ಬಡವರ್ಗದವರಿಗೆ, ಹಿಂದುಳಿದವರಿಗೆ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಬಡವರ್ಗದವರಿಗೆ, ಹಿಂದುಳಿದವರಿಗೆ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮುಖ್ಯಮಂತ್ರಿ ಅನಿಲ ಯೋಜನೆಗೆ 1350 ಕೋಟಿ ಮೀಸಲು
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ರೂ. 1350 ಕೋಟಿ ಮೀಸಲು ಇಡಲಾಗಿದೆ. 30 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಡಿ ಗ್ಯಾಸ್ ಸ್ಟೌ ನೀಡಲಾಗುವುದು.
ಆಹಾರ ಮತ್ತು ಸರಬರಾಜು ಇಲಾಖೆಗೆ ರೂ. 3882 ಕೋಟಿ ಅನುದಾನ ಮೀಸಲಿರಿಸಲಾಗಿದೆ.
20 ಲಕ್ಷ ಮನೆ ನಿರ್ಮಾಣ
ಮುಂದಿನ ಐದು ವರ್ಷಗಳಲ್ಲಿ ಸುಮಾರು 20 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, ವಸತಿ ಇಲಾಕೆಗೆ ರೂ. 39429 ಕೋಟಿ ಬಜೆಟ್ ಮೀಸಲಿಟ್ಟಿದೆ.
ಓಬಿಸಿ ನಿರುದ್ಯೋಗಿಗಳಿಗೆ ಸಾಲ
ಹಿಂದುಳಿದ ವರ್ಗಗಳ ನಿರುದ್ಯೋಗಿ ಪಧವಿದರರ ಸ್ವಯಂ ಉದ್ಯೋಗಕ್ಕಾಗಿ ರೂ. 10 ಲಕ್ಷದವರೆಗೆ ಸಾಲಸೌಲಭ್ಯ ನೀಡಲಾಗುವುದು. ಇಅದಕ್ಕೆ ವಾರ್ಷಿಕ ಬಡ್ಡಿದರ ಶೇ. 6. ಹಿಂದುಳಿದವರ ಉದ್ಯೋಗ ಮತ್ತು ಶಿಕ್ಷಣ ಉತ್ತೇಜನಕ್ಕಾಗಿ ಕ್ರಮ.
ಗ್ರಾಮೀಣರಿಗೆ ಉದ್ಯೋಗ
ಗ್ರಾಮೀಣ ಪ್ರದೇಶದವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, 30 ಎಕರೆ ಬಂಜರು ಭೂಮಿಯನ್ನು ಉದ್ಯಮ ವಲಯವನ್ನಾಗಿ ಘೋಷಣೆ ಮಾಡೈದೆ. ರೂ. 23 ಕೋಟಿ ಅನುದಾನದಲ್ಲಿ ಕಲಿಕಾ ಶ್ರೇಷ್ಟತಾ ಕೇಂದ್ರದ ಸ್ಥಾಪನೆ ಮಾಡಾಲಾಗುವುದು.
ಮಾಸಾಶನ ಹೆಚ್ಚಳ
ವೃದ್ದಾಪ್ಯ ವಿಧವಾ ವೇತನ ಹೆಚ್ಚಳ, ವಿಧವಾ ವೇತನ, ಸಂಧ್ಯಾ ಸುರಕ್ಷ, ಮನಸ್ವಿನಿ, ಮೈತ್ರಿ ಯೋಜನೆಗಳ ತಿಂಗಳ ಪಿಂಚಣಿ ಮೊತ್ತ ರೂ. 500 ರಿಂದ 600 ಹೆಚ್ಚಳ. ಅಂಗವೈಕಲ್ಯಕ್ಕೆ ರೂ. 200 ಮಾಸಾಶನ ಹಾಗು ದಿವ್ಯಾಂಗರ ಮಾಸಾಶನ ಹೆಚ್ಚಳ.
ಸ್ಪರ್ಧಾರ್ಥಿಗಳಿಗೆ ಬಂಪರ್
ಬೆಂಗಳೂರು ನಗರಕ್ಕೆ ನೂರೆಂಟು ಕನಸುಗಳನ್ನು ಹೊತ್ತು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ, ಸಂದರ್ಶನಕ್ಕೆ ಬರುವ ಯುವತಿಯರಿಗಾಗಿ ಖಾಸಗಿ ಸಹಯೋಗದಲ್ಲಿ ಹಾಸ್ಟೇಲ್ ಸ್ಥಾಪನೆ ಮಾಡಲಾಗುವುದು.
ಕೆಪಿಎಸ್ಸಿಯ ವಿವಿಧ ಉದ್ಯೋಗಳಿಗೆ ಅರ್ಜಿ ಸಲ್ಲಿಸುವ ಈಗೀರುವ ಶುಲ್ಕ ವಿನಾಯಿತಿಯನ್ನು ಮಹಿಳೆಯರಿಗೆ, ವಿಕಲಚೇತನರಿಗೆ ನೀಡಲಾಗುವುದು.
ಕೃಷಿಭಾಗ್ಯ ಯೋಜನೆ
ಕೃಷಿಭಾಗ್ಯ ಯೋಜನೆ ಜಾರಿ ತಂದಿರುವ ಸರ್ಕಾರ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಅವಕಾಶ ನೀಡುವ ಉದ್ದೇಶ ಹೊಂದಿದೆ. ಕೃಷಿ ಇಲಾಖೆಗೆ ರೂ. 429 ಕೋಟಿ ಅನುದಾನ ಮೀಸಲು. ಕೃಷಿಭಾಗ್ಯ ಯೋಜನೆಗೆ ರೂ. 600 ಕೋಟಿ ಅನುದಾನ, ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಾರರಿಗೆ ರೂ. 24 ಕೋಟಿ ಅನುದಾನ ಮೀಸಲು. ಸಣ್ಣ ನೀರಾವರಿಗಾಗಿ ರೂ. 2090 ಕೋಟಿ ಅನುದಾನ ಮೀಸಲು.


Click it and Unblock the Notifications