For Quick Alerts
For Daily Alerts
ರೆಪೊ ದರ ಹೆಚ್ಚಿಸಿದ ಬೆನ್ನಲ್ಲೇ ಬಡ್ಡಿದರ ಹೆಚ್ಚಿಸಿದ ಬ್ಯಾಂಕುಗಳು
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ತಮ್ಮ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಏರಿಸಿವೆ.
|
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ತಮ್ಮ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಏರಿಸಿವೆ.
ಬಡ್ಡಿದರ ಹೆಚ್ಚಿಸಿರುವುದರಿಂದ ಗೃಹಸಾಲ, ವಾಹನ ಸಾಲ ಮತ್ತು ಉದ್ದಿಮೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತ ಏರಿಕೆ ಆಗಲಿದೆ.
ಈಗಾಗಲೇ ಎಸ್ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕುಗಳ, ಠೇವಣಿಗಳ ಮೇಲಿನ ಎಂಸಿಎಲ್ಆರ್ ಬಡ್ಡಿ ದರವನ್ನು ಹೆಚ್ಚಿಸಿವೆ. ಇದೀಗ ಇಂಡಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್ ಗಳು ಕೂಡ ಹೆಚ್ಚಿಸಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಬಡ್ಡಿದರ ಹೆಚ್ಚಿಸುವುದಾಗಿ ಹೇಳಿದೆ.
English summary
Banks raised interest rates after raising the Repo rate
Story first published: Friday, June 8, 2018, 16:30 [IST]