ಟೆಲಿಕಾಂ ಕಂಪನಿಗಳು ಹೊಸ ಡೇಟಾ ಪ್ಯಾಕ್ ಗಳ ಮೂಲಕ ಗ್ರಾಹರಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ವೊಡಾಫೋನ್ ಹೊಸ ಪ್ರಿಪೇಯ್ಡ್ ಡೇಟಾ ಪ್ಯಾಕ್ ಅನ್ನು ಘೋಷಿಸಿದೆ.
ಈ ಯೋಜನೆಯಡಿ ರೂ. 21ರ ದರದಲ್ಲಿ ಕೇವಲ ಒಂದು ಗಂಟೆಯ ಅವಧಿಗೆ ಅನಿಯಮಿತ 4G/3G ಡೇಟಾವನ್ನು ನೀಡಲಿದೆ. ರಿಲಯನ್ಸ್ ಜಿಯೊ ಘೋಷಿಸಿರುವ ರೂ. 19 ಯೋಜನೆಯ ಪ್ರಿಪೇಡ್ ಆಫರ್ ಗೆ ಪ್ರತಿಸ್ಪರ್ಧಿಯಾಗಿ ಪರಿಚಯಿಸಲಾಗಿದೆ. ಇದು ಒಂದು ದಿನದ ಅವಧಿಯೊಂದಿಗೆ 4ಜಿ ವೇಗದ 150MB ಡೇಟಾ, ಅನಿಯಮಿತ ಧ್ವನಿ ಕರೆಗಳು, 20 SMS ಸಂದೇಶಗಳನ್ನು ಒಳಗೊಂಡಿದೆ.
ವೊಡಾಫೋನ್ ಪ್ಯಾಕ್ ಉಚಿತ ಅನಿಯಮಿತ ಕರೆಗಳನ್ನು ಒಳಗೊಂಡಿಲ್ಲ. ಇದು ತನ್ನ ಪ್ರಿಪೇಡ್ ಗ್ರಾಹಕರಿಗೆ ಅನಿಯಮಿತ ಡೇಟಾವನ್ನು ರೂ. 21ಕ್ಕೆ ನೀಡುತ್ತಿದ್ದು, ಕೇವಲ ಒಂದು ಗಂಟೆಗೆ ಸೀಮಿತವಾಗಿರುತ್ತದೆ. ಬಳಕೆದಾರರು ತಮ್ಮ ವೊಡಾಫೋನ್ ಪ್ರಿಪೇಡ್ ಸಂಖ್ಯೆಯಿಂದ *444*21# ಅನ್ನು ಡಯಲ್ ಮಾಡುವ ಮೂಲಕ ಯೋಜನೆಯನ್ನು ಸಕ್ರಿಯಗೊಳಿಸಬಹುದು.