For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Scheme) ಆರಂಭಿಸಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ.

By Siddu Thoravat
|

ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Scheme) ಆರಂಭಿಸಿದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಜಿಯನ್ನು ಆನ್ ಲೈನ್ ಮುಖಾಂತರ ಡೌನ್ ಲೋಡ್ ಮಾಡಿಕೊಂಡು, ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಗತ್ಯ ಭಾವಚಿತ್ರಗಳೊಂದಿಗೆ ಅಂಚೆ ಕಚೇರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ಹೇಗೆ ತೆರೆಯಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ...

1. ಏನು ಮಾಡಬೇಕು?

1. ಏನು ಮಾಡಬೇಕು?

* ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು
* ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ದಾಖಲಾತಿ ತೆಗೆದುಕೊಂಡು ಹೋಗಿ
* ಆಧಾರ್ ಕಾರ್ಡ್ ಹೊಂದಿದ್ದರೆ ಒಳಿತು
* ಹೆಣ್ಣು ಮಗುವಿನ ಜನ್ಮ ದಾಖಲೆ ಅಗತ್ಯ
* ಹೆಣ್ಣು ಮಗುವಿನ ಪಾಲಕರ ಫೋಟೋ ಅಗತ್ಯ

ಸುಕನ್ಯಾ ಸಮೃದ್ಧಿ ಬಗ್ಗೆ ಮಾಹಿತಿ

ಸುಕನ್ಯಾ ಸಮೃದ್ಧಿ ಬಗ್ಗೆ ಮಾಹಿತಿ

* ಕನಿಷ್ಠ ಡಿಪಾಸಿಟ್ ರೂ. 1೦೦೦ ಮತ್ತು ಗರಿಷ್ಠ 1 .5 ಲಕ್ಷ
* ಬಡ್ಡಿ ದರ ಶೇ. 8.1
* ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಸಲ್ಪ ಪ್ರಮಾಣದ ಹಣ ವಿತ್ ಡ್ರಾ ಮಾಡಬಹುದು.
* 21 ವರ್ಷ ಪೂರೈಸಿದ ನಂತರ ಸಂಪೂರ್ಣ ಹಣ ಡ್ರಾ ಮಾಡಲು ಅವಕಾಶ
* ಸೆಕ್ಷನ್ 80 ಸಿ ಅನ್ವಯ ತರಿಗೆ ವಿನಾಯಿತಿ
* ಸಾಲ ಸೌಲಭ್ಯ ಇರುವುದಿಲ್ಲ

ಖಾತೆ ವರ್ಗಾವಣೆ
 

ಖಾತೆ ವರ್ಗಾವಣೆ

ಮೂಲ ವಾಸ್ತವ್ಯ ವಿಳಾಸದೊಂದಿಗೆ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕಿನಿಂದ ಅಂಚೆ ಕಚೇರಿಗೆ ವರ್ಗಾಯಿಸಲು ಅವಕಾಶವಿರುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

ಇನ್ನಿತರ ಪ್ರಯೋಜನಗಳು

ಇನ್ನಿತರ ಪ್ರಯೋಜನಗಳು

ಒಂದು ವರ್ಷಕ್ಕೆ ಸಾವಿರ ರೂಪಾಯಿಂದ 1.5 ಲಕ್ಷ ರೂ. ವರೆಗೆ ಡಿಪಾಸಿಟ್ ಮಾಡಲು ಅವಕಾಶವಿದೆ. ಹಣಕಾಸು ವರ್ಷದಲ್ಲಿ ಎಷ್ಟು ಸಾರಿ ಬೇಕಾದರೂ ಡಿಪಾಸಿಟ್ ಮಾಡಬಹುದು. ಕಳೆದ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪಿಪಿಎಫ್ ಗೆ ಹೋಲಿಸಿದರೆ ಇಲ್ಲಿ ಬಡ್ಡಿ ಪ್ರಮಾಣ ಜಾಸ್ತಿಯಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಖಾತೆ ತೆಗೆದು ಒಂದು ವರ್ಷ ಡಿಪಾಸಿಟ್ ಕಟ್ಟಲು ವಿಫಲರಾದರೆ 50 ರೂ. ದಂಡ ತುಂಬಬೇಕಾಗುತ್ತದೆ.
ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಒಟ್ಟು ಮೊತ್ತದ ಶೇ.50 ಭಾಗವನ್ನು ವಿತ್ ಡ್ರಾ ಮಾಡಬಹುದು. 21 ವರ್ಷದ ನಂತರ ಖಾತೆಯನ್ನು ಕ್ಲೋಸ್ ಮಾಡಿ ಅಷ್ಟು ಹಣ ಡ್ರಾ ಮಾಡಬಹುದು. 18 ವರ್ಷಕ್ಕೆ ಹೆಣ್ಣು ಮದುವೆಯಾಗುವುದಾದರೆ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಅಥವಾ ತಂದೆ ಈ ಯೋಜನೆಯಡಿ ಕೇವಲ ಎರಡು ಖಾತೆ ತೆರೆಯಲು ಮಾತ್ರ ಅವಕಾಶವಿರುತ್ತದೆ.

ಕೊನೆ ಮಾತು

ಕೊನೆ ಮಾತು

ಯೋಜನೆಯ ದೊಡ್ಡ ಕೊರತೆ ಎಂದರೆ ಕಾಲಾವಧಿ, ಜತೆಗೆ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗದಿರುವುದು. ಆದರೆ ಸರ್ಕಾರ ಇಂಥ ಹೆಜ್ಜೆ ಇಟ್ಟಿರುವುದನ್ನು ಸ್ವಾಗತಿಸಬೇಕಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ವಿರುವ ಯೋಜನೆಗಳು ಸಿಗಲು ಸಾಧ್ಯವಿದೆ.(kannadagoodreturns.in)

English summary

How To Open Sukanya Samriddhi Account in a Post Office?

The government's move to encourage girl education and save funds for them has got a tremendous response through the Sukanya Samriddhi. However, the pick up from banks and post office is slow.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X