For Quick Alerts
ALLOW NOTIFICATIONS  
For Daily Alerts

ವಂಚನೆ ಪ್ರಕರಣ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ರೂ. 25,775 ಕೋಟಿ ನಷ್ಟ

2017–18ನೇ ಹಣಕಾಸು ವರ್ಷದಲ್ಲಿ ಒಟ್ಟು 21 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ನಡೆದ ವಂಚನಾ ಪ್ರಕರಣಗಳಿಂದಾಗಿ ರೂ. 25,775 ಕೋಟಿಗಳಷ್ಟು ನಷ್ಟ ಅನುಭವಿಸಿವೆ.

|

2017-18ನೇ ಹಣಕಾಸು ವರ್ಷದಲ್ಲಿ ಒಟ್ಟು 21 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ನಡೆದ ವಂಚನಾ ಪ್ರಕರಣಗಳಿಂದಾಗಿ ರೂ. 25,775 ಕೋಟಿಗಳಷ್ಟು ನಷ್ಟ ಅನುಭವಿಸಿವೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಅತಿಹೆಚ್ಚು ನಷ್ಟ ಅನುಭವಿಸಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

 
ವಂಚನೆ ಪ್ರಕರಣ: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ರೂ. 25,775 ಕೋಟಿ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಈ ಮಾಹಿತಿಯನ್ನು ನೀಡಿದೆ. 2017-18ನೇ ಹಣಕಾಸು ವರ್ಷದ ಮಾರ್ಚ್‌ ತಿಂಗಳಿಗೆ ಕೊನೆಗೊಂಡಾಗ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಹೆಚ್ಚು ಪ್ರಮಾಣದ ರೂ. 6,461 ಕೋಟಿ ನಷ್ಟಕ್ಕೆ ಗುರಿಯಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಎರಡನೇ ಸ್ಥಾನದಲ್ಲಿದ್ದು, ರೂ. 2390 ಕೋಟಿ ನಷ್ಟ ಅನುಭವಿಸಿದೆ. ವಿಜಯ ಬ್ಯಾಂಕ್‌ ಅತಿ ಕಡಿಮೆ ವಂಚನೆಗೆ ಗುರಿಯಾಗಿದ್ದು, ರೂ. 28 ಕೋಟಿ ನಷ್ಟವುಂಟಾಗಿದೆ. ಬ್ಯಾಂಕ್ ಆಫ್ ಇಂಡಿಯಾ ರೂ. 2224 ಕೋಟಿ, ಬ್ಯಾಂಕ್ ಆಫ್ ಬರೋಡ ರೂ. 1928 ಕೋಟಿ, ಆಂಧ್ರಾ ಬ್ಯಾಂಕ್ ರೂ. 1303 ಕೋಟಿ, ಕಾರ್ಪೋರೇಷನ್ ಬ್ಯಾಂಕ್ ರೂ. 971 ಕೋಟಿ, ಸಿಂಡಿಕೇಟ್ ಬ್ಯಾಂಕ್ ರೂ. 455, ಕೆನರಾ ಬ್ಯಾಂಕ್ ರೂ. 190 ಕೋಟಿ ನಷ್ಟ ಅನುಭವಿಸಿವೆ.

 

ವಜ್ರದ ವ್ಯಾಪಾರಿಯಾದ ನೀರವ್ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ನಲ್ಲಿ ಮಾಡಿರುವ ವಂಚನೆ ದೊಡ್ಡ ಬ್ಯಾಂಕಿಂಗ್ ವಂಚನೆಗಳಲ್ಲಿ ಒಂದಾಗಿದ್ದು,ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆ ತನಿಖೆ ನಡೆಸುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ಈ ಅವಧಿಯಲ್ಲಿ, ರೂ. 2,390.75 ಕೋಟಿ ಬ್ಯಾಂಕಿಂಗ್ ವಂಚನೆ ಕಂಡಿದೆ.

ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆಗಳ ಒಳಗೊಂಡ ಮಾಹಿತಿಯನ್ನು ಮಾತ್ರ ಇಲ್ಲಿ ನೀಡಲಾಗಿದ್ದು, ಇನ್ನುಳಿದ ವಂಚನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಈ ಪ್ರಕರಣಗಳ ಸಂಖ್ಯೆ, ವಂಚನೆಯ ಸ್ವರೂಪ ಹಾಗು ಮಾಹಿತಿ ಬಗ್ಗೆ ಯಾವುದೇ ವಿವರ ನೀಡಿಲ್ಲ. ವಂಚನೆ ಪ್ರಕರಣಗಳು ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಬ್ಯಾಂಕುಗಳು ನೀಡುವ ಸಾಲಗಳ ಮೇಲೆಯೂ ಕೆಟ್ಟ ಪರಿಣಾಮ ಬೀರಲಿವೆ.

Read more about: banking frauds money finance news
English summary

Government Banks Lose Rs. 25,775 Crore To Banking Frauds In Fiscal 2018,

The Punjab National Bank (PNB) had incurred the highest loss of Rs. 6461.13 crore due to different cases of fraud.
Story first published: Tuesday, May 29, 2018, 15:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X