ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಮಾಸಿಕ ಪಿಂಚಣಿ ಮೊತ್ತ ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಮಾಸಿಕ ಪಿಂಚಣಿ ಮೊತ್ತ ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಿಂಚಣಿ ಏರಿಕೆ ಮಾಡಿದರೆ ಸುಮಾರು 4 ದಶಲಕ್ಷ ಪಿಂಅಚಣಿದಾರರು ಇದರ ಫಲಾನುಭವಿಗಳಾಗಲಿದ್ದಾರೆ. ಏಪ್ರಿಲ್ 1ರಿಂದ ಈ 10 ತೆರಿಗೆ ನಿಯಮಗಳು ಬದಲಾಗಲಿವೆ..
ಏರಿಕೆ ಎಷ್ಟು?
ಪ್ರಸ್ತುತ ಇರುವ ರೂ. 1000 ಮೊತ್ತದ ಪಿಂಚಣಿಯನ್ನು ರೂ. 2000ಗಳಿಗೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಪಿಂಚಣಿ ಏರಿಕೆ ಅನುಷ್ಟಾನಕ್ಕೆ ಬಂದರೆ ವಾರ್ಷಿಕವಾಗಿ 3 ಸಾವಿರ ಕೋಟಿ ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಂಚಣಿ ಏರಿಕೆಗೆ ಕಾರಣ
ಪ್ರಸ್ತುತ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) -95 ಯೋಜನೆಗಳಡಿಯಲ್ಲಿ 60 ಲಕ್ಷ ಪಿಂಚಣಿದಾರರಿದ್ದಾರೆ. ಇದರಲ್ಲಿ 40 ಲಕ್ಷ ಜನರಿಗೆ ರೂ. 1,500 ರೂಪಾಯಿಗಿಂತ ಕಡಿಮೆ ಪಿಂಚಣಿ ಸಿಗುತ್ತಿದ್ದು, ಪ್ರತಿನಿತ್ಯದ ಅಗತ್ಯಗಳಿಗೆ ಈ ಮೊತ್ತ ಸಾಕಾಗುವುದಿಲ್ಲ. ಹಾಗಾಗಿ ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಬೇಕು ಎಂಬ ಒತ್ತಾಯದ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ.
ಗರಿಷ್ಟ ಪಿಂಚಣಿ
ಸರಿಸುಮಾರು 60 ಲಕ್ಷ ಪಿಂಚಣಿದಾರರಲ್ಲಿ ಸುಮಾರು 40 ಲಕ್ಷ ಪಿಂಚಣಿದಾರರು ತಿಂಗಳಿಗೆ ರೂ. 1,500 ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಮತ್ತು ಇತರರು ತಿಂಗಳಿಗೆ ಗರಿಷ್ಠ ರೂ. 2,000 - 2,500 ಹಣ ಪಡೆಯುತ್ತಿದ್ದಾರೆ. ಇಪಿಎಸ್ -95 ಎಂಬುದು ಇಪಿಎಫ್ಓ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ. ಇಪಿಎಸ್ -95 ರ ಅನ್ವಯ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ನೀಡಲಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications