ಜಿಯೋ ಮಹಿಮೆ! ಏರ್ಟೆಲ್ ನಿಂದ ಅನಿಯಮಿತ ಕರೆ, 70GB ಡೇಟಾ ಆಫರ್

ಜಿಯೋ ಎಂಟ್ರಿ ಕೊಟ್ಟ ನಂತರದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಆಫರ್ ಗಳದ್ದೆ ಮೇಲೋಗರ..! ಗ್ರಾಹಕರಿಗೆ ಭರ್ಜರಿ ಕೊಡುಗೆಗಳ ರಸದೌತಣ! ಟೆಲಿಕಾಂ ಸಂಸ್ಥೆಗಳಿಗೆ ಉಳಿವು-ಅಳಿವಿನ ಕಚಗುಳಿ! ಏರ್ಟೆಲ್ ಇದೀಗ ಹೊಸ ಯೋಜನೆಯನ್ನು ಘೋಷಿಸಿದೆ..

ಜಿಯೋ ಎಂಟ್ರಿ ಕೊಟ್ಟ ನಂತರದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಆಫರ್ ಗಳದ್ದೆ ಮೇಲೋಗರ..! ಗ್ರಾಹಕರಿಗೆ ಭರ್ಜರಿ ಕೊಡುಗೆಗಳ ರಸದೌತಣ! ಟೆಲಿಕಾಂ ಸಂಸ್ಥೆಗಳಿಗೆ ಉಳಿವು-ಅಳಿವಿನ ಕಚಗುಳಿ!

ತಮ್ಮ ಅಸ್ತಿತ್ವಕ್ಕಾಗಿ ಹಾಗು ಗ್ರಾಹಕರನ್ನು ಉಳಿಸುವುದಕ್ಕಾಗಿ ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ದರ ಸಮರದ ಪೈಪೋಟಿ ಏರ್ಪಟ್ಟಿದೆ. ಕೆಲ ಕಂಪನಿಗಳು ತಮ್ಮ ಉಳಿವಿಕೆಗಾಗಿ ಪರದಾಡುತ್ತಿವೆ. ಪರದಾಡುತ್ತಲೇ ಹೋರಾಡುತ್ತಿವೇ! ಅಂತೂ ಇಂತೂ Survival of the Fittest. ಸಮರ್ಥನಿಗೆ ಮಾತ್ರ ಉಳಿಗಾಲ ಅನ್ನೋದು ಸತ್ಯ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ಇದೀಗ ಹೊಸ ಯೋಜನೆಯನ್ನು ಘೋಷಿಸಿದೆ. ಈ ಪ್ಲಾನ್ ಏನು ಪ್ರಯೋಜನಗಳನ್ನು ಒಳಗೊಂಡಿದೆ ನೋಡೋಣ ಬನ್ನಿ...

ರೂ. 448 ಪ್ಲಾನ್

ರೂ. 448 ಪ್ಲಾನ್

ಏರ್ಟೆಲ್ ಈಗ ಹೊಸದಾಗಿ ರೂ. 448 ಪ್ಲಾನ್ ಘೋಷಿಸಿದೆ. ಇದರಲ್ಲಿ ಅನಿಯಮಿತ ಕರೆ ಮತ್ತು ಪ್ರತಿ ದಿನ 1gb ಡೇಟಾ ನೀಡಲಿದೆ. ಇದು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 70gb ಡೇಟಾ ಪ್ರಯೋಜನ ಸಿಗಲಿದೆ. ಏರ್ಟೆಲ್ ನಿಂದ ಕೇವಲ ರೂ. 5, 8 ದರದಲ್ಲಿ ಮಸ್ತ್ ಆಫರ್!!

ಜಿಯೋಗೆ ಕೌಂಟರ್!

ಜಿಯೋಗೆ ಕೌಂಟರ್!

ರಿಲಯನ್ಸ್ ಜಿಯೋ ಈಗಾಗಲೇ ರೂ. 399ರ ಧನ್ ಧನಾ ಧನ್ ಆಫರ್ ಘೊಷಿಸಿದೆ. ಈ ಆಫರ್ ಪರ್ಯಾಯವಾಗಿ ಗ್ರಾಹಕರನ್ನು ಆಕರ್ಷಿಸಲು ಏರ್ಟೆಲ್ ಹೊಸ ರೂ. 448 ಯೋಜನೆಯನ್ನು ಪರಿಚಯಿಸಿದೆ. ಜಿಯೋ ನೀಡುವ ಆಫರ್ ಸಮರ್ಥವಾಗಿ ಎದುರಿಸಲು ಸಿದ್ದವಾಗಿದ್ದು, ಪ್ರತಿ ಹಂತದಲ್ಲೂ ಸೆಡ್ಡು ಹೊಡೆಯುತ್ತಲೇ ಇದೆ ಅನ್ನಬಹುದು.

ರೂ. 448 ಟ್ಯಾರಿಫ್ ಪ್ಲಾನ್ ಲಾಭ

ರೂ. 448 ಟ್ಯಾರಿಫ್ ಪ್ಲಾನ್ ಲಾಭ

ಏರ್ಟೆಲ್ ಪರಿಚಯಿಸುತ್ತಿರುವ ರೂ. 448 ಟ್ಯಾರಿಫ್ ಪ್ಲಾನ್ ಪ್ರೀಪೇಯ್ಡ್ ಚಂದಾದಾರರಿಗೆ ಹೆಚ್ಚು ಅನುಕೂಲಕರವಿದ್ದು, ಪ್ರತಿದಿನಕ್ಕೆ 34/4G ವೇಗದ 1GB ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ. ಇದು ಏರ್ಟೆಲ್ ಧ್ವನಿ ಕರೆ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತಿದೆ. ಆದಾಗ್ಯೂ ಧ್ವನಿ ಕರೆಗಳು ದಿನಕ್ಕೆ 300 ನಿಮಿಷ, ವಾರಕ್ಕೆ 1200 ನಿಮಿಷಗಳವರೆಗೆ ಸೀಮಿತವಾಗಿವೆ. ಪ್ರತಿದಿನಕ್ಕೆ 100 SMS ಉಚಿತವಾಗಿ ನೀಡಲಿದೆ. ಏರ್ಟೆಲ್ VS ಜಿಯೋ! ಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆಗೆ ವೇದಿಕೆ ಸಿದ್ದತೆ

ಗ್ರಾಹಕರೆ ಗಮನಿಸಿ

ಗ್ರಾಹಕರೆ ಗಮನಿಸಿ

ಆಯ್ದ ಏರ್ಟೆಲ್ ಪ್ರಿಪೇಡ್ ಗ್ರಾಹಕರಿಗೆ ರೂ. 448 ಯೋಜನೆ ಮಾನ್ಯವಾಗಿದೆ ಎಂದು ಗಮನಿಸಬೇಕು. ನಿಮ್ಮ ಸ್ಮಾರ್ಟ್ಫೋನ್ ನಲ್ಲಿರುವ MyAirtel ಅಪ್ಲಿಕೇಶನ್ ಮೂಲಕ ಈ ಟ್ಯಾರಿಪ್ ಯೋಜನೆಯನ್ನು ಪ್ರವೇಶಿಸಬಹುದು. Google Play Store ಅಥವಾ Apple Apps Store ನಿಂದ ಉಚಿತ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು.

ಐಡಿಯಾ 70GB ಡೇಟಾ ಆಫರ್

ಐಡಿಯಾ 70GB ಡೇಟಾ ಆಫರ್

ಐಡಿಯಾ ಕೂಡ ರೂ. 398 ಪ್ಲಾನ್ ಅಡಿಯಲ್ಲಿ ಅನಿಯಮಿತ ಧ್ವನಿ ಕರೆ, ಪ್ರತಿದಿನ 3g/4g ವೇಗದ 1GB ಡೇಟಾ ನೀಡಲಿದೆ. ಇದು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 70GB ಡೇಟಾ ಸಿಗಲಿದೆ. ಜಿಯೋ ನೀಡುತ್ತಿರುವ ರೂ. 399 ಮತ್ತು ಏರ್ಟೆಲ್ ನ ರೂ. 448 ಪ್ಲಾನ್ ಗೆ ಪರ್ಯಾಯವಾಗಿ ಈ ಆಫರ್ ಘೋಷಿಸಿದೆ. ಗ್ರಾಹಕರು ಈ ಪ್ಲಾನ್ ನಅಡಿಯಲ್ಲಿ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಮಾಡಬಹುದಾಗಿದೆ. ಆದರೆ ಎಸ್ಎಂಎಸ್ ಸೌಲಭ್ಯ ಲಭ್ಯವಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+