For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೊ ದರ ಹೆಚ್ಚಳ, ನಿಮ್ಮ ಸಾಲದ ಮೇಲಿನ ಬಡ್ಡಿದರ ಏರಿಕೆ ಆಗಲಿದೆ!

ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದೆ. ನಾಲ್ಕು ವರ್ಷಗಳ ನಂತರದಲ್ಲಿ ಆರ್ಬಿಐ 25 ಬೆಸಿಸ್ ಪಾಯಿಂಟ್ ನಿಂದ ರೆಪೊ ದರ ಶೇ. 6.25ಕ್ಕೆ ಹೆಚ್ಚಿಸಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದೆ. ನಾಲ್ಕು ವರ್ಷಗಳ ನಂತರದಲ್ಲಿ ಆರ್ಬಿಐ 25 ಬೆಸಿಸ್ ಪಾಯಿಂಟ್ ನಿಂದ ರೆಪೊ ದರ ಶೇ. 6.25ಕ್ಕೆ ಹೆಚ್ಚಿಸಿದೆ.

ರೆಪೋ ದರದಲ್ಲಿ 25 ಬಿಪಿಎಸ್ ಹೆಚ್ಚಳಕ್ಕೆ ಅನುಗುಣವಾಗಿ, ರಿವರ್ಸ್ ರೆಪೋ ದರವು ಶೇ. 6.0% ಮತ್ತು ಎಂಎಸ್ಎಫ್ (marginal standing facility) ದರ ಮತ್ತು ಬ್ಯಾಂಕ್ ದರವನ್ನು ಶೇ. 6.50 ನಿಗದಿ ಪಡಿಸಿದೆ.

2018-19ರಲ್ಲಿ ಏಪ್ರಿಲ್ ಪಾಲಿಸಿಯಂತೆ ಕೇಂದ್ರ ಬ್ಯಾಂಕ್ ಶೇ. 7.4 ರಷ್ಟು ಜಿಡಿಪಿ ಬೆಳವಣಿಗೆಯನ್ನು ಉಳಿಸಿಕೊಂಡಿದೆ. 2018-19ರ ಸಾಲಿನ ಮೊದಲಾರ್ಧದಲ್ಲಿ ಶೇ. 7.5-7.6 ಮತ್ತು ದ್ವಿತೀಯಾರ್ಧದಲ್ಲಿ ಶೇ. 7.3-7.4ರಷ್ಟು ಜಿಡಿಪಿ ಬೆಳವಣಿಗೆ ಇರಲಿದೆ ಎಂದು ಅಂದಾಜಿಸಿದೆ.

ರೆಪೊ ದರ ಪರಿಣಾಮ
ತೈಲದರ ಬೆಲೆ ಏರಿಕೆ, ಹಣದುಬ್ಬರ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಉತ್ಪನ್ನ ಸೂಚ್ಯಂಕಗಳು ಹೆಚ್ಚಿನ ಪರಿಣಾಮ ಬೀರಿವೆ. ಆರ್ಬಿಐ ರೆಪೊ ದರ ಏರಿಕೆ ಭಾರತದ ಆರ್ಥಿಕತೆಯ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ. ಬಡ್ಡಿದರ ಏರಿಕೆ ಮಾಡಿದರೆ ಈಗಿರುವ ಜಿಡಿಪಿಯನ್ನು ಕಾಯ್ದುಕೊಳ್ಳುವುದು ಕಷ್ಟವಾಗಬಹುದು.

ಗೃಹಸಾಲ

ಗೃಹಸಾಲ

ಪ್ರಸ್ತುತ, ಗೃಹ ಸಾಲಗಳ ಮೇಲಿನ ಬಡ್ಡಿ ದರವು 0.10 ರಿಂದ ಶೇ 0.30 ಕ್ಕೆ ಏರಿಕೆಯಾದರೆ, ಬ್ಯಾಂಕುಗಳು ಶೇ. 8.35 ರಿಂದ 8.55 ರವರೆಗೆ ಸಾಲವನ್ನು ನೀಡಲಿವೆ.

ಶಿಕ್ಷಣ ಸಾಲ

ಶಿಕ್ಷಣ ಸಾಲ

ಶಿಕ್ಷಣ ಸಾಲಗಳ ಮೇಲಿನ ಬಡ್ಡಿದರಗಳು ಶೇ. 0.10 ರಿಂದ 0.25 ರಷ್ಟು ಹೆಚ್ಚಾಗುತ್ತವೆ.

ವೈಯಕ್ತಿಕ ಸಾಲ

ವೈಯಕ್ತಿಕ ಸಾಲ

ಬ್ಯಾಂಕುಗಳು ಶೇ. 0.10 ಮತ್ತು 0.25 ಶೇಕಡಾ ನಡುವೆ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದ್ದು, ವೈಯಕ್ತಿಕ ಸಾಲ ದರವು ಶೇ. 10.99 ರಿಂದ 13.90 ರ ನಡುವೆ ಇರುತ್ತದೆ.

English summary

RBI Raise Repo Rate and interest rates on your debt will increase.

Will RBI Raise Repo Rate Today After A Gap of Over 4 years?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X