For Quick Alerts
ALLOW NOTIFICATIONS  
For Daily Alerts

ಇವು ಬಡ್ಡಿದರ ಕಡಿತ ಮಾಡಿರುವ ಪ್ರಮುಖ ಬ್ಯಾಂಕುಗಳು

ಪ್ರಮುಖ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಸಾಲ ನೀಡುವ ಬ್ಯಾಂಕುಗಳು ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿವೆ. ಹಣದುಬ್ಬರ, ಗರಿಷ್ಠ ಮುಖಬೆಲೆಯ ನೋಟಿನ ಅಪಮೌಲ್ಯೀಕರಣ ಮತ್ತು ಇನ್ನಿತರ ಪ್ರಾಥಮಿಕ ಕಾರಣಗಳಿಂದ ಈ ಕಡಿತ ಮಾಡಿವೆ.

By Siddu
|

ಪ್ರಮುಖ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಸಾಲ ನೀಡುವ ಬ್ಯಾಂಕುಗಳು ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿವೆ. ಹಣದುಬ್ಬರ, ಗರಿಷ್ಠ ಮುಖಬೆಲೆಯ ನೋಟಿನ ಅಪಮೌಲ್ಯೀಕರಣ ಮತ್ತು ಇನ್ನಿತರ ಪ್ರಾಥಮಿಕ ಕಾರಣಗಳಿಂದ ಈ ಕಡಿತ ಮಾಡಿವೆ.

ಭಾರತೀಯ ಬ್ಯಾಂಕುಗಳ ಲಾಭಾಂಶ ಮಟ್ಟ ಆಸ್ತಿ ಗುಣಮಟ್ಟದ ನಿರಂತರ ಒತ್ತಡ ಮತ್ತು ಕಡಿಮೆ ಕ್ರೆಡಿಟ್ ಬೇಡಿಕೆಯಿಂದಾಗಿ ಕ್ಷೀಣಿಸಿದೆ. ಬಂಡವಾಳಕ್ಕಾಗಿ ಮಾರುಕಟ್ಟೆಯ ಪಾಲನ್ನು ಪಡೆಯಲು ಸಾಕಷ್ಟು ಬಂಡವಾಳವನ್ನು ಹೊಂದಿರುವ ಬ್ಯಾಂಕುಗಳಿಗೆ ಇದು ಅತ್ಯಗತ್ಯವಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ತಿಳಿಸಿದೆ.

ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿರುವ ಆರು ಬ್ಯಾಂಕುಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಿದ್ದೇವೆ ನೋಡಿ.. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)

ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್ಬಿಐ ಎರಡು ಹೊಸ ಹಂತದ (two-tier) ಉಳಿತಾಯ ಖಾತೆಯ ಬಡ್ಡಿದರದ ವ್ಯವಸ್ಥೆಯನ್ನು ಪರಿಚಯಿಸಿ ದರ ಕಡಿತವನ್ನು ಪ್ರಾರಂಭಿಸಿತು. ಅಲ್ಲದೆ ತನ್ನ ಹೆಚ್ಚಿನ ಠೇವಣಿದಾರರಿಗೆ ಬಡ್ಡಿದರವನ್ನು ಕಡಿಮೆ ಮಾಡಿತು. ಒಂದು ಕೋಟಿಗಿಂತ ಕಡಿಮೆ ಉಳಿತಾಯವಿದ್ದಾಗ ಎಸ್ಬಿಐ ತನ್ನ ಬಡ್ಡಿದರವನ್ನು ಶೇ. 4 ರಿಂದ ಶೇ. 3.5ಕ್ಕೆ ಇಳಿಸಿತು. ಒಂದು ಕೋಟಿಗೂ ಹೆಚ್ಚಿನ ಮೊತ್ತದ ಉಳಿತಾಯದ ಮೇಲೆ ಶೇ. 4 ಬಡ್ಡಿದರ ನೀಡಲಿದೆ.

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ

ಬಡ್ಡಿದರವನ್ನು ಕಡಿತಗೊಳಿಸಿದ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಕೂಡ ಒಂದು. ಆಗಸ್ಟ್ 5 ರಿಂದ ಬ್ಯಾಂಕ್ ಆಫ್ ಬರೋಡಾ ಸಹ ಎರಡು ಹಂತದ(two-tier) ಉಳಿತಾಯ ಬ್ಯಾಂಕ್ ಬಡ್ಡಿದರವನ್ನು ಅಳವಡಿಸಿಕೊಂಡಿದೆ. ರೂ. 50 ಲಕ್ಷ ಉಳಿತಾಯ ಬ್ಯಾಂಕಿನ ಬಡ್ಡಿದರವನ್ನು ಪ್ರಸ್ತುತ ವಾರ್ಷಿಕ ಶೇ. 4 ರಿಂದ ಶೇ. 3.5 ಕ್ಕೆ ಇಳಿಸಲಾಗಿದೆ. ಆದಾಗ್ಯೂ 50 ಲಕ್ಷಕಿಂತಲೂ ಹೆಚ್ಚಿನ ಮೊತ್ತಕ್ಕೆ ಶೇ. 4 ರಷ್ಟು ಬಡ್ಡಿದರವನ್ನು ನಿಗದಿಗೊಳಿಸಿದೆ.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಖಾಸಗಿ ವಲಯದ ಸಾಲದಾತರಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ರೂ. 50 ಲಕ್ಷದವರಗಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 3.5ಕ್ಕೆ ಇಳಿಸಿದೆ. ಅಲ್ಲದೆ 50 ಲಕ್ಷಕ್ಕಿಂತ ಮೇಲ್ಪಟ್ಟ ಠೇವಣಿಗೆ ಶೇ. 4ರಷ್ಟು ಬಡ್ಡಿದರವನ್ನು ಮುಂದುವರೆಸಿದೆ.

ಇಂಡಿಯನ್ ಬ್ಯಾಂಕ್

ಇಂಡಿಯನ್ ಬ್ಯಾಂಕ್

ಇಂಡಿಯನ್ ಬ್ಯಾಂಕ್ ವಾರ್ಷಿಕವಾಗಿ ಉಳಿತಾಯ ಖಾತೆಗಳ ಮೇಲೆ ಶೇ. 4ರಷ್ಟು ಬಡ್ಡಿದರ ನೀಡಲಿದೆ. ವಾರ್ಷಿಕ ರೂ. 50 ಲಕ್ಷಕ್ಕಿಂತ ಹೆಚ್ಚಿನ ಉಳಿತಾಯಕ್ಕೆ ಶೇ. 4ರಷ್ಟು ಬಡ್ಡಿದರವನ್ನು, ರೂ. 50 ಲಕ್ಷದವರಗಿನ ಉಳಿತಾಯಕ್ಕೆ ಶೇ. 3.5ರಷ್ಟು ಬಡ್ಡಿದರವನ್ನು ನೀಡುತ್ತಿದೆ.

ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್

ರೂ. 1 ಲಕ್ಷದಿಂದ 50 ಲಕ್ಷದವರಗಿನ ದೈನಂದಿನ ಉಳಿತಾಯದ ಮೇಲಿನ ಬಡ್ಡಿದರವನ್ನು ಶೇ. 4 ರಿಂದ 3.5 ಕ್ಕೆ ಇಳಿಸಲಾಗಿದೆ. ಒಂದು ಲಕ್ಷಕ್ಕಿಂತ ಕಡಿಮೆ ಉಳಿತಾಯಕ್ಕೆ ಶೇ. 4ರಷ್ಟಿದ್ದ ಬಡ್ಡಿದರವನ್ನು ಪರಿಷ್ಕರಿಸಿ ಶೇ. 3 ಕ್ಕೆ ಇಳಿಸಲಾಗಿದೆ. ಒಂದು ಕೋಟಿಗಿಂತಲೂ ಹೆಚ್ಚಿನ ದೈನಂದಿನ ಉಳಿತಾಯಕ್ಕೆ ಪ್ರಸ್ತುತ ಶೇ. 4 ರಷ್ಟಿದ್ದ ಬಡ್ಡಿದರವನ್ನು ಶೇ. 5 ಕ್ಕೆ ಪರಿಷ್ಕರಿಸಲಾಗಿದೆ. 50 ಲಕ್ಷದಿಂದ 1 ಕೋಟಿವರಗಿನ ದೈನಂದಿನ ಉಳಿತಾಯಕ್ಕೆ ವಾರ್ಷಿಕ ಶೇ. 4 ಬಡ್ಡಿದರ ನಿಗದಿಪಡಿಸಲಾಗಿದೆ.

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಹಾಗು ಒಂದು ಕೋಟಿಗಿಂತ ಕಡಿಮೆ ಮೊತ್ತದ ಉಳಿತಾಯಕ್ಕೆ ಶೇ. 6 ಬಡ್ಡಿದರವನ್ನು ಮುಂದುವರೆಸಿದೆ. ಒಂದು ಕೋಟಿಗಿಂತ ಮೇಲ್ಪಟ್ಟ ಉಳಿತಾಯಕ್ಕೆ ಪ್ರಸ್ತುತ ಇದ್ದ ಬಡ್ಡಿದರವನ್ನು ಶೇ. 6.5 ರಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ.

English summary

These Six Banks Now Pay Less Interest On Your Savings Accounts

Top state and private lenders have been slashing interest rates on savings bank accounts. A fall in the rate of inflation and surplus money with banks on account of demonetisation are the primary reasons for these cuts.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X