For Quick Alerts
ALLOW NOTIFICATIONS  
For Daily Alerts

ಪಿಎನ್‌ಬಿ ಹಗರಣ: ಐಸಿಐಸಿಐ ಹಾಗು ಆಕ್ಸಿಸ್ ಬ್ಯಾಂಕ್ ಮುಖ್ಯಸ್ಥರ ವಿಚಾರಣೆ

ನೀರವ್ ಮೋದಿ ಬ್ಯಾಂಕ್ ವಂಚನೆ ಹಗರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಲೇ ಇದೆ. ನೀರವ್ ಮೋದಿ ಹಾಗು ಮೆಹುಲ್ ಚೋಕ್ಸಿ ರೂ. 12,700 ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

|

ನೀರವ್ ಮೋದಿ ಬ್ಯಾಂಕ್ ವಂಚನೆ ಹಗರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಲೇ ಇದೆ. ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೋಚ್ಚಾರ್ ಮತ್ತು ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಶರ್ಮಾ ಅವರ ವಿಚಾರಣೆ ನಡೆಸಲಾಗಿದೆ.

ಪಿಎನ್‌ಬಿ ಹಗರಣ: ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮುಖ್ಯಸ್ಥರ ವಿಚಾರಣೆ

ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ಕಂಪನಿ ಮಾಲೀಕ ಮೆಹುಲ್ ಚೋಕ್ಸಿ ಅವರ ಬಹುಕೋಟಿ ವಂಚನೆ ಪ್ರಕರಣ ಇದಾಗಿದೆ. ನೀರವ್ ಮೋದಿ ಹಾಗು ಮೆಹುಲ್ ಚೋಕ್ಸಿ ರೂ. 12,700 ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.
ಐಸಿಐಸಿಐ ಹಾಗು ಆಕ್ಸಿಸ್ ಬ್ಯಾಂಕ್ ಗಳು ಗೀತಾಂಜಲಿ ಜೆಮ್ಸ್ ಕಂಪನಿಗೆ ರೂ. 5200 ಕೋಟಿಗೂ ಹೆಚ್ಚು ಸಾಲ ನೀಡಿವೆ. ಸಾಲ ಪಡೆದಿರುವ ಬಗ್ಗೆ ವಿವರಣೆ ನೀಡುವಂತೆ ಗಂಭೀರ ಪ್ರಕರಣಗಳ ತನಿಖಾ ದಳ ಸೂಚಿಸಿದ್ದು, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸಾಲ ನೀಡಿರುವ ಇನ್ನಿತರ ಬ್ಯಾಂಕುಗಳಿಗೆ ಸಮನ್ಸ್ ಜಾರಿ ಮಾಡುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ಇವರು ದೇಶವನ್ನು ಲೂಟಿ ಮಾಡಿ ಓಡಿ ಹೋದ ದೇಶಭ್ರಷ್ಟರು

Read more about: frauds banking money finance news
English summary

ICICI's Chanda Kochhar, Axis Bank's Shikha Sharma Summoned by SFIO in PNB Fraud Case

ICICI Bank chief Chanda Kochhar and Axis Bank Managing Director Shikha Sharma have been summoned by the Serious Fraud Investigation Office (SFIO) in the alleged multi-crore Punjab National Bank scam, media report said on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X