ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ರೂ. 25ರಷ್ಟನ್ನು ಕಡಿತಗೊಳಿಸಬಹುದಾಗಿದೆ. ಆದರೆ ಸರ್ಕಾರ ಹಾಗೆ ಮಾಡುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ರೂ. 25ರಷ್ಟನ್ನು ಕಡಿತಗೊಳಿಸಬಹುದಾಗಿದ್ದರೂ ಸಹ ಸರ್ಕಾರ ಹಾಗೆ ಮಾಡುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 30 ಪೈಸೆ ಏರಿಕೆ ಕಂಡು ರೂ. 77 ರ. ಗಡಿ ದಾಟಿದ ಸಂದರ್ಭದಲ್ಲಿ ಪಿ. ಚಿದಂಬರಂ ಅವರು ಕೇಂದ್ರ ಸರಕಾರದ ವಿರುದ್ಧ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ 10 ವೈಫಲ್ಯಗಳು ಯಾವುವು ಗೊತ್ತೆ?
ಸರ್ಕಾರ ರೂ. 25 ಬಾಚಿಕೊಳ್ಳುತ್ತಿದೆ!
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಾಗ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂ.ಗಳನ್ನು ಉಳಿಸುತ್ತಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ ಹೆಚ್ಚುವರಿ ತೆರಿಗೆ ರೂ. 10 ವಿಧಿಸುತ್ತಿದೆ. ಅಂದರೆ ಸರ್ಕಾರ ಪ್ರತಿ ಲೀಟರ್ ಗೆ ಜನರಿಂದ ರೂ. 25 ಹಣ ಬಾಚಿಕೊಳ್ಳುತ್ತಿದೆ ಎಂದರು.
ಜನರಿಗೆ ವಂಚನೆ
ಈ ಹಣ ಸಾಮಾನ್ಯ ಗ್ರಾಹಕನದ್ದಾಗಿರುವುದರಿಂದ ಪೆಟ್ರೋಲ್ ದರ ರೂ. 25ರಷ್ಟು ಕಡಿತ ಮಾಡಬಹುದು. ಆದರೆ ಸರ್ಕಾರ ಒಂದು ಅಥವಾ ಎರಡು ರೂಪಾಯಿಗಳನ್ನು ಕಡಿಮೆ ಮಾಡುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದಿದ್ದಾರೆ.
ಟೀಕೆಯ ಅಸ್ತ್ರ
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಿರಲಿಲ್ಲ. ಆದರೆ ತದನಂತರದಲ್ಲಿ ಏರಿಕೆಯಾಗುತ್ತಲೇ ಸಾಗಿದೆ. ಪ್ರತಿದಿನ ತೈಲಬೆಲೆಗಳು ಏರುತ್ತಿರುವುದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಲು ಅಸ್ತ್ರ ಸಿಕ್ಕಿದಂತಾಗಿದೆ.
ಪಿ. ಚಿದಂಬರಂ ಅವಧಿಯ ಬೆಲೆ
ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ (2008ರಲ್ಲಿ) ಬ್ಯಾರಲ್ ಗೆ 147.3 ಡಾಲರ್‌ಗಳ ಗರಿಷ್ಠ ಮಟ್ಟ ತಲುಪಿತ್ತು. ಆದರೆ ಈಗ ಬ್ಯಾರೆಲ್ ಗೆ 88 ಡಾಲರ್ ಇದೆ. ಪಿ. ಚಿದಂಬರಂ ಅವಧಿಯಲ್ಲಿ ಪೆಟ್ರೋಲ್ ದರಗಳು ಸ್ವಲ್ಪ ಕಡಿಮೆ ಇದ್ದವು.


Click it and Unblock the Notifications