ಜಿಯೋಗೆ ತಿರುಗೇಟು! ಏರ್ಟೆಲ್ ಘೋಷಿಸಿದೆ ಎರಡು ಹೊಸ ಯೋಜನೆ

ಜಿಯೋ ಅತಿ ಕಡಿಮೆ ಮತ್ತು ಉಚಿತ ಕೊಡುಗೆಗಳನ್ನು ಘೋಷಿಸಿದ ನಂತರ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮಸರದಲ್ಲಿ ತೊಡಗಿದ್ದು, ಪರಸ್ಪರ ತಿರುಗೇಟು ನೀಡುತ್ತಲೇ ಇವೆ.ಇದೀಗ ಏರ್ಟೆಲ್ ತನ್ನ ಹೊಸ ಯೋಜನೆ ಮೂಲಕ ಜಿಯೋಗೆ ಟಕ್ಕರ್ ನೀಡಲು ಮುಂದಾಗಿದೆ!

ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಪ್ರವೇಶಾತಿಯೂ ಹೊಸ ಕ್ರಾಂತಿಗೆ ಕಾರಣವಾಗಿದೆ. ಜಿಯೋ ಅತಿ ಕಡಿಮೆ ಮತ್ತು ಉಚಿತ ಕೊಡುಗೆಗಳನ್ನು ಘೋಷಿಸಿದ ನಂತರ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮಸರದಲ್ಲಿ ತೊಡಗಿದ್ದು, ಪರಸ್ಪರ ತಿರುಗೇಟು ನೀಡುತ್ತಲೇ ಇವೆ..
ಇದೀಗ ಏರ್ಟೆಲ್ ತನ್ನ ಹೊಸ ಯೋಜನೆ ಮೂಲಕ ಜಿಯೋಗೆ ಟಕ್ಕರ್ ನೀಡಲು ಮುಂದಾಗಿದೆ! ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

ರೂ. 149 ಯೋಜನೆ

ರೂ. 149 ಯೋಜನೆ

ಏರ್ಟೆಲ್ ರೂ. 149 ಯೋಜನೆ ಘೋಷಿಸಿದ್ದು, ಗ್ರಾಹಕರು ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಪಡೆಯಬಹುದಾಗಿದೆ. ಜತೆಗೆ 300MB 4G ಡೇಟಾ ಸಿಗಲಿದ್ದು, ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ರೂ. 199 ಯೋಜನೆ

ರೂ. 199 ಯೋಜನೆ

ಪ್ರಿಪೇಡ್ ಗ್ರಾಹಕರಿಗೆ ರೂ. 199 ಯೋಜನೆ ಅಡಿಯಲ್ಲಿ, ಏರ್ಟೆಲ್ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆ ಸೌಲಭ್ಯ ಮತ್ತು 1GB ಡೇಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ. ಈ ಯೋಜನೆಯಲ್ಲಿ ಒಳಬರುವ ಅನಿಯಮಿತ ರೋಮಿಂಗ್ ಕರೆಗಳನ್ನು ಸ್ವೀಕರಿಸಬಹುದು. ಜತೆಗೆ ಸ್ಥಳೀಯ ಮತ್ತು ರಾಷ್ಟ್ರೀಯ ಅನಿಯಮಿತ ಎಸ್ಎಂಎಸ್ ಸೌಲಭ್ಯ ಸಿಗಲಿದೆ.

ಜಿಯೋಗೆ ತಿರುಗೇಟು!

ಜಿಯೋಗೆ ತಿರುಗೇಟು!

ಈಗಾಗಲೇ ಜಿಯೋ ರೂ. 149 ಮತ್ತು ರೂ. 199 ಯೋಜನೆಗಳನ್ನು ಹಾಗೂ ವೋಡಾಫೋನ್ ರೂ. 199 ಯೋಜನೆಯನ್ನು ಘೋಷಿಸಿದೆ. ಜಿಯೋಗೆ ತಿರುಗೇಟು ನೀಡಲು ಏರ್ಟೆಲ್ ರೂ. 149 ಮತ್ತು ರೂ. 199 ಯೋಜನೆಗಳನ್ನು ಪರಿಚಯಿಸಿದೆ ಎನ್ನಲಾಗಿದೆ.
ರಿಲಾಯನ್ಸ್ ಜಿಯೋ ರೂ. 149 ಪ್ಲಾನ್ ಮೂಲಕ 4.2GB 4G ಡೇಟಾ ನೀಡುತ್ತಿದೆ. ಅನಿಯಮಿತ ಲೋಕಲ್ ಹಾಗೂ ಎಸ್ಟಿಡಿ ಕರೆ ಹಾಗು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಜತೆಗೆ ಜಿಯೋ 300 ಸ್ಥಳೀಯ, ರಾಷ್ಟ್ರೀಯ ಮತ್ತು ರೋಮಿಂಗ್ ಎಸ್ಎಂಎಸ್ ಸೌಲಭ್ಯ ಒದಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+