2018ರ ಸಾಲಿನ ಬಜೆಟ್ ಮಂಡನೆಯ ಸಮಯದಲ್ಲಿ ಇನ್ನೂ ಹಲವಾರು ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಲಾಗಿತ್ತು. ವಿತ್ತ ಸಚಿವರು ಕಡಿಮೆ ವೇತನದ ಶ್ರೇಣಿಯ ವ್ಯಕ್ತಿಗಳಿಗೂ ಆದಾಯ ತೆರಿಗೆಯಲ್ಲಿ ಹಲವಾರು ವಿನಾಯಿತಿಗಳನ್ನು ಪ್ರಕಟಿಸಿದ್ದರು.
2018ರ ಸಾಲಿನ ಬಜೆಟ್ ಮಂಡನೆಯ ಸಮಯದಲ್ಲಿ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರು ಐತಿಹಾಸಿಕ ಆದಾಯ ತೆರಿಗೆ ದರಗಳನ್ನು ಮತ್ತು ಬದಲಾದ ತೆರಿಗೆ ವ್ಯಾಪ್ತಿಯ ಮೊತ್ತಗಳನ್ನು ಪ್ರಕಟಿಸಿದ್ದರು. ಆದಾಯ ತೆರಿಗೆಯಲ್ಲಿ ಕೆಲವಾರು ಬದಲಾವಣೆಗಳ ಮೂಲಕ ತೆರಿಗೆದಾರರಿಗೆ ಅನ್ವಯವಾಗುವ ಕೆಲವಾರು ಆದಾಯ ತೆರಿಗೆಯ ಬದಲಾವಣೆಗಳನ್ನೂ ಅವರು ಪ್ರಕಟಿಸಿದ್ದರು. ಇದರಲ್ಲಿ ದೀರ್ಘಾವಧಿ ಹೂಡಿಕೆಯ ಶೇರು ಮತ್ತು ಈಕ್ವಿಟಿ ಮ್ಯೂಚುವರ್ಲ್ ಫಂಡ್ ಗಳಿಂದ ಪಡೆದ ಲಾಭದ ತೆರಿಗೆಯಲ್ಲಿ ಸಡಿಲಿಕೆ ಹಾಗೂ ಹಿರಿಯ ನಾಗರಿಕರಿಗೆ ದೊರಕುವ ಬಡ್ಡಿಗಳ ಮೇಲಿನ ತೆರಿಗೆಯಲ್ಲಿ ಹಲವು ವಿನಾಯಿತಿಗಳನ್ನು ಪ್ರಕಟಿಸಿರುವುದು ಪ್ರಮುಖವಾಗಿವೆ.
2018ರ ಸಾಲಿನ ಬಜೆಟ್ ಮಂಡನೆಯ ಸಮಯದಲ್ಲಿ ಇನ್ನೂ ಹಲವಾರು ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಲಾಗಿತ್ತು. ವಿತ್ತ ಸಚಿವರು ಕಡಿಮೆ ವೇತನದ ಶ್ರೇಣಿಯ ವ್ಯಕ್ತಿಗಳಿಗೂ ಆದಾಯ ತೆರಿಗೆಯಲ್ಲಿ ಹಲವಾರು ವಿನಾಯಿತಿಗಳನ್ನು ಪ್ರಕಟಿಸಿದ್ದರು. ಅಲ್ಲದೇ ಪಾವತಿಸಬೇಕಾದ ಆದಾಯ ತೆರಿಗೆಯನ್ನು ಆಧರಿಸಿದ ಹೆಚ್ಚುವರಿ ತೆರಿಗೆ ಅಥವಾ ಸೆಸ್ ಗಳಲ್ಲಿ ಏರಿಕೆಯನ್ನೂ ಪ್ರಕಟಿಸಲಾಗಿದ್ದು 2018-19 ಆರ್ಥಿಕ ವರ್ಷದಿಂದ ಅನ್ವಯವಾಗಲಿದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ
2018ರ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಮುಖ ಹತ್ತು ಬದಲಾವಣೆಗಳ ವಿವರಗಳು ಇಲ್ಲಿವೆ..
1. 40,000 ಸ್ಟ್ಯಾಂಡರ್ಡ್ ಡಿಡಕ್ಷನ್
ವೇತನದಾರರು ಇನ್ನು ಮುಂದೆ ತಮ್ಮ ಸಂಬಳದ ಮೊತ್ತದಿಂದ ನೇರವಾಗಿ ರೂ 40,000ವನ್ನು ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ. ಇದಕ್ಕೂ ಮೊದಲು 19,200 ಪ್ರಯಾಣ ಹಾಗೂ 15,000ರೂ ವೈದ್ಯಕೀಯ ವೆಚ್ಚಕ್ಕಾಗಿ ಕಳೆಯಲಾಗುತ್ತಿತ್ತು. ಈ ಯೋಜನೆಯಿಂದ 2.5 ಕೋಟಿಗೂ ಹೆಚ್ಚು ವೇತನದಾರರಿಗೆ ಲಾಭವಾಗಲಿದೆ. ಪಿಂಚಣಿದಾರರಿಗೆ ಹಿಂದೆ ಪ್ರಯಾಣ ಮತ್ತು ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಆದರೆ ಈಗ ಅವರಿಗೂ ಈ ಯೋಜನೆಯ ಲಾಭ ಸಿಗಲಿದೆ. ಈಗ ವೇತನದಾರರು ಒಟ್ಟು 40,000 ರೂ ಆದಾಯ ಕಳೆದು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದಕ್ಕೂ ಹಿಂದೆ ಅಂದರೆ 2006-07ರ ವರೆಗೂ ಇದ್ದ ಈ ಬಗೆಯ ಕಳೆಯುವಿಕೆಯನ್ನು ಆ ಸಮಯದಲ್ಲಿ ರದ್ದು ಪಡಿಸಲಾಗಿತ್ತು. ಈಗ ಮತ್ತೊಮ್ಮೆ ಇದು ಪ್ರಾರಂಭವಾಗಿದ್ದು ಈ ಕಳೆಯುವಿಕೆಯ ಮೊತ್ತ ವೇತನದಾರನ ಆದಾಯ ಶ್ರೇಣಿಯನ್ನು ಅನುಸರಿಸಿದೆ. ನಿಲ್ಲಿ... ಚೆಕ್ ಬರೆಯುವ ಮುನ್ನ ಇಲ್ಲೊಮ್ಮೆ ನೋಡಿ
2. ಸೆಸ್ ನಲ್ಲಿ ಏರಿಕೆ
ವಿತ್ತ ಸಚಿವರು ಈ ವರ್ಷದ ಸೆಸ್ ಗಳ ದರವನ್ನು ಎಲ್ಲಾ ತೆರಿಗೆದಾರರಿಗೆ ಅನ್ವಯಿಸುವಂತೆ ಹಿಂದೆ ಇದ್ದ 3 % ದಿಂದ ಈಗ 4 % ಕ್ಕೇರಿಸಿದ್ದಾರೆ. ಇದು ತೆರಿಗೆದಾರ ಪಾವತಿಸುವ ನಿವ್ವಳ ತೆರಿಗೆಯ ಮೊತ್ತವನ್ನು ಆಧರಿಸಿರುತ್ತದೆ. ಮನೆಯಿಂದಲೇ OTP ಮೂಲಕ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿ
3. ದೀರ್ಘಾವಧಿ ಈಕ್ವಿಟಿ ಹೂಡಿಕೆಗಳಿಂದ ಲಭಿಸಿದ ಆದಾಯ ತೆರಿಗೆಯ ಪ್ರಸ್ತಾಪ
ಈಕ್ವಿಟಿ ಶೇರುಗಳು ಅಥವಾ ಈಕ್ವಿಟಿ ಆಧಾರಿತ ಹೂಡಿಕೆಗಳಿಂದ ಲಭಿಸಿದ ಆದಾಯ ಅಥವಾ ಕ್ಯಾಪಿಟಲ್ ಗೇಯ್ನ್ ಒಟ್ಟು 1,00,000 ಅಥವಾ ಮೀರಿದರೆ ಈ ಮೊತ್ತಕ್ಕೆ ಹತ್ತು ಶೇಖಡಾ ತೆರಿಗೆ (ಸೆಸ್ ಪ್ರತ್ಯೇಕ) ಯನ್ನು ಪ್ರಾರಂಭಿಸಲಾಗಿದೆ. ಆದರೆ ತೆರಿಗೆದಾರರಿಗೆ ಅನುಕೂಲವಾಗಲು ಈ ತೆರಿಗೆಯನ್ನು ಜನವರಿ 31, 2018ರ ವರೆಗೆ ಪಡೆದ ಆದಾಯಕ್ಕೆ ಅನ್ವಯವಾಗುವುದಿಲ್ಲ. ಆ ಬಳಿಕ ಪಡೆದ ಆದಾಯಕ್ಕೆ ಈ ತೆರಿಗೆ ಅನ್ವಯವಾಗಲಿದೆ.
4. ಈಕ್ವಿಟಿ ಮ್ಯೂಚುವಲ್ ಫಂಡ್ ನಿಂದ ಪಡೆದ ಆದಾಯದ ಲಾಭಾಂಶಕ್ಕೂ ತೆರಿಗೆ
ಈಕ್ವಿಟಿ ಮ್ಯೂಚುವಲ್ ಫಂಡ್ ನಿಂದ ಹೂಡಿಕೆದಾರ ಕಾಲಕಾಲಕ್ಕೆ ಪಡೆಯುವ ಲಾಭಾಂಶಕ್ಕೂ ಹತ್ತು ಶೇಖಡಾ ತೆರಿಗೆಯನ್ನು ವಿಧಿಸಲಾಗಿದೆ ಹಾಗೂ ಈ ತೆರಿಗೆಯನ್ನು ಎಲ್ಲ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಿಗೆ ಸಮಾನವಾಗಿ ಹಂಚಲಾಗುವುದು.
5. ಒಂದೇ ಕಂತಿನಲ್ಲಿ ಪಾವತಿಸಿದ ವಿಮಾ ಕಂತಿನ ತೆರಿಗೆಗೆ ಹೆಚ್ಚಿನ ಸೌಲಭ್ಯ
ಆರೋಗ್ಯ ವಿಮೆಯ ಕಂತುಗಳನ್ನು ತುಂಬುವಾಗ ಮುಂದಿನ ವರ್ಷಗಳಿಗೂ ಅನ್ವಯವಾಗುವಂತೆ ಮೊದಲೇ ಕಟ್ಟಿದರೆ ವಿಮಾ ಸೌಲಭ್ಯ ನೀಡುವ ಸಂಸ್ಥೆಗಳು ಕೆಲವು ವಿನಾಯಿತಿಗಳನ್ನು ನೀಡುತ್ತವೆ. ಇದಕ್ಕೂ ಮುನ್ನ ಓರ್ವ ವ್ಯಕ್ತಿ ವೈದ್ಯಕೀಯ ಸೌಲಭ್ಯಕ್ಕಾಗಿ ಒಟ್ಟು 25,000 ರೂವರೆಗೆ ಮಾತ್ರ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಿತ್ತು. 2018ರ ಬಜೆಟ್ ನಲ್ಲಿ ಪ್ರಕಟಿಸಿದಂತೆ ಒಂದು ವೇಳೆ ಒಂದು ವರ್ಷಕ್ಕೂ ಹೆಚ್ಚಿನ ವಾಯಿದೆ ಇರುವ ವೈದ್ಯಕೀಯ ವಿಮೆಯ ವಾರ್ಷಿಕ ಕಂತನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಈ ವಿಮೆ ಮುಂದಿನ ಎಷ್ಟು ವರ್ಷಗಳಿಗೆ ಅನ್ವಯವಾಗುತ್ತದೆಯೋ ಅದಕ್ಕನುಗುಣವಾಗಿ ವಿನಾಯಿತಿಯನ್ನು ಪಡೆಯಬಹುದಾಗಿದೆ. ಆದರೆ ಈ ವಿನಾಯಿತಿ ಕೆಲವು ಮಿತಿಗಳನ್ನೂ ಪಡೆದಿದೆ. ಉದಾಹರಣೆಗೆ ಒಂದು ವೇಳೆ ನಿಮ್ಮ ಆರೋಗ್ಯ ವಿಮೆಯ ಸಂಸ್ಥೆ ನಿಮ್ಮ ಎರಡು ವರ್ಷಗಳ ವಿಮೆಯ ವಾರ್ಷಿಕ ಕಂತನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಹತ್ತು ಶೇಖಡಾ ರಿಯಾಯಿತಿ ನೀಡುತ್ತೇವೆ ಎಂಬ ಸೌಲಭ್ಯ ನೀಡುತ್ತಾರೆ ಎಂದು ಅಂದುಕೊಳ್ಳೋಣ. ಇದು ಎರಡು ವರ್ಷಕ್ಕೆ ಇದು ನಲವತ್ತು ಸಾವಿರವಿದ್ದರೆ ಹೊಸ ಯೋಜನೆಯ ಅನ್ವಯ ವಿಮೆದಾರ ಎರಡೂ ವರ್ಷಗಳಿಗೆ ಪ್ರತಿವರ್ಷವೂ ರೂ. ಇಪ್ಪತ್ತು ಸಾವಿರದ ಸೌಲಭ್ಯವನ್ನು ಪಡೆಯಬಹುದು.
6. ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹೊರಬರುವಾಗ ಅನ್ವಯವಾಗುವ ಪ್ರಯೋಜನಗಳು
ರಾಷ್ಟ್ರೀಯ ಪಿಂಚಣಿ ಯೋಜನೆಯಂದ ಹೊರಬರುವಾಗ ತೆರಿಗೆ ವಿನಾಯಿತಿ ಇದುವರೆಗೆ ಕೇವಲ ಉದ್ಯೋಗಿಗಳಿಗೆ ಮಾತ್ರವೇ ಅನ್ವಯವಗುತ್ತಿತ್ತು. ಈಗ ಈ ಪ್ರಯೋಜನವನ್ನು ಉದ್ಯೋಗಿಗಳಲ್ಲದವರಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ಓರ್ವ ಉದ್ಯೋಗಿ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹೊರಬರಲು ಇದುವರೆಗೆ ತೊಡಗಿಸಿದ ಒಟ್ಟು ಮೊತ್ತದ ನಲವತ್ತು ಶೇಖಡಾವನ್ನು ಕಳೆದು ಆದಾಯ ತೆರಿಗೆ ಸಲ್ಲಿಸಬೇಕಿತ್ತು. ಈ ಪ್ರಯೋಜನ ಇದುವರೆಗೆ ಉದ್ಯೋಗಿಗಳಲ್ಲದವರಿಗೆ ಸಿಗುತ್ತಿರಲಿಲ್ಲ. ಆದರೆ 2018-19 ಹಣಕಾಸು ವರ್ಷದಿಂದ ಈ ಪ್ರಯೋಜನ ಉದ್ಯೋಗಿಗಳಲ್ಲದವರಿಗೂ ಲಭ್ಯವಾಗಲಿದೆ.
7. ಹಿರಿಯ ನಾಗರಿಕರ ಬಡ್ಡಿಗಳಿಗೆ ತೆರಿಗೆಯಲ್ಲಿ ವಿನಾಯಿತಿ
ಹಿರಿಯ ನಾಗರಿಕರು ಬ್ಯಾಂಕು ಮತ್ತು ಅಂಚೆ ಕಛೇರಿಗಳಲ್ಲಿ ತಾವು ಹೂಡಿದ ಹೂಡಿಕೆಗಳ ಮೇಲೆ ಈಗ ಹೆಚ್ಚಿನ ಬಡ್ಡಿ ಪಡೆಯಲಿದ್ದಾರೆ ಹಾಗೂ ತೆರಿಗೆಗೆ ಒಳಗಾಗುವ ಬಡ್ಡಿಯ ಮಿತಿಯೂ ಏರಲಿದೆ. ಈ ಯೋಜನೆಯಲ್ಲಿ ಮರುಕಳಿಸುವ ಹೂಡಿಕೆ (recurring deposits) ಯೂ ಸೇರಿದೆ. ಪ್ರಸ್ತುತ ಆದಾಯ ತೆರಿಗೆ ವಿಧಿ 80TTAಯ ಪ್ರಕಾರ ಉಳಿತಾಯ ಖಾತೆಯಲ್ಲಿ ಪಡೆಯುವ ಬಡ್ಡಿಯಲ್ಲಿ ರೂ. ಹತ್ತು ಸಾವಿರ ರೂ ನಷ್ಟು ಮೊತ್ತವನ್ನು ಕಳೆದು ತೆರಿಗೆ ಕಟ್ಟಬೇಕಾಗಿತ್ತು. ಈಗ ಆದಾಯ ತೆರಿಗೆ ವಿಧಿಯಲ್ಲಿ 80TTB ಎಂಬ ಹೊಸ ವಿಧಿಯೊಂದನ್ನು ಪ್ರಸ್ತುತಪಡಿಸಲಾಗಿದೆ. ಇದರನ್ವಯ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೂಲಕ ಲಭಿಸುವ ಬಡ್ಡಿಗಳಿಂದ ಒಟ್ಟು 50,000ರೂ ಕಳೆದು ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ. ಆದರೆ 80TTA ವಿಧಿ ಈಗ ಹಿರಿಯ ನಾಗರಿಕರಿಗೆ ಅನ್ವಯವಾಗುವುದಿಲ್ಲ.
ಅಲ್ಲದೇ ಕೇಂದ್ರ ಸರ್ಕಾರ ಈಗ ಇರುವ PMVVY ಅಥವಾ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಲ್ಲಿ ತೊಡಗಿಸಬಹುದಾದ ಮೊತ್ತವನ್ನು ಈಗಿರುವ ಏಳುವರೆ ಲಕ್ಷಗಳಿಂದ ಹದಿನೈದು ಲಕ್ಷ ರೂ. ಗಳಿಗೆ ಏರಿಸಿದೆ. ಹಾಗೂ ಈ ಯೋಜನೆಯನ್ನು 2020 ಮಾರ್ಚ್ ವರೆಗೂ ವಿಸ್ತರಿಸುವ ಪ್ರಸ್ತಾಪವಿರಿಸಿದೆ. ಈ ಯೋಜನೆ ಹಿರಿಯ ನಾಗರಿಕರಿಗಾಗಿಯೇ ಮೀಸಲಾದ ಯೋಜನೆಯಾಗಿದ್ದು ಖಚಿತ 8 % ಬಡ್ಡಿಯನ್ನು ಪಡೆಯಬಹುದು.
8. ಹಿರಿಯ ನಾಗರಿಕರಿಗೆ TDS ಅಥವಾ ಮೂಲದಲ್ಲಿ ಮುರಿದುಕೊಳ್ಳುವ ತೆರಿಗೆಯಲ್ಲಿ ಹೆಚ್ಚಳ
ಇದುವರೆಗೆ ಹಿರಿಯ ನಾಗರಿಕರ ಹೂಡಿಕೆಗಳ ಬಡ್ಡಿ ಹತ್ತು ಸಾವಿರ ಮೀರಿದರೆ ಇದಕ್ಕೆ ಅನ್ವಯವಾಗುವ ತೆರಿಗೆಯನ್ನು ಮೂಲದಲ್ಲಿಯೇ ಮುರಿದುಕೊಂಡು ನೀಡಲಾಗುತ್ತಿತ್ತು. ಈಗ ಈ ಮಿತಿಯನ್ನು ಐವತ್ತು ಸಾವಿರ ರೂ.ಗಳಿಗೆ ಏರಿಸಲಾಗಿದೆ.
9. ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿಧಿ 80D ಪ್ರಕಾರ ಹೆಚ್ಚಿನ ಮಿತಿಯ ಸೌಲಭ್ಯ
ಬಜೆಟ್ 2018ರಲ್ಲಿ ಆದಾಯ ತೆರಿಗೆ ವಿಧಿ 80D ಯ ಪ್ರಕಾರ ಹಿರಿಯ ನಾಗರಿಕರು ನೀಡುವ ವೈದ್ಯಕೀಯ ವೆಚ್ಚದ ವಿಮೆಯ ಕಂತಿನ ಮಿತಿಯನ್ನು ಮೂವತ್ತು ಸಾವಿರದಿಂದ ಐವತ್ತು ಸಾವಿರಕ್ಕೆ ಏರಿಸಲಾಗಿದೆ. ಅರವತ್ತು ವರ್ಷಕ್ಕೂ ಕಿರಿಯರಿಗೆ ಈ ಮಿತಿ ರೂ. 25,000 ಆಗಲಿದೆ. ಆದರೆ ಇವರ ತಂದೆ ತಾಯಿಯರು ಹಿರಿಯ ನಾಗರಿಕರಾಗಿದ್ದರೆ ಇವರು ಕುಟುಂಬದ ಒಟ್ಟು ವಿಮೆಯ ಕಂತನ್ನು ಪರಿಗಣಿಸಿ ಒಟ್ಟು ಎಪ್ಪತ್ತೈದು ಸಾವಿರ ರೂಪಾಯಿಯ ಮಿತಿಯನ್ನು ಪಡೆಯಬಹುದು (ರೂ. 25,000 + ರೂ. 50,000.) ಪ್ರಸ್ತುತ ಈ ಮಿತಿ ರೂ. 55,000 ಇದೆ.
10. ಹಿರಿಯ ನಾಗರಿಕರಿಗೆ ಕೆಲವು ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿ
ಹಿರಿಯ ನಾಗರಿಕರಿಗೆ ಕೆಲವು ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಗಾಗಿ ಮಾಡುವ ವೆಚ್ಚವನ್ನು ತೆರಿಗೆಯಿಂದ ಮುಕ್ತಪಡಿಸಲಾಗಿದೆ. ಇದುವರೆಗೆ ಅತಿ ಹಿರಿಯ ನಾಗರಿಕರಿಗೆ (ಅಂದರೆ ಎಂಭತ್ತು ವರ್ಷ ದಾಟಿದವರಿಗೆ) ಹಿಂದೆ ಇದ್ದ ಮಿತಿ ಎಂಭತ್ತು ಸಾವಿರ ಹಾಗೂ ಹಾಗೂ ಹಿರಿಯ ನಾಗರಿಕರಿಗೆ ಹಿಂದೆ ಇದ್ದ ಮಿತಿ ಅರವತ್ತು ಸಾವಿರದಿಂದ ಏಕಸಮಾನವಾಗಿ ಒಂದು ಲಕ್ಷ ರೂಗಳಿಗೆ ಏರಿಸಲಾಗಿದೆ. ಅಂದರೆ ಈ ಸೌಲಭ್ಯ ಅರವತ್ತು ದಾಟಿದ ಎಲ್ಲಾ ಹಿರಿಯರಿಗೆ ಒಂದು ಲಕ್ಷದ ಸೌಲಭ್ಯ ದೊರಕಲಿದೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications