For Quick Alerts
ALLOW NOTIFICATIONS  
For Daily Alerts

ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಗೆ ಆಧಾರ್ ಕಡ್ಡಾಯವಲ್ಲ

ಕೇಂದ್ರ ಸರ್ಕಾರ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ವಿಷಯ ನಿಮಗೆ ತಿಳಿದಿದೆ. ಆದರೆ ಇಲ್ಲಿ ನಿಮಗೊಂದು ಸಿಹಿಸುದ್ದಿ ಇದ್ದು, ಕೇಂದ್ರ ಸರ್ಕಾರದ ಬಹು ಮಹಾತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆ.

By Siddu
|

ಕೇಂದ್ರ ಸರ್ಕಾರ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ವಿಷಯ ನಿಮಗೆ ತಿಳಿದಿದೆ. ಆದರೆ ಇಲ್ಲಿ ನಿಮಗೊಂದು ಸಿಹಿಸುದ್ದಿ ಇದ್ದು, ಕೇಂದ್ರ ಸರ್ಕಾರದ ಬಹು ಮಹಾತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿಲ್ಲ. ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರದ ಸ್ಪಷ್ಟನೆ

ಸರ್ಕಾರದ ಸ್ಪಷ್ಟನೆ

ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯವಲ್ಲ ಅನ್ನುವುದನ್ನು ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಷನ್ ಈಗ ಸಾರ್ವಜನಿಕರ ಗಮನಕ್ಕೆ ತಂದಿದೆ. ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾರು ಕೂಡ ಆಯುಷ್ಮಾನ್ ಭಾರತ ಆರೋಗ್ಯ ಸೇವೆಯನ್ನು ಒದಗಿಸುವುದಿಲ್ಲ ಎಂದು ಹೇಳಬಾರದು ಎಂದಿದೆ. ಆಯುಷ್ಮಾನ್ ಭಾರತ್ ಯೋಜನೆ: ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ

ರೂ. 5 ಲಕ್ಷ ಆರೋಗ್ಯ ವಿಮೆ

ರೂ. 5 ಲಕ್ಷ ಆರೋಗ್ಯ ವಿಮೆ

ರಾಷ್ಟ್ರೀಯ ಅರೋಗ್ಯ ಸುರಕ್ಷತಾ ನೀತಿಯಡಿಯಲ್ಲಿ ಜಾರಿಗೆ ತರಲಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಪ್ರತಿ ವ್ಯಕ್ತಿಗೆ ರೂ. ೫ ಲಕ್ಷ ಆರೋಗ್ಯ ವಿಮೆಯನ್ನು ಒದಗಿಸಲಿದೆ. ಭಾರತದ 40 ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಈ ಕಾರ್ಯಕ್ರಮದ ಅಡಿಯಲ್ಲಿ ನೀಡಲಿದೆ. ಹೀಗಾಗಿ ಈ ಸೇವೆ ಪಡೆಯಲು ಆಧಾರ್ ಕಾರ್ಡ್ ಅಗತ್ಯವೇ ಹೊರತು ಕಡ್ಡಾಯವಲ್ಲ ಎಂಬುದನ್ನು ಕೇಂದ್ರ ಸ್ಪಷ್ಟಪಡಿಸಿದೆ.

ಯಾವ ದಾಖಲೆ ಬೇಕು?

ಯಾವ ದಾಖಲೆ ಬೇಕು?

ಆಯುಷ್ಮಾನ್ ಭಾರತ್ ವಿಮಾ ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕು ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚಿಟಿ ಇವುಗಳಲ್ಲಿ ಯಾವುದಾದರು ಒಂದನ್ನು ನೀಡಬಹುದು. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದವರು ಕಂಡುಬಂದಲ್ಲಿ ಅವರನ್ನು ಹತ್ತಿರದ ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹೆಸರು ನೋಂದಾಯಿಸ ಬೇಕಾದ ಜವಾಬ್ದಾರಿ ಸೇವಾದಾರದ್ದಾಗಿರುತ್ತದೆ.

ರೂ. 5 ಲಕ್ಷ ವಿಮೆ, 10 ಕೋಟಿ ಕುಟುಂಬಗಳು

ರೂ. 5 ಲಕ್ಷ ವಿಮೆ, 10 ಕೋಟಿ ಕುಟುಂಬಗಳು

ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಾಗಿದ್ದು, ಪ್ರತಿ ವರ್ಷಕ್ಕೆ 5 ಲಕ್ಷ ರೂ. ಕವರೇಜ್ ಒದಗಿಸಲಿದ್ದು, 10 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳು (ಸರಿಸುಮಾರು 50 ಕೋಟಿ ಫಲಾನುಭವಿಗಳು) ಇದು ಒಳಗೊಳ್ಳುವ ಗುರಿ ಹೊಂದಿದೆ. 2018 ರ ಯೂನಿಯನ್ ಬಜೆಟ್ ನಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ 2018 ರ ಆಗಸ್ಟ್ 15 ರಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ಆಧಾರ್ ಕಾರ್ಡ್ ಕಡ್ಡಾಯ

ಆಧಾರ್ ಕಾರ್ಡ್ ಕಡ್ಡಾಯ

ಕೇಂದ್ರ ಸರ್ಕಾರ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸುತ್ತಿದೆ. ಗ್ಯಾಸ್ ಸಿಲಿಂಡರ್, ಪಡಿತರ ವಿತರಣೆ, ಆಮ್ ಆದ್ಮಿ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಸೌಲಭ್ಯಕ್ಕಾಗಿ ಆಧಾರ್ ಬಳಕೆ ಕಡ್ಡಾಯವಾಗಿದೆ.

English summary

Aadhaar is not mandatory for Ayushmann Bharat Scheme

Aadhaar is not mandatory for Ayushmann Bharat Scheme
Story first published: Friday, July 13, 2018, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X