ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನಾ ಪ್ರಕರಣದಲ್ಲಿ ಸಿಲುಕಿರುವ ನೀರವ್ ಮೋದಿ ವಿರುದ್ದ ಜಾರಿ ನಿರ್ದೇಶನಾಲಯವು ಹೊಸ ಕ್ರಮಕ್ಕೆ ಮುಂದಾಗಿದ್ದು, ನೀರವ್ ಮೋದಿಗೆ ಸೇರಿದ ರೂ. 170 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನಾ ಪ್ರಕರಣದಲ್ಲಿ ಸಿಲುಕಿರುವ ನೀರವ್ ಮೋದಿ ವಿರುದ್ದ ಜಾರಿ ನಿರ್ದೇಶನಾಲಯವು ಹೊಸ ಕ್ರಮಕ್ಕೆ ಮುಂದಾಗಿದ್ದು, ನೀರವ್ ಮೋದಿಗೆ ಸೇರಿದ ರೂ. 170 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ಹೆಳಿದ್ದಾರೆ.

ಹಲವಾರು ಬ್ಯಾಂಕ್ ಖಾತೆಗಳು, ಸ್ಥಿರ ಸ್ವತ್ತುಗಳು ಮತ್ತು ನಿರಾವ್ ಮೋದಿ, ಅವರ ಸಹವರ್ತಿಗಳು ಮತ್ತು ವ್ಯಾಪಾರ-ಸಂಬಂಧಿತ ಸಂಸ್ಥೆಗಳ ಷೇರು ಹೂಡಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಮುಟ್ಟಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ
ತಿಳಿಸಿದೆ.
ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ಮುಖ್ಯವಾಗಿ ಮುಂಬೈ ಹಾಗು ಸೂರತ್ ನಲ್ಲಿರುವ ನೀರವ್ ಮೋದಿ ಒಡೆತನದ ಕಂಪನಿಗಳಿಗೆ ಸೇರಿದ ಸುಮಾರು ರೂ. 72 ಕೋಟಿ ಆಸ್ತಿ ಒಳಗೊಂಡಿದೆ. ಅಂಧೇರಿಯಲ್ಲಿನ ರೂ. 63 ಕೋಟಿ ಮಾರುಕಟ್ಟೆ ಮೌಲ್ಯದ ಎಚ್‌ಸಿಎಲ್ ಹೌಸ್ ಅನ್ನು ಕೂಡ ಮುಟ್ಟುಗೋಲು ಮಾಡಲಾಗಿದೆ.
ಕಳೆದ ವಾರ, ಗೀತಾಂಜಲಿ ಗ್ರೂಪ್ ನಿಂದ ಸುಮಾರು ರೂ. 85 ಕೋಟಿ ಮೌಲ್ಯದ 34,000 ಆಭರಣಗಳನ್ನು ಸಂಸ್ಥೆ ವಶಪಡಿಸಿಕೊಂಡಿದೆ. ಇದು ನೀರವ್ ಮೋದಿ ಅವರ ಚಿಕ್ಕಪ್ಪ ಮತ್ತು ಆಭರಣಕಾರ ಮೆಹುಲ್ ಚೋಕ್ಸಿಯವರ ಒಡೆತನದಲ್ಲಿದೆ.
ಈಗ ನೀರವ್ ಮೋದಿ ಮತ್ತು ಚೋಕ್ಸಿ ಯುನೈಟೆಡ್ ಸ್ಟೇಟ್ಸ್ (ಯುಎಸ್) ನಲ್ಲಿರಬಹುದೆಂದು ಏಜೆನ್ಸಿಗಳು ಅನುಮಾನಿಸಿವೆ. ಮಾರ್ಚ್ ವರೆಗಿನ ಮಾಹಿತಿ ಪ್ರಕಾರ ಈ ಪ್ರಕರಣದಲ್ಲಿನ ಎಲ್ಲ ಆರೋಪಿಗಳ ರೂ. 7,600 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಲಾಗಿದೆ.


Click it and Unblock the Notifications