿ ಈ ಪ್ಲಾನ್ ಉತ್ತಮ. ಇದು 2.1 ಜಿಬಿ ಡೇಟಾವನ್ನು 14 ದಿನಗಳ ಅವಧಿಗೆ ನೀಡುತ್ತಿದ್ದು, ಪ್ರತಿ ದಿನಕ್ಕೆ 150MB ಬಳಸಬಹುದು.

ರೂ. 149

ರೂ. 149

ಈ ಯೋಜನೆಯಲ್ಲಿ ಜಿಯೋ 4.2GB ಡೇಟಾವನ್ನು ನೀಡುತ್ತದೆ. ದಿನಕ್ಕೆ ಹೆಚ್ಚಿನ ವೇಗದ 150MB ಡೇಟಾವನ್ನು ಬಳಸಬಹುದು. ಉಳಿದಂತೆ ಪ್ರತಿದಿನ 100 SMS ಗಳ ಬದಲಿಗೆ, ಕೇವಲ 300 ಉಚಿತ ಟೆಕ್ಸ್ಟ್ (free text messages) ಸಂದೇಶಗಳನ್ನು ಪಡೆಯುತ್ತೀರಿ.

ರೂ. 399

ರೂ. 399

ಜಿಯೋ ಧನ್ ಧನಾ ಧನ್ ಯೋಜನೆ ರೂ. 399 ಪ್ಲಾನ್ ನ ಬೆಲೆ ಪರಿಷ್ಕರಣೆ ಮಾಡಿದ ನಂತರ, ಇದರ ವ್ಯಾಲಿಡಿಟಿಯನ್ನು ಕಡಿತಗೊಳಿಸಿದ್ದು, 70 ದಿನಗಳಿಗೆ ಇಳಿಸಿದೆ. ಉಳಿದಂತೆ ಇತರ ಪ್ರಯೋಜನಗಳು ಮೊದಲಿನಂತೆಯೇ ಇರಲಿವೆ.

ರೂ. 459

ರೂ. 459

ಈ ಹೊಸ ಯೋಜನೆಯು ಅಸ್ತಿತ್ವದಲ್ಲಿರುವ 399 ಯೋಜನೆಯ ಬದಲಿ ಯೋಜನೆಯಾಗಿದೆ. ಸಲ್ಪ ಹೆಚ್ಚು ಮೊತ್ತದೊಂದಿಗೆ ಇದು ಪ್ರತಿದಿನ 1gb ಡೇಟಾವನ್ನು 84 ದಿನಗಳ ಅವಧಿವರೆಗೆ ಒದಗಿಸುತ್ತದೆ.

ರೂ. 509

ರೂ. 509

ಈ ಯೋಜನೆಯಲ್ಲಿ ಗ್ರಾಹಕರು ಹೆಚ್ಚಿನ ಡೇಟಾವನ್ನು ಬಳಕೆ ಮಾಡಬಹುದು. ಹೆಚ್ಚು ಡೇಟಾ ಬಳಸುವವರಿಗೆ ಇದು ಅನುಕೂಲ. ದಿನಕ್ಕೆ 2GB 4G ಡೇಟಾವನ್ನು ಮತ್ತು 49 ದಿನಗಳ ಅವಧಿಗೆ ನೀಡುತ್ತದೆ. ಅವಧಿಯಲ್ಲಿ ಒಟ್ಟು 98 ಜಿಬಿ ಡೇಟಾವನ್ನು ಬಳಸಬಹುದು.

ರೂ. 999

ರೂ. 999

90 ದಿನಗಳ ಅವಧಿ ಹೊಂದಿರುವ ಈ ಯೋಜನೆಯಲ್ಲಿ 60gb ಡೇಟಾ ಲಭ್ಯವಿದ್ದು, ದಿನವೊಂದಕ್ಕೆ ಎಷ್ಟು ಡೇಟಾ ಬೇಕಾದರೂ ಬಳಸಬಹುದು.

ರೂ. 1,999

ರೂ. 1,999

ಈ ಯೋಜನೆಯು 180 ದಿನಗಳ ವ್ಯಾಲಿಡಿಟಿಯೊಂದಿಗೆ 125GB ಡೇಟಾವನ್ನು ನೀಡುತ್ತದೆ. ಉಚಿತ ಕರೆಗಳು (ರೋಮಿಂಗ್ ಸೇರಿ) ಮತ್ತು ಪ್ರತಿದಿನ 100 SMS ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ.

ರೂ. 4,999

ರೂ. 4,999

ಈ ಯೋಜನೆಯಡಿ ಅತಿವೇಗದ 350gb ಡೇಟಾವನ್ನು 360 ದಿನಗಳ ಅವಧಿಗೆ ನೀಡಲಾಗುತ್ತದೆ. ಉಚಿತ ಕರೆಗಳು (ರೋಮಿಂಗ್ ಸೇರಿ) ಮತ್ತು ಪ್ರತಿದಿನ 100 SMS ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ. ಡೇಟಾ ಬಳಕೆಗೆ ದೈನಂದಿನ ಮಿತಿ ಇಲ್ಲ.

ರೂ. 9,999

ರೂ. 9,999

ಇದು ಪ್ರಿಪೇಯ್ಡ್ ಬಳಕೆದಾರರಿಗೆ ಅತ್ಯಂತ ದುಬಾರಿ ಯೋಜನೆ. ರೂ. 9,999 ಯೋಜನೆ ಅಡಿ ಗ್ರಾಹಕರು 750GB ಡೇಟಾವನ್ನು 360 ದಿನಗಳವರೆಗೆ ಪಡೆಯಬಹುದು. ಉಚಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+