For Quick Alerts
ALLOW NOTIFICATIONS  
For Daily Alerts

ಇವು ಟಾಪ್ 5 ಕ್ರಿಪ್ಟೋಕರೆನ್ಸಿಗಳು

ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ ಗಳ ಬಗ್ಗೆ ಎಲ್ಲರಲ್ಲೂ ಕೂತುಹಲ ಇದ್ದು, 2017ರಲ್ಲಿ ಇದು ಹೆಚ್ಚು ಸುದ್ದಿಯಾಗಿದೆ. ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಆಸ್ತಿಗಳಾಗಿದ್ದು, ಇದನ್ನು ವಿನಿಮಯ ಮಾದ್ಯ್ಮವಾಗಿ ಬಳಸಬಹುದಾಗಿದೆ.

By Siddu
|

ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ ಬಗ್ಗೆ ಈಗಾಗಲೇ ಹಲವು ಲೇಖನಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ ಗಳ ಬಗ್ಗೆ ಎಲ್ಲರಲ್ಲೂ ಕೂತುಹಲ ಇದ್ದು, 2017ರಲ್ಲಿ ಇದು ಹೆಚ್ಚು ಸುದ್ದಿಯಾಗಿದೆ. ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಆಸ್ತಿಗಳಾಗಿದ್ದು, ಇದನ್ನು ವಿನಿಮಯ ಮಾದ್ಯಮವಾಗಿ ಬಳಸಬಹುದಾಗಿದೆ. ಕ್ರಿಪ್ಟೋಗ್ರಪಿ, ಬ್ಲ್ಯಾಕ್ಚೈನ್ ತಂತ್ರಜ್ಞಾನದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ.

 

ಬಿಟ್ ಕಾಯಿನ್ ಚಾಲ್ತಿಗೆ ಬಂದಾಗಿನಿಂದ ಹಲವು ಕ್ರಿಪ್ಟೋಕರೆನ್ಸಿಗಳು ಚಾಲನೆಗೆ ಬಂದಿವೆ. ಇಲ್ಲಿ ಪ್ರಮುಖ 5 ಕ್ರಿಪ್ಟೋಕರೆನ್ಸಿಗಳ ಪರಿಚಯ ಮಾಡಿಕೊಡಲಾಗುತ್ತಿದೆ.. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

1. ಬಿಟ್ ಕಾಯಿನ್ (ಬಿಟಿಸಿ)

1. ಬಿಟ್ ಕಾಯಿನ್ (ಬಿಟಿಸಿ)

ಮಾರುಕಟ್ಟೆ ಬಂಡವಾಳ: 233,667,272,389 ಡಾಲರ್
ಒಂದು ಯೂನಿಟ್ ಬೆಲೆ: 13,912.40 ಡಾಲರ್
ವಾಲ್ಯೂಮ್ ಟ್ರೇಡೆಡ್: 17,920,800,000 ಡಾಲರ್ ಬಿಟ್ ಕಾಯಿನ್ ವಿಶ್ವದ ಡಿಜಿಟಲ್ ಕರೆನ್ಸಿಯ ಸಾಧ್ಯತೆಯನ್ನು ಪರಿಚಯಿಸಿದೆ. 2009ರಲ್ಲಿ ಸಟೋಶಿ ನಕಾಮೊಟೊ ಎಂಬ ಹೆಸರಿಸಲಾಗದ ವ್ಯಕ್ತಿಯಿಂದ ರಚಿಸಲ್ಪಟ್ಟಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಹುಟ್ಟಿಸಿದ್ದು, ಮಾರುಕಟ್ಟೆಯಲ್ಲಿ ವಿಶೇಷ ಟರ್ಮ್ ಆಗಿ ಗುರುತಿಸಿಕೊಂಡಿದೆ.  ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?

2. Ethereum(ಎಥೆರೆಮ್-ETH)

2. Ethereum(ಎಥೆರೆಮ್-ETH)

ಮಾರುಕಟ್ಟೆ ಬಂಡವಾಳ: 121,065,615,311 ಡಾಲರ್
ಯುನಿಟ್ ಬೆಲೆ: 1,249.28 ಡಾಲರ್
ವಾಲ್ಯೂಮ್/ಮೊತ್ತ: 8,872,940,000 ಡಾಲರ್
ಎಥೆರೆಮ್ ಎನ್ನುವುದು ಡೆವಲಪರ್ ಗಳಿಗೆ ವಿಕೇಂದ್ರೀಕೃತ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಹಂಚಿಕೊಳ್ಳಲು ಸಹಾಯ ಮಾಡುವ ಮುಕ್ತವಾದ ಸಾಫ್ಟ್ವೇರ್ ವೇದಿಕೆಯಾಗಿದೆ. ಇದು ಬ್ಲಾಕ್ಚೈನ್ ಆಧಾರಿತವಾಗಿದೆ.

3. Ripple(ರಿಪ್ಪಲ್- XRP)
 

3. Ripple(ರಿಪ್ಪಲ್- XRP)

ಮಾರುಕಟ್ಟೆ ಬಂಡವಾಳ: 70,002,793,234 ಡಾಲರ್
ಪ್ರತಿ ಯೂನಿಟ್ ಬೆಲೆ: 1.81 ಡಾಲರ್
ವಾಲ್ಯೂಮ್/ಮೊತ್ತ: 4,642,360,000 ಡಾಲರ್
ಇದು ಸಂಕುಚಿತ ಪಾವತಿ ಪ್ರೋಟೋಕಾಲ್ ಮತ್ತು ವಿನಿಮಯ ನೆಟ್ವರ್ಕ್ ಕಂಪನಿಯಾಗಿದೆ. ಇದನ್ನು ಅಧಿಕೃತವಾಗಿ XRP ಎಂದು ಕರೆಯಲ್ಪಡುತ್ತದೆ ಮತ್ತು ರಿಪ್ಪಲ್ ಲ್ಯಾಬ್ ನಿಂದ ಹೊರಡಿಸಲಾಗುತ್ತದೆ.

4. ಬಿಟ್ ಕಾಯಿನ್ ಕ್ಯಾಶ್(BCH)

4. ಬಿಟ್ ಕಾಯಿನ್ ಕ್ಯಾಶ್(BCH)

ಮಾರುಕಟ್ಟೆ ಬಂಡವಾಳ: 43,231,334,150 ಡಾಲರ್ ಯೂನಿಟ್ ಬೆಲೆ: 2,557.25 ಡಾಲರ್
ವಾಲ್ಯೂಮ್/ಮೊತ್ತ: 2,581,910,000 ಡಾಲರ್ ಬಿಟ್ ಬಿಟ್ ಕಾಯಿನ್ ಕ್ಯಾಶ್ ಮತ್ತು ಬಿಟ್ಕೋಯಿನ್ ಕ್ಲಾಸಿಕ್ ನಡುವಿನ ವ್ಯತ್ಯಾಸವೆಂದರೆ 1 MB ನಿಂದ 8 MB ವರೆಗೆ ಬ್ಲಾಕ್ ಗಾತ್ರವನ್ನು ಹೆಚ್ಚಿಸುತ್ತದೆ. ಹಾಗು ಸೆಗ್ ವಿಟ್ (Segregated Witness) ಅನ್ನು ತೆಗೆದುಹಾಕುತ್ತದೆ.

5. ಕಾರ್ಡಾನೊ (ಎಡಿಎ)

5. ಕಾರ್ಡಾನೊ (ಎಡಿಎ)

ಮಾರುಕಟ್ಟೆ ಬಂಡವಾಳ: 19,042,655,498 ಡಾಲರ್
ಪ್ರತಿ ಯೂನಿಟ್ ಬೆಲೆ: 0.734470 ಡಾಲರ್
ವಾಲ್ಯೂಮ್/ಮೊತ್ತ: 250,868,000 ಡಾಲರ್
ಕಾರ್ಡೋನಾ ಕರೆನ್ಸಿಯನ್ನು ಡಿಜಿಟಲ್ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ. ಇದು ಬ್ಲಾಕ್ಚೈನ್ ಆಧಾರಿತ ಮತ್ತು ವಿಕೇಂದ್ರೀಕೃತವಾಗಿದೆ. ಇದು ಹಣಕಾಸಿನ ಸೇವೆಗಳಿಗೆ ವಿನ್ಯಾಸಗೊಳಿಸಿದ ತಾಂತ್ರಿಕ ವೇದಿಕೆಯಾದ ರಿಪ್ಪಲ್ ಗೆ ಹೋಲಿಸಬಹುದು.

English summary

These are Top 5 Cryptocurrencies

The surge of Bitcoin prices in 2017 did evoke a sense of curiosity mixed with regret around cryptocurrency. Curiosity with relation to what the mysterious range of virtual currencies were all about and regrets on why they had not thought of investing in it themselves.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X