For Quick Alerts
ALLOW NOTIFICATIONS  
For Daily Alerts

ಯೂನಿಯನ್ ಬ್ಯಾಂಕ್ ರೂ. 313.84 ಕೋಟಿ ವಂಚನೆ ಪ್ರಕರಣ, ಷೇರುಗಳು ಭಾರೀ ಕುಸಿತ

ಹೈದರಾಬಾದ್ ನ ತೋಟೆಮ್ ಇನ್ಫಾಸ್ಟ್ರಕ್ಚರ್ ಕಂಪನಿ ಯೂನಿಯನ್ ಬ್ಯಾಂಕಿಗೆ ರೂ. 313.84 ಕೋಟಿ ವಂಚಿಸಿರುವ ಪ್ರಕರಣವನ್ನು ಸಿಬಿಐ ದಾಖಲಿಸಿದೆ.

|

ನಿರವ್ ಮೋದಿ ವಂಚನೆ ಪ್ರಕರಣ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಯೂನಿಯನ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೈದರಾಬಾದ್ ನ ತೋಟೆಮ್ ಇನ್ಫಾಸ್ಟ್ರಕ್ಚರ್ ಕಂಪನಿ ಯೂನಿಯನ್ ಬ್ಯಾಂಕಿಗೆ ರೂ. 313.84 ಕೋಟಿ ವಂಚಿಸಿರುವ ಪ್ರಕರಣವನ್ನು ಸಿಬಿಐ ದಾಖಲಿಸಿದೆ.

 
ಯೂನಿಯನ್ ಬ್ಯಾಂಕ್ ರೂ. 313.84 ಕೋಟಿ ವಂಚನೆ ಪ್ರಕರಣ, ಷೇರುಗಳು ಕುಸಿತ

ವಂಚನಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟೆಮ್ ಇನ್ಫಾಸ್ಟ್ರಕ್ಚರ್ ಕಂಪನಿ ಹಾಗು ಅದರ ಪ್ರವರ್ತಕರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ಧಾಳಿ ನಡೆಸಿ ಶೋಧ ಕಾರ್ಯ ನಡೆಸಿವೆ.

 

ಎಂಟು ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ಯೂನಿಯನ್‌ ಬ್ಯಾಂಕ್‌ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿತ್ತು. ತೋಟೆಮ್ ಇನ್ಫಾಸ್ಟ್ರಕ್ಚರ್ ಕಂಪನಿ ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣದಂತಹ ಯೋಜನೆಗಳನ್ನು ನಡೆಸುತ್ತಿತ್ತು. ಅಲ್ಲದೆ ವಿವಿಧ ಕಂಪನಿಗಳ ಉಪಗುತ್ತಿಗೆಯನ್ನೂ ಪಡೆದುಕೊಂಡಿತ್ತು.

ಕಂಪನಿ ಎಂಟು ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಿದ್ದು, ಈ ಎಂಟು ಬ್ಯಾಂಕುಗಳಿಗೆ ಒಟ್ಟಾರೆ ರೂ. 1394.43 ಕೋಟಿ ಸಾಲ ಪಾವತಿಸಬೇಕಾಗಿದೆ. ಸಿಬಿಐ ತೋಟೆಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ತನಿಖೆ ನಡೆಸಿದ ನಂತರ ಯೂನಿಯನ್ ಬ್ಯಾಂಕ್ ಷೇರುಗಳು ಶೇ. 9.11ನಷ್ಟು ಕಡಿಮೆಯಾಗಿವೆ.

Read more about: banking frauds money finance news
English summary

After PNB, Union Bank of India hit by bank fraud, Shares huge decline

CBI has registered a Rs1,394.43 crore bank fraud case against Hyderabad-based Totem Infrastructure Ltd on a complaint by Union Bank of India
Story first published: Friday, March 23, 2018, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X