For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಮೇಲೆ IT ಸರಣಿ ದಾಳಿ

|

ದೇಶದಾದ್ಯಂತ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಮೇಲೆ ಆದಾಯ ತೆರಿಗೆ ಇಲಾಖೆ ಸರಣಿ ದಾಳಿ ನಡೆಸಿದೆ.

ಬುಧವಾರ, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳಲ್ಲಿ ನಡೆಯುತ್ತಿದ್ದ ವ್ಯವಹಾರಗಳ ಬಗ್ಗೆ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.

ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಮೇಲೆ IT ಸರಣಿ ದಾಳಿ

 

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಡಿಜಿಟಲ್ ಕರೆನ್ಸಿ ವಿರುದ್ಧದ ಮೊದಲ ಕಾರ್ಯಾಚರಣೆ ಇದಾಗಿದೆ. ಹೂಡಿಕೆದಾರರು, ವಹಿವಾಟುದಾರರು, ಅವರ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಗಳ ಕುರಿತು ಮಾಹಿತಿ ಕಲೆ ಹಾಕಲಾಗಿದೆ.

ಬಿಟ್ ಕಾಯಿನ್ ರೂಪಾಯಿ ಮತ್ತು ಚಿನ್ನಕ್ಕೆ ಪರ್ಯಾಯವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜನರು ಬಿಟ್ ಕಾಯಿನ್ ಖರೀದಿಗೆ ಮುಂದಾಗಿದ್ದರು. ಇದರ ಪರಿಣಾಮ ಬಿಟ್ ಕಾಯಿನ್ ಬೆಲೆ ಈ ವರ್ಷ 17 ಪಟ್ಟು ಹೆಚ್ಚಾಗಿತ್ತು. ನೋಟು ರದ್ದತಿ ಪೂರ್ವದಲ್ಲಿ ರೂ. 23,000 ಇದ್ದ ಬೆಲೆ ತದ ನಂತರದಲ್ಲಿ 10 ಲಕ್ಷಕ್ಕೆ ಏರಿಕೆ ಕಂಡಿದೆ.

ಬಿಟ್ ಕಾಯಿನ್ ಗಳ ವ್ಯಾಪಾರ ಹೆಚ್ಚಾಗುತ್ತಿರುವುದರಿಂದ ಆದಾಯ ತೆರಿಗೆ ಇಲಾಖೆ ಈ ವಿನಿಮಯ ಕೇಂದ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.

ಬಿಟ್ ಕಾಯಿನ್ ಎಂಬುದು ಮಾಯಾಂಗನೆ! ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿಯಾಗಿರುವ ಬಿಟ್ ಕಾಯಿನ್ ಗೆ ನಮ್ಮ ದೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಈಗಾಗಲೇ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

English summary

IT series raids on Bitcoin Exchanges

Income Tax department conducted a series of raids on Bitcoin exchanges around the country. Raids were conducted at Delhi, Bengaluru, Hyderabad, Kochi and Gurugram.
Story first published: Thursday, December 14, 2017, 15:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X