ಬಿಟ್ ಕಾಯಿನ್: 4-5 ಲಕ್ಷ ಹೂಡಿಕೆದಾರರಿಗೆ ಐಟಿ ಇಲಾಖೆ ನೋಟಿಸ್

ಆದಾಯ ತೆರಿಗೆ ಇಲಾಖೆಯು ಕಾನೂನಿನ ಮಾನ್ಯತೆ ಇಲ್ಲದಿರುವ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಿರುವ 4-5 ಲಕ್ಷ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.

ದೇಶದಲ್ಲಿ ಬಿಟ್ ಕಾಯಿನ್ ವಹಿವಾಟು ಹೆಚ್ಚಾಗುತ್ತಾ ಸಾಗಿದ್ದು, ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸುವಂತೆ ಮಾಡಿದೆ. ಬಿಟ್ ಕಾಯಿನ್ ವ್ಯವಹಾರದತ್ತ ಹೆಚ್ಚೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಕಾನೂನಿನ ಮಾನ್ಯತೆ ಇಲ್ಲದಿರುವ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಿರುವ 4-5 ಲಕ್ಷ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.

ಬಿಟ್ ಕಾಯಿನ್ ಗಳಲ್ಲಿ ಹಣ ಹೂಡಿಕೆ ಮಾಡಿರುವ ಹಾಗು ಬಿಟ್ ಕಾಯಿನ್ ವಹಿವಾಟಿನಲ್ಲಿ ತೊಡಗಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲು ನಿಗಾವಹಿಸಿದೆ. ಬಿಟ್ ಕಾಯಿನ್ ಬಗ್ಗೆ ಎಲ್ಲರೂ ಕೇಳುವ ಪ್ರಶ್ನೆಗಳೇನು ಗೊತ್ತೆ?

ಈಗಾಗಲೇ ಕಳೆದ ವಾರ ದೇಶದಲ್ಲಿನ ಅನೇಕ ಡಿಜಿಟಲ್ ಕರೆನ್ಸಿ ವಿನಿಮಯ ಕೇಂದ್ರಗಳ ಮೇಲೆ ಐ.ಟಿ ದಾಳಿ ನಡೆಸಲಾಗಿತ್ತು. ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ 20 ಲಕ್ಷ ಜನರು ನೋಂದಣಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರಸ್ತುತ ಬಿಟ್ ಕಾಯಿನ್ ವ್ಯವಹಾರ ಕಾನೂನುಬಾಹೀರವಾಗಿದ್ದು, ಅವುಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ಬಗ್ಗೆ ಐಟಿ ಇಲಾಖೆ ಕ್ರಮ ಕೈಗೊಂಡಿದೆ.

ನೋಟು ರದ್ದತಿ ನಂತರ ಕಪ್ಪುಹಣ ಬಿಳಿಯಾಗಿ ಪರಿವರ್ತಿಸಲು ಬಿಟ್ ಕಾಯಿನ್ ಬಳಸಿಕೊಂಡಿರುವ್ ಸಾಧ್ಯತೆಯ ಬಗ್ಗೆ ಇಲಾಖೆ ಗಮನ ಹರಿಸಿದೆ. ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಸಮಿತಿಯನ್ನು ರಚಿಸಿದೆ. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಬಿಟ್ ಕಾಯಿನ್: 4-5 ಲಕ್ಷ ಹೂಡಿಕೆದಾರರಿಗೆ ಐಟಿ ಇಲಾಖೆ ನೋಟಿಸ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+