For Quick Alerts
ALLOW NOTIFICATIONS  
For Daily Alerts

ಇಲ್ಲಿ ನೋಡಿ.. ಈ 10 ಆದಾಯ ತೆರಿಗೆ ನಿಯಮಗಳು ಬದಲಾಗಲಿವೆ

ಓರ್ವ ತೆರಿಗೆ ಪಾವತಿದಾರರಾಗಿ ಈ ವರ್ಷದ ಕೇಂದ್ರ ಬಜೆಟ್ ನ ತೆರಿಗೆಯ ಪ್ರಸ್ತಾವನೆಗಳ ಅರಿವು ನಮಗಿರಬೇಕಾದುದು ಅಗತ್ಯವಾಗಿದೆ. ಏಕೆಂದರೆ, ಮುಂಬರುವ ಹಣಕಾಸು ವರ್ಷದ (2018-2019) ದೈನಂದಿನ ಜೀವನ ಹಾಗೂ ನಮ್ಮ ಆದಾಯದ ಮೇಲೆ ಅವು ಪ್ರಭಾವ ಬೀರುತ್ತವೆ.

|

2018ರ ಆಯವ್ಯಯವು ಹೆಚ್ಚಿನವರ ನಿರೀಕ್ಷೆಗಳನ್ನೆಲ್ಲಾ ತಲೆ ಕೆಳಗಾಗಿಸಿದೆ. ತೆರಿಗೆ ಪಾವತಿದಾರರಿಗೆ ಮತ್ತು ವೇತನ ವರ್ಗದವರಿಗೆ ಹೆಚ್ಚಿನ ಲಾಭಾಗಳನ್ನು ಕೊಡುವಲ್ಲಿ ವಿಫಲಗೊಂಡಿದೆ. ಆದರೂ ಕೂಡಾ ನಿರ್ಧಿಷ್ಟವಾಗಿ ಹೇಳಬೇಕೆಂದರೆ, ಹಿರಿಯ ನಾಗರಿಕರು ಹಾಗು ಸಮಾಜದ ಕೆಲ ವರ್ಗದವರು ಈ ಬಜೆಟ್ ನಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡರೆಂದೇ ಹೇಳಬಹುದು. ಅದೇನೇ ಆಗಿರಲಿ, ಓರ್ವ ತೆರಿಗೆ ಪಾವತಿದಾರರಾಗಿ ಈ ವರ್ಷದ ಕೇಂದ್ರ ಬಜೆಟ್ ನ ತೆರಿಗೆಯ ಪ್ರಸ್ತಾವನೆಗಳ ಅರಿವು ನಮಗಿರಬೇಕಾದುದು ಅಗತ್ಯವಾಗಿದೆ. ಏಕೆಂದರೆ, ಮುಂಬರುವ ಹಣಕಾಸು ವರ್ಷದ (2018-2019) ದೈನಂದಿನ ಜೀವನ ಹಾಗೂ ನಮ್ಮ ಆದಾಯದ ಮೇಲೆ ಅವು ಪ್ರಭಾವ ಬೀರುತ್ತವೆ.

ಏಪ್ರಿಲ್ 1, 2018 ರಿಂದ ಬದಲಾವಣೆಗೊಳ್ಳಲಿರುವ ಅಂತಹ ಹತ್ತು ಆದಾಯ ತೆರಿಗೆ ಸಂಬಂಧಿತ ನಿಯಮಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.. ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?

1. ಆರೋಗ್ಯ ಮತ್ತು ಶೈಕ್ಷಣಿಕ ಸೆಸ್ (ತೆರಿಗೆ)

1. ಆರೋಗ್ಯ ಮತ್ತು ಶೈಕ್ಷಣಿಕ ಸೆಸ್ (ತೆರಿಗೆ)

ಹಿಂದೂ ಅವಿಭಕ್ತ ಕುಟುಂಬಗಳಿಗೆ ಮತ್ತು ಪ್ರತ್ಯೇಕ ಕುಟುಂಬಗಳಿಗೆ ಇಸವಿ 2018ರ ಬಜೆಟ್, ತೆರಿಗೆಯ ದರಗಳಲ್ಲಾಗಲೀ ಅಥವಾ ತೆರಿಗೆಯ ಸ್ಲ್ಯಾಬ್ ಗಳಲ್ಲಾಗಲೀ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 2018-2019ನೇ ಸಾಲಿನ ಅಸ್ಸಸ್ಮೆಂಟ್ ವರ್ಷದ ಅವೇ ತೆರಿಗೆ ದರಗಳು ಮತ್ತು ತೆರಿಗೆ ಸ್ಲ್ಯಾಬ್ ಗಳು 2019-20 ನೇ ಸಾಲಿನ ಅಸ್ಸಸ್ಮೆಂಟ್ ವರ್ಷಕ್ಕೂ ಲಾಗೂ ಆಗುತ್ತವೆ. ಇದರ ನಡುವೆ, "ಆರೋಗ್ಯ ಮತ್ತು ಶೈಕ್ಷಣಿಕ ಸೆಸ್" ಎಂಬ ಹೊಸ ಬಗೆಯ ತೆರಿಗೆಯ ಪ್ರಸ್ತಾವನೆಯು ಇಸವಿ 2018ರ ಬಜೆಟ್ ನಲ್ಲಿದೆ. ಆದಾಯ ತೆರಿಗೆಯ ಶೇ. 4ರಷ್ಟು ಈ ಹೊಸ ತೆರಿಗೆಯನ್ನು ವಿಧಿಸಲಾಗುತ್ತಿದ್ದು, ಇದು ಸರ್ಚಾರ್ಜ್ ಅನ್ನೂ ಒಳಗೊಂಡಿರುತ್ತದೆ. ಈಗ ಚಾಲ್ತಿಯಲ್ಲಿರುವ ಶೇ. 3ರಷ್ಟರ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆಗೆ ಬದಲಾಗಿ 2018-2019ನೇ ಸಾಲಿನ ವಿತ್ತೀಯ ವರ್ಷದಿಂದಲೇ ಈ ಹೊಸ ತೆರಿಗೆಯನ್ನು ವಿದಿಸಲಾಗುತ್ತಿದೆ.

2. ಸ್ಟ್ಯಾಂಡರ್ಡ್ ಡಿಡಕ್ಷನ್

2. ಸ್ಟ್ಯಾಂಡರ್ಡ್ ಡಿಡಕ್ಷನ್

ವೇತನ ಪಡೆದುಕೊಳ್ಳುವ ಉದ್ಯೋಗಿಗಳಿಗೆ ಸದ್ಯಕ್ಕೆ ಯಾವುದೇ ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯವಿಲ್ಲ. ಆದರೂ ಕೂಡಾ ಸಾರಿಗೆ ಭತ್ಯೆಯಲ್ಲಿ ವಿನಾಯಿತಿ ಮತ್ತು ವೈದ್ಯಕೀಯ ಖರ್ಚುವೆಚ್ಚಗಳ ಮರು ಪಾವತಿಯನ್ನು ಕೊಡಮಾಡಲಾಗಿದೆ. ಇಸವಿ 2018ರ ಬಜೆಟ್, ಗರಿಷ್ಟ 40,000 ರೂಪಾಯಿಗಳವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ನ ಪ್ರಸ್ತಾವನೆಯನ್ನು ಮುಂದಿರಿಸಿದೆ. ಆದರೆ ಒಂದು ವಿಷಯ, ಈಗ ಚಾಲ್ತಿಯಲ್ಲಿರುವ ಸಾರಿಗೆ ಭತ್ಯೆಯಲ್ಲಿನ ವಿನಾಯಿತಿ ಮತ್ತು ವೈದ್ಯಕೀಯ ಖರ್ಚುವೆಚ್ಚಗಳ ಮರುಪಾವತಿಯನ್ನು ಹಿಂಪಡೆದುಕೊಳ್ಳಲಾಗುವುದು. ಹೀಗಾಗಿ, ಒಟ್ಟಾರೆ ಪ್ರಯೋಜನವು ಕೇವಲ ರೂ. 5,800 ಆಗಲಿದೆ.

3. ಹಿರಿಯ ನಾಗರಿಕರಿಂದ ಗಳಿಸಲ್ಪಡುವ ಬಡ್ಡಿದರದಲ್ಲಿ ಕಡಿತ

3. ಹಿರಿಯ ನಾಗರಿಕರಿಂದ ಗಳಿಸಲ್ಪಡುವ ಬಡ್ಡಿದರದಲ್ಲಿ ಕಡಿತ

ಯಾವುದೇ ಬ್ಯಾಂಕ್, ಕೊ-ಆಪರೇಟಿವ್ ಸೊಸೈಟಿ, ಮತ್ತು ಅಂಚೆ ಕಛೇರಿಯಲ್ಲಿ ಇರಿಸಲಾಗಿರುವ ಠೇವಣಿ ಮೊತ್ತಕ್ಕೆ ಲಭಿಸುವ ಬಡ್ಡಿ ರೂಪದ ಆದಾಯದ ಮೇಲೆ ಪ್ರಸ್ತುತ ಎಲ್ಲಾ ವ್ಯಕ್ತಿಗಳಿಗೆ 10,000 ರೂಪಾಯಿಗಳವರೆಗಿನ ಕಡಿತಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ (ಟೈಮ್ ಡಿಪಾಸಿಟ್ ಗಳಿಗೆ ಇದು ಅನ್ವಯವಾಗುವುದಿಲ್ಲ).

ಬ್ಯಾಂಕುಗಳಲ್ಲಿ, ಕೊ-ಆಪರೇಟಿವ್ ಸೊಸೈಟಿಗಳಲ್ಲಿ ಮತ್ತು ಅಂಚೆ ಕಛೇರಿಗಳಲ್ಲಿ ಹಿರಿಯ ನಾಗರಿಕರು ಇರಿಸಿರುವ ಠೇವಣಿಗಳಿಗೆ ಲಭ್ಯವಾಗುವ ಬಡ್ಡಿರೂಪದ ಆದಾಯದ ಮೇಲೆ 50,000 ರೂಪಾಯಿಗಳವರೆಗೆ ಕಡಿತಕ್ಕೆ ಅವಕಾಶವನ್ನು ಕಲ್ಪಿಸುವ ಪ್ರಸ್ತಾವನೆ ಪ್ರಸ್ತುತ ವಿತ್ತೀಯ ವರ್ಷದ ಬಜೆಟ್ ನಲ್ಲಿದೆ. ಹಿರಿಯ ನಾಗರೀಕರಿಗೆ ಉಳಿತಾಯ ಖಾತೆಯಿಂದ ಲಭ್ಯವಾಗುವ ಬಡ್ಡಿರೂಪದ ಆದಾಯದ ಮೇಲೆ 80TTA ಸೆಕ್ಷನ್ ಅಡಿ ಯಾವುದೇ ತೆರನಾದ ಪ್ರತ್ಯೇಕ ಡಿಡಕ್ಷನ್ ದೊರೆಯುವುದಿಲ್ಲ.

4. ನಿರ್ಧಿಷ್ಟ ರೋಗಗಳಿಗಾಗಿ ಹಿರಿಯ ನಾಗರಿಕರಿಗೆ ಕೊಡುವ ವೈದ್ಯೋಪಚಾರ (ಸೆಕ್ಷನ್ 80DDB)

4. ನಿರ್ಧಿಷ್ಟ ರೋಗಗಳಿಗಾಗಿ ಹಿರಿಯ ನಾಗರಿಕರಿಗೆ ಕೊಡುವ ವೈದ್ಯೋಪಚಾರ (ಸೆಕ್ಷನ್ 80DDB)

ಚಾಲ್ತಿಯಲ್ಲಿರುವ ಅವಕಾಶಗಳ ಪ್ರಕಾರ, ಭಾರತೀಯ ನಾಗರೀಕರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ (ಹೆಚ್ ಯೂಎಫ್), ನಿರ್ಧಿಷ್ಟ ರೋಗಗಳ (ಉದಾ: ಕ್ಯಾನ್ಸರ್, ಏಡ್ಸ್ ಇತ್ಯಾದಿ) ಚಿಕಿತ್ಸಾ ವೆಚ್ಚಗಳಿಗೆ ಸಂಬಂಧಿಸಿದ ಹಾಗೆ ಕಡಿತ ಅಥವಾ ಡಿಡಕ್ಷನ್ ಲಭ್ಯವಿದೆ. ಹಿರಿಯ ನಾಗರೀಕರಿಗೆ ತಗಲುವ ಖರ್ಚುವೆಚ್ಚಗಳ ಪೈಕಿ 60,000 ರೂಪಾಯಿಗಳ ಮಿತಿಯವರೆಗೆ ಈ ಕಡಿತವು ಲಭ್ಯವಿದೆ ಮತ್ತು ಹಾಗೆಯೇ ಅತಿ ಹಿರಿಯ ನಾಗರೀಕರಿಗೆ ಕಡಿತದ ಮಿತಿಯು 80,000 ರೂಪಾಯಿಗಳವರೆಗಿನದ್ದಾಗಿದೆ. ಪ್ರಸ್ತುತ ಬಜೆಟ್, ಈ ಮೇಲಿನ ಕಡಿತ ಮಿತಿಗಳನ್ನು, ಎರಡೂ ವರ್ಗಗಳಿಗೆ ಏಕ ಪ್ರಕಾರವಾಗಿ ರೂ. 1,00,000 ಗಳಿಗೆ ಏರಿಸುವ ಪ್ರಸ್ತಾವನೆಯನ್ನಿರಿಸಿಕೊಂಡಿದೆ.

5. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಆರೋಗ್ಯ ವಿಮೆ, ವೈದ್ಯಕೀಯ ಖರ್ಚುವೆಚ್ಚಗಳಿಗಾಗಿ ಕಡಿತದಲ್ಲಿ ಹೆಚ್ಚಳ (ಸೆಕ್ಷನ್ 80D)

5. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಆರೋಗ್ಯ ವಿಮೆ, ವೈದ್ಯಕೀಯ ಖರ್ಚುವೆಚ್ಚಗಳಿಗಾಗಿ ಕಡಿತದಲ್ಲಿ ಹೆಚ್ಚಳ (ಸೆಕ್ಷನ್ 80D)

ಚಾಲ್ತಿಯಲ್ಲಿರುವ ಅವಕಾಶಗಳ ಪ್ರಕಾರ, ನಾಗರೀಕರಿಗೆ ಅಥವಾ ಹಿಂದೂ ಅವಿಭಕ್ತ ಕುಟುಂಬಕ್ಕೆ, ಆರೋಗ್ಯ ವಿಮಾ ಪ್ರೀಮಿಯಂ ಗೆ ಪಾವತಿಸುವುದಕ್ಕಾಗಿ ಗರಿಷ್ಟ 30,000 ರೂಪಾಯಿಗಳವರೆಗಿನ ಕಡಿತಕ್ಕೆ ಆಸ್ಪದವಿದೆ. ಹಿರಿಯ ನಾಗರೀಕರಿಗೆ ಪ್ರಿವೆಂಟೀವ್ ಹೆಲ್ತ್ ಚೆಕ್-ಅಪ್ ಗಾಗಿ ಪಾವತಿಸುವ 5,000 ರೂಪಾಯಿಗಳನ್ನೂ ಈ ಕಡಿತವು ಒಳಗೊಂಡಿದೆ. ಇದಕ್ಕೆ ಪರ್ಯಾಯವಾಗಿ ವಿಮೆಯನ್ನು ಮಾಡಿಸದೇ ಇರುವ ಅತಿ ಹಿರಿಯ ನಾಗರೀಕರು ವೈದ್ಯಕೀಯ ಖರ್ಚುವೆಚ್ಚಗಳಿಗಾಗಿ 30,000 ರೂಪಾಯಿಗಳವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಇಸವಿ 2018ರ ಬಜೆಟ್, ಗರಿಷ್ಟ 50,000 ರೂಪಾಯಿಗಳವರೆಗಿನ ಕಡಿತಕ್ಕೆ ಅವಕಾಶವನ್ನು ಕಲ್ಪಿಸುವ ಪ್ರಸ್ತಾವನೆಯನ್ನು ಹೊಂದಿದೆ. ಇದರ ಹೊರತಾಗಿ ಹಿರಿಯ ನಾಗರೀಕರೂ ಸಹ ವೈದ್ಯಕೀಯ ಖರ್ಚುವೆಚ್ಚಗಳಿಗಾಗಿ ಕಡಿತವನ್ನು ಕ್ಲೈಮ್ ಮಾಡಬಹುದು.

6. ಉದ್ಯೋಗ ಬದಲಾವಣೆ ಅಥವಾ ಕಳೆದುಕೊಂಡಾಗ ಕೊಡುವ ಪರಿಹಾರ

6. ಉದ್ಯೋಗ ಬದಲಾವಣೆ ಅಥವಾ ಕಳೆದುಕೊಂಡಾಗ ಕೊಡುವ ಪರಿಹಾರ

ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಹಾಗೆ ಕೆಲವು ಪರಿಹಾರ ಕ್ರಮಗಳು ಈಗ ಸದ್ಯಕ್ಕೆ ತೆರಿಗೆ ನಿಯಮಾವಳಿಗಳ ವ್ಯಾಪ್ತಿಯಿಂದ ಹೊರಗಿದೆ. ಇದು "ಬೇಸ್ ಇರೋಶನ್" ಮತ್ತು ವಿತ್ತೀಯ ನಷ್ಟಕ್ಕೆ ಎಡೆಮಾಡಿಕೊಡುತ್ತದೆ.

"ನೇಮಕಾತಿಗೆ ಸಂಬಂಧಪಟ್ಟ ಯಾವುದೇ ರೀತಿಯ ಒಪ್ಪಂದದ ಷರತ್ತುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ, ಉದ್ಯೋಗದಲ್ಲಿನ ಬದಲಾವಣೆ ಅಥವಾ ಉದ್ಯೋಗದಿಂದಲೇ ತೆಗೆದು ಹಾಕಿರುವುದಕ್ಕೆ ಸಂಬಂಧ ಪಟ್ಟ ಹಾಗೆ ಯಾವುದೇ ಪರಿಹಾರ ಅಥವಾ ಇತರ ಪಾವತಿಗಳು ಯಾವುದೇ ಓರ್ವ ವ್ಯಕ್ತಿಗೆ ಕೊಡುವುದು ಬಾಕಿ ಇದ್ದಲ್ಲಿ ಅಥವಾ ಅಂತಹ ಪರಿಹಾರ ಅಥವಾ ಇತರ ಪಾವತಿಗಳನ್ನು ಯಾವುದೇ ಓರ್ವ ವ್ಯಕ್ತಿ ಸ್ವೀಕರಿಸಿದ್ದಲ್ಲಿ, "ಇತರ ಮೂಲಗಳಿಂದ ಆದಾಯ" ಎಂಬ ತಲೆಬರಹದಡಿ, ಅಂತಹ ಪರಿಹಾರಕ್ಕೆ ತೆರಿಗೆ ವಿಧಿಸಬಹುದಾಗಿದೆ" ಎಂದು ಡೆಲ್ಲಾಯಿಟ್ ನ ವರದಿ ಸೂಚಿಸುತ್ತದೆ.

7. ಎನ್ ಪಿಎಸ್ ತೆರಿಗೆ ಮುಕ್ತ ವಾಪಸಾತಿ ಲಾಭ ವಿಸ್ತರಿಸುವುದು

7. ಎನ್ ಪಿಎಸ್ ತೆರಿಗೆ ಮುಕ್ತ ವಾಪಸಾತಿ ಲಾಭ ವಿಸ್ತರಿಸುವುದು

ನ್ಯಾಷನಲ್ ಪೆನ್ಶನ್ ಸಿಸ್ಟಮ್ ಗೆ ದೇಣಿಗೆಯನ್ನು ಸಲ್ಲಿಸುವ ಉದ್ಯೋಗಿಯೋರ್ವ ತನ್ನ ಖಾತೆಯನ್ನು ಅಂತ್ಯಗೊಳಿಸಿದಲ್ಲಿ ಅಥವಾ ಆ ಉದ್ಯೋಗಿಯು ತನ್ನ ಖಾತೆಯಿಂದ ಹೊರಬರಲು ಇಚ್ಚಿಸಿದಲ್ಲಿ, ಆತನಿಗೆ ಸಂದಾಯವಾಗುವ ಒಟ್ಟು ಮೊತ್ತದ ಮೇಲೆ ಶೇ. 40ರಷ್ಟು ವಿನಾಯಿತಿಗೆ ಅವಕಾಶವಿದೆ. ಉದ್ಯೋಗಿಗಳಲ್ಲದ ಚಂದಾದಾರರಿಗೆ ಈ ರೀತಿಯ ವಿನಾಯಿತಿಯು ಲಭ್ಯವಿರಲಿಲ್ಲ. ಇಸವಿ 2018ರ ಬಜೆಟ್, ಈ ಮೇಲಿನ ರಿಯಾಯಿತಿ ಸೌಲಭ್ಯವನ್ನು ಎನ್.ಪಿ.ಎಸ್. ನ ಎಲ್ಲಾ ಚಂದಾದಾರರಿಗೂ ವಿಸ್ತರಿಸುವ ಕುರಿತು ಪ್ರಸ್ತಾಪಿಸಿದೆ.

8. ಈಕ್ವಿಟಿ ಷೇರುಗಳ ಮೇಲಿನ ದೀರ್ಘಕಾಲೀನ ಬಂಡವಾಳ ಲಾಭದ ತೆರಿಗೆ ಸಾಧ್ಯತೆ

8. ಈಕ್ವಿಟಿ ಷೇರುಗಳ ಮೇಲಿನ ದೀರ್ಘಕಾಲೀನ ಬಂಡವಾಳ ಲಾಭದ ತೆರಿಗೆ ಸಾಧ್ಯತೆ

ಈಕ್ವಿಟಿ-ಒರಿಯೆಂಟೆಡ್ ಮ್ಯೂಚ್ಯುವಲ್ ಫಂಡ್ (ಎಂಎಪ್) ಯೋಜನೆಗಳು ಹಾಗೂ ಜೊತೆಗೆ ಈಕ್ವಿಟಿ ಷೇರುಗಳ ಮಾರಾಟದಿಂದ ಹುಟ್ಟಬಹುದಾದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ (ಎಲ್.ಟಿ.ಸಿ.ಜಿ) ಗಳು ಒಂದು ವರ್ಷದೊಳಗೆ ಒಂದು ಲಕ್ಷ ರೂಪಾಯಿಗಳಿಗಿಂತಲೂ ಅಧಿಕವಾದರೆ, ಅವುಗಳ ಮೇಲೆ ಶೇ. 10ರಷ್ಟು ತೆರಿಗೆಯನ್ನು ಹೇರಲು ಇಸವಿ 2018 ರ ಬಜೆಟ್ ಪ್ರಸ್ತಾವಿಸಿದೆ.

9. ನಿಗದಿತ ಬಾಂಡ್ ಗಳಲ್ಲಿ ಬಂಡವಾಳ ಹೂಡಿರುವ ದೀರ್ಘಕಾಲೀನ ಬಂಡವಾಳದ ತೆರಿಗೆ ವಿನಾಯಿತಿ

9. ನಿಗದಿತ ಬಾಂಡ್ ಗಳಲ್ಲಿ ಬಂಡವಾಳ ಹೂಡಿರುವ ದೀರ್ಘಕಾಲೀನ ಬಂಡವಾಳದ ತೆರಿಗೆ ವಿನಾಯಿತಿ

ದೀರ್ಘಕಾಲೀನ ಕ್ಯಾಪಿಟಲ್ ಅಸ್ಸೆಟ್ ನ ವರ್ಗಾವಣೆಯಿಂದ ಹಾಗೂ ಅಂತಹ ವರ್ಗಾವಣೆಯ ದಿನಾಂಕದ ಬಳಿಕ ಆರು ತಿಂಗಳೊಳಗಾಗಿ ಯಾವುದೇ ಸಮಯದಲ್ಲಿ ಲಾಂಗ್ ಟರ್ಮ್ ಸ್ಪೆಸಿಫೈಡ್ ಅಸ್ಸೆಟ್ ನ ಮೇಲಿನ ಹೂಡಿಕೆಯಿಂದ ಹುಟ್ಟಬಹುದಾದ ಕ್ಯಾಪಿಟಲ್ ಗೇನ್ ಗೆ ಸೆಕ್ಷನ್ 54EC ಅಡಿಯಲ್ಲಿ ಕಡಿತಕ್ಕೆ ಅವಕಾಶವಿದೆ. ಇಲ್ಲಿ ಲಾಂಗ್ ಟರ್ಮ್ ಸ್ಪೆಸಿಫೈಡ್ ಅಸ್ಸೆಟ್ ಅಂದರೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್.ಹೆಚ್.ಎ.ಐ) ಅಥವಾ ದಿ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಿಮಿಟೆಡ್ (ಆರ್.ಇ.ಸಿ.ಎಲ್) ನವರು, ಇಸವಿ 2007 ರ ಏಪ್ರಿಲ್ ತಿಂಗಳಿನ ಮೊದಲ ದಿನದಂದು ಅಥವಾ ಅನಂತರ ಕೊಡಮಾಡಿದ ಹಾಗೂ ಮೂರು ವರ್ಷಗಳ ಬಳಿಕ ಪುನ: ರೀಡೀಮ್ ಮಾಡಬಹುದಾದ ಯಾವುದೇ ಬಾಂಡ್ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಇನ್ನಿತರ ಬಾಂಡ್. ಇದೀಗ ಸೆಕ್ಷನ್ 54EC, ಲಾಂಗ್ ಟರ್ಮ್ ಅಸ್ಸೆಟ್ (ಅದು ಭೂಮಿಯಾಗಿರಬಹುದು ಅಥವಾ ಕಟ್ಟಡವಾಗಿರಬಹುದು ಅಥವಾ ಇವೆರಡೂ) ಆಗಿರಬಹುದು. ನಿರ್ಧಿಷ್ಟ ಬಾಂಡ್ ಗಳ ರೀಡೀಮೇಬಲ್ ಅವಧಿಯು ಐದು ವರ್ಷಗಳಾಗಿದ್ದಲ್ಲಿ ಮಾತ್ರ ತೆರಿಗೆ ವಿನಾಯತಿ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸುವ ಪ್ರಸ್ತಾವನೆ ಇದೆ.

10. ಸಿಂಗಲ್ ಪ್ರೀಮಿಯಂ ಆರೋಗ್ಯ ವಿಮಾ ಪಾಲಿಸಿಗಳ ತೆರಿಗೆ

10. ಸಿಂಗಲ್ ಪ್ರೀಮಿಯಂ ಆರೋಗ್ಯ ವಿಮಾ ಪಾಲಿಸಿಗಳ ತೆರಿಗೆ

ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಸಿಂಗಲ್ ಪ್ರೀಮಿಯಂ ಆರೋಗ್ಯ ವಿಮಾ ಪಾಲಿಸಿಗಳ ವಿಚಾರದಲ್ಲಿ, ಪಾಲಿಸಿಯು ಎಷ್ಟು ವರ್ಷಗಳ ಕವರೇಜ್ ಅನ್ನು ಒಳಗೊಂಡಿರುತ್ತದೆಯೋ ಆ ಅವಧಿಗೆ ಸಮಾನಾನುಪಾತದಲ್ಲಿ ಕಡಿತಕ್ಕೆ ಅವಕಾಶವನ್ನು ಕಲ್ಪಿಸಬೇಕೆಂದು ಇಸವಿ 2018ರ ಬಜೆಟ್ ಪ್ರಸ್ತಾಪಿಸುತ್ತದೆ. ಪಾಲಿಸಿಯಲ್ಲಿ ಸೂಚಿತವಾಗಿರುವ ಹಣಕಾಸಿನ ಮಿತಿಯ ಮೇಲೆ ಇದು ಅವಲಂಬಿತವಾಗಿರುತ್ತದೆ.

English summary

These 10 Income Tax Rules will Change from April 2018

Here we are taking a look at 10 such tax rules which will change from April 1, 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X