ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಒಪ್ಪಂದವು ಭಾರತದಲ್ಲಿ ಸುಮಾರು 10 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವಾಲ್‌ಮಾರ್ಟ್ ಸಿಇಒ ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.
ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಒಪ್ಪಂದವು ಭಾರತದಲ್ಲಿ ಸುಮಾರು 10 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವಾಲ್‌ಮಾರ್ಟ್ ಸಿಇಒ ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.
ಇದರಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೇರಿದ್ದು, ಯುಎಸ್ ಮೂಲದ ರಿಟೇಲ್ ದೈತ್ಯ ವಾಲ್‌ಮಾರ್ಟ್ ಕಂಪನಿ ಫ್ಲಿಪ್ಕಾರ್ಟ್ ನ ಶೇ. 77 ರಷ್ಟು ಪಾಲನ್ನು 16 ಶತಕೋಟಿ ಡಾಲರ್ ಗೆ ಖರೀದಿಸಿದೆ.

ವಾಲ್‌ಮಾರ್ಟ್ ಸ್ಥಳೀಯ ಸರಕುಗಳನ್ನು ಖರೀದಿಸುವುದರಿಂದ ಭಾರತದ ಆರ್ಥಿಕತೆಗೆ ಲಾಭವಾಗಲಿದೆ. ಹೀಗಾಗಿ ಅಸಂಖ್ಯ ಉದ್ಯೋಗಗಳು ಪ್ರತ್ಯಕ್ಷ-ಪರೋಕ್ಷವಾಗಿ ಸೃಷ್ಟಿಯಾಗಲಿವೆ. ವಾಲ್‌ಮಾರ್ಟ್ ಫ್ಲಿಪ್ಕಾರ್ಟ್ ಒಪ್ಪಂದಕ್ಕೆ ಸರ್ಕಾರದಿಂದ ಬೆಂಬಲ ಸಿಗುವ ಭರವಸೆ ಇದೆ ಎಂದು ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಒಪ್ಪಂದವನ್ನು ಘೋಷಿಸಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಥವಾ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಡೌಗ್ ಮೆಕ್ಮಿಲ್ಲನ್ ಹೇಳಿದ್ದಾರೆ. ಫ್ಲಿಪ್‌ಕಾರ್ಟ್ ಜತೆಗಿನ ವಹಿವಾಟಿಗೆ ಸಂಬಂಧಿಸಿದಂತೆ ಅಗತ್ಯವಾದ ತೆರಿಗೆ ಪಾವತಿಸಲಾಗುವುದು ಹಾಗು ತೆರಿಗೆ ನಿಯಮಗಳನ್ನು ಪಾಲಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಪೂರೈಕೆ ಘಟಕ ಅಭಿವೃದ್ಧಿಪಡಿಸುವುದರ ಮುಖಾಂತರ ಹಾಗು ಹೂಡಿಕೆಯೊಂದಿಗೆ ಹೊಸ ಪ್ರತ್ಯಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಸಣ್ಣ ಉದ್ಯಮಗಳನ್ನು ಬೆಂಬಲಿಸಲಾಗುವುದು. ಸ್ಟಾರ್ಟ್‌ಅಪ್ ಮತ್ತು ಇ-ಕಾಮರ್ಸ್ಕ್ಷೇತ್ರಗಳು ಭಾರತದ ಆರ್ಥಿಕತೆಯನ್ನು ಮುನ್ನಡೆಸಲಿವೆ ಎಂದು ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications