For Quick Alerts
ALLOW NOTIFICATIONS  
For Daily Alerts

ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಈಗಾಗಲೇ ಪ್ರಸ್ತುತಪಡಿಸಿರುವ ಹಲವು ಯೋಜನೆಗಳ ಬಗ್ಗೆ ಅರಿತಿರಬಹುದು. ಇದರಲ್ಲೊಂದು "ಆಯುಷ್ಮಾನ್ ಭಾರತ್ ಯೋಜನೆ’ ಎಂಬ ಹೊಸ ಆರೋಗ್ಯ ರಕ್ಷಣಾ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ.

|

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಪ್ರಸ್ತುತಪಡಿಸಿರುವ ಹಲವು ಯೋಜನೆಗಳ ಬಗ್ಗೆ ಅರಿತಿರಬಹುದು. ಇದರಲ್ಲೊಂದು "ಆಯುಷ್ಮಾನ್ ಭಾರತ್ ಯೋಜನೆ' ಎಂಬ ಹೊಸ ಆರೋಗ್ಯ ರಕ್ಷಣಾ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ. ಹೆಚ್ಚಿನವರು ಈ ಯೋಜನೆಯನ್ನು ಮೋದಿ ಐದು ಲಕ್ಷ ಆರೋಗ್ಯ ವಿಮಾ ಯೋಜನೆ ಅಥವಾ ಮೋದಿ ಕೇರ್ ಯೋಜನೆ ಎಂದೂ ಕರೆಯುತ್ತಾರೆ. ಇತ್ತೀಚಿಗೆ ಆಯುಷ್ಮಾನ್ ಭಾರತ್ ಯೋಜನೆ ಹಾಗೂ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗಳ ಬಗ್ಗೆ ಕೆಲವು ಲೇಖನಗಳನ್ನೂ ಪ್ರಕಟಿಸಿದ್ದೆವು.

 

ಸೂಚನೆ: ಆಯುಷ್ಮಾನ್ ಭಾರತ್ ಯೋಜನೆ ವಾಸ್ತವವಾಗಿ ಎರಡು ಭಿನ್ನವಾದ ಯೋಜನೆಗಳ ಸಂಯೋಜನೆಯಾಗಿದೆ.
1) ರೂ. 5 ಲಕ್ಷ ಆರೋಗ್ಯ ವಿಮಾ ಯೋಜನೆ
2) ಆರೋಗ್ಯ ಮತ್ತು ನೆಮ್ಮದಿ ಕೇಂದ್ರಗಳ ಸ್ಥಾಪನೆ

ಇತ್ತೀಚಿನ ವರದಿಗಳ ಪ್ರಕಾರ ಐದು ಲಕ್ಷ ಆರೋಗ್ಯ ವಿಮಾ ಯೋಜನೆ 2018ರ ಏಪ್ರಿಲ್ ನಿಂದ ಪ್ರಾರಂಭಗೊಳ್ಳುತ್ತದೆ. ಇಂದಿನ ಲೇಖನದಲ್ಲಿ ಈ ಯೋಜನೆಯಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬುದನ್ನು ನೋಡೋಣ. ಈ ಯೋಜನೆಯಲ್ಲಿ ಭಾಗಿಯಾಗಲು ಅಗತ್ಯವಾದ ಅರ್ಹತೆ, ವಯೋಮಿತಿ ಹಾಗೂ ಇತರ ಪ್ರಮುಖ ವಿಷಯಗಳನ್ನು ವಿವರಿಸಲಾಗಿದೆ. ರಿಲಯನ್ಸ್ ಬಿಗ್ ಟಿವಿ ಸೇವೆ 1 ವರ್ಷ ಸಂಪೂರ್ಣ ಉಚಿತ! ಅಂದು ಜಿಯೋ ಇಂದು ಬಿಗ್ ಟಿವಿ!!

ಮೋದಿ ಆರೋಗ್ಯ ವಿಮಾ ಯೋಜನೆ-2018: ಮೋದಿಕೇರ್ 5 ಲಕ್ಷ ವಿಮಾ ಯೋಜನೆ

ಮೋದಿ ಆರೋಗ್ಯ ವಿಮಾ ಯೋಜನೆ-2018: ಮೋದಿಕೇರ್ 5 ಲಕ್ಷ ವಿಮಾ ಯೋಜನೆ

ಈ ಯೋಜನೆಯ ವಿವರಗಳನ್ನು ಅರಿಯುವ ಮುನ್ನ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳೋಣ. ಪ್ರಸ್ತುತ ಈ ಯೋಜನೆ ಕೆಲವಾರು ಹೆಸರುಗಳ ಮೂಲಕ ಜಾರಿಯಲ್ಲಿದೆ. ಅವೆಂದರೆ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ, ಮೋದಿ ಸ್ವಾಸ್ಥ್ಯ ವಿಮಾ ಯೋಜನೆ, ಮೋದಿ ಆರೋಗ್ಯ ವಿಮಾ ಯೋಜನೆ ಹಾಗೂ ಮೋದಿಕೇರ್ ಯೋಜನೆ.
ಈಗ ಈ ಎಲ್ಲಾ ಯೋಜನೆಗಳನ್ನು ಜಂಟಿಯಾಗಿ 'ರಾಷ್ಟ್ರೀಯ ವಿಮಾ ಯೋಜನೆ' ಎಂಬ ಒಂದೇ ಹೆಸರಿನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. (ಈ ವಿಷಯವನ್ನು ಇತ್ತೀಚೆಗೆ ಮಂಡಿಸಲಾದ ಬಜೆಟ್ ನಲ್ಲಿ (2018-19) ಪ್ರಕಟಿಸಲಾಗಿದೆ) ಹಾಗೂ ಈ ಯೋಜನೆಯ ಫಲಾನುಭವಿಗಳಿಗೆ ಐದು ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯಗಳು

ಅರ್ಹತೆಯ ಮಾನದಂಡ

ಅರ್ಹತೆಯ ಮಾನದಂಡ

ಈ ಯೋಜನೆಗೆ ಯಾರು ಅರ್ಹರು ಎಂಬುದನ್ನು ಲಿಖಿತ ರೂಪದಲ್ಲಿ ಇನ್ನೂ ಒದಗಿಸಲಾಗಿಲ್ಲ. ಆದರೆ ವಿತ್ತಮಂತ್ರಿಗಳ ಭಾಷಣದಲ್ಲಿ ನೀಡಲಾಗಿರುವ ವಿವರಗಳ ಪ್ರಕಾರ ಈ ಯೋಜನೆ ಬಡ ಕುಟುಂಬಗಳಿಗೆ ಅನ್ವಯವಾಗಲಿದ್ದು, ಎಲ್ಲಾ ಬಡ ಜನತೆ ಇದರ ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಬಡತನದ ರೇಖೆಯ ಕೆಳಗೆ ಮತ್ತು ಮೇಲೆ ಇರುವ (APL, BPL) ಕಾರ್ಡುದಾರರು ಯೋಜನೆಗೆ ಅರ್ಹರು ಎಂದು ಅರ್ಥೈಸಿಕೊಳ್ಳಬಹುದು.

ಪ್ರತ್ಯೇಕ ಅಂತರ್ಜಾಲ ತಾಣ
 

ಪ್ರತ್ಯೇಕ ಅಂತರ್ಜಾಲ ತಾಣ

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಈ ಯೋಜನೆ ಏಪ್ರಿಲ್ 2018 ರಿಂದ ಜಾರಿಗೆ ಬರಲಿದೆ ಹಾಗೂ ಇದಕ್ಕಾಗಿ ಒಂದು ಪ್ರತ್ಯೇಕ ಅಂತರ್ಜಾಲ ತಾಣವನ್ನೂ ಪ್ರಾರಂಭಿಸಲಾಗುವುದು. ಈ ತಾಣದ ಮೂಲಕ ಅರ್ಹ ಕುಟುಂಬಗಳು ಯೋಜನೆಯಲ್ಲಿ ಸೇರಿಕೊಳ್ಳುವ ಮೂಲಕ ಯೋಜನೆಯ ಫಲವನ್ನು ಪಡೆಯಲು ಅರ್ಹರಾಗುತ್ತಾರೆ. ಈ ಆನ್ಲೈನ್ ಪ್ರಕ್ರಿಯೆಯಿಂದ ಕುಟುಂಬದವರಿಗೂ ಸರ್ಕಾರಿ ಅಧಿಕಾರಿಗಳಿಗೂ ಅರ್ಜಿ ಹಾಕಲು ಮತ್ತು ಪರಿಶೀಲಿಸಲು ಸುಲಭ ಮತ್ತು ಅನುಕೂಲಕರವಾಗಲಿದೆ.

ಮೋದಿ ಐದು ಲಕ್ಷ ಆರೋಗ್ಯ ವಿಮಾ ಯೋಜನೆ-2018 : ಆನ್ಲೈನ್ ನೋಂದಣಿ/ಅರ್ಜಿ ನಮೂನೆ

ಮೋದಿ ಐದು ಲಕ್ಷ ಆರೋಗ್ಯ ವಿಮಾ ಯೋಜನೆ-2018 : ಆನ್ಲೈನ್ ನೋಂದಣಿ/ಅರ್ಜಿ ನಮೂನೆ

ನೋಂದಣಿ ಕಾರ್ಯ ಪ್ರಾರಂಭವಾಗುತ್ತಿದ್ದಂತೆಯೇ ಈ ತಾಣದ ಮೂಲಕ ನಾವು ಹೆಚ್ಚಿನ ಮಾಹಿತಿ ಒದಗಿಸಲಿದ್ದೇವೆ. ಆದರೂ, ಬರಲಿರುವ ಅಂತರ್ಜಾಲ ತಾಣ ಹೆಚ್ಚೂ ಕಡಿಮೆ ಈ ತೆರನಾಗಿರುತ್ತದೆ ಹಾಗೂ ಅರ್ಜಿ ಸಲ್ಲಿಸುವ ಕಾರ್ಯ ಹೀಗೆ ಕಾರ್ಯನಿರ್ವಹಿಸಲಿದೆ:
ಅಧಿಕೃತ ತಾಣದಲ್ಲಿ ಬಳಕೆದಾರನ ನೋಂದಣಿ >> ಬಳಕೆದಾರನ ವಿವರಗಳನ್ನು ಸಂಬಂಧಿತ ಕಛೇರಿಯಿಂದ ಪರಿಶೀಲನೆ >> ಪರಿಶೀಲನೆಯ ಬಳಿಕ ಅರ್ಜಿ ಸ್ವೀಕೃತ ಅಥವಾ ತಿರಸ್ಕೃತಗೊಳ್ಳುವಿಕೆ >> ಸ್ವೀಕೃತ ಅರ್ಜಿಗಳ ಪಟ್ಟಿ ಬಿಡುಗಡೆ ಹಾಗೂ ಯೋಜನೆಯಲ್ಲಿ ದಾಖಲು ಪ್ರಕ್ರಿಯೆ

ಮೋದಿಕೇರ್ ಆರೋಗ್ಯ ವಿಮಾ ಯೋಜನೆ 2018 ಅರ್ಜಿ ದಾಖಲಿಸುವುದು ಹೇಗೆ?

ಮೋದಿಕೇರ್ ಆರೋಗ್ಯ ವಿಮಾ ಯೋಜನೆ 2018 ಅರ್ಜಿ ದಾಖಲಿಸುವುದು ಹೇಗೆ?

ಮೊದಲು ಅಧಿಕೃತ ಅಂತರ್ಜಾಲ ತಾಣವನ್ನು ಸಂಪರ್ಕಿಸಿ
"ಆನ್ಲೈನ್ ದಾಖಲಾತಿ" ಕೊಂಡಿಯನ್ನು ("Online Registration") ಕ್ಲಿಕ್ಕಿಸಿ.
ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದೇ ದಾಖಲಿಸಿ
ಪೂರ್ಣವಾದ ಬಳಿಕ ಅರ್ಜಿಯನ್ನು ಸಲ್ಲಿಸಿ (Submit).
ಈಗ ಅಂತರ್ಜಾಲ ತಾಣದಲ್ಲಿ ರಚನೆಗೊಂಡ ಅರ್ಜಿ ಸಂಖ್ಯೆ ಅಥವಾ ಉಲ್ಲೇಖ ಸಂಖ್ಯೆಯನ್ನು ತಪ್ಪಿಲ್ಲದೆ ಬರೆದಿಡಿ ಹಾಗೂ ಕಂಪ್ಯೂಟರ್ ನಿಮ್ಮದೇ ಆಗಿದ್ದರೆ ಕಡತವೊಂದರಲ್ಲಿ ದಾಖಲಿಸಿ.

ಕೊನೆಮಾತು

ಕೊನೆಮಾತು

ಬಳಿಕ ಸಂಬಂಧಪಟ್ಟ ಇಲಾಖೆ ಪ್ರಕಟಿಸುವ ಆಯ್ದ ಹಾಗೂ ನೋಂದಾಯಿತ ಅರ್ಜಿದಾರರ ಪಟ್ಟಿ ಪ್ರಕಟವಾಗುವವರೆಗೂ ಕಾಯಬೇಕಾಗುತ್ತದೆ. ಪ್ರಕಟಗೊಂಡ ಬಳಿಕ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹುಡುಕಿ ನೋಡಿ. ಒಂದು ವೇಳೆ ಇದ್ದರೆ ನೀವು ಈ ಯೋಜನೆಗೆ ಅರ್ಹರಾಗಿದ್ದು ಆಯ್ಕೆಯಾಗಿದ್ದೀರಿ ಎಂದು ತಿಳಿಯಬಹುದು. ಬಳಿಕ ಈ ಯೋಜನೆ ಕಾರ್ಯಗತಗೊಳ್ಳುವ ಕಛೇರಿಯಿಂದ ನಿಮಗೆ ಆರೋಗ್ಯ ವಿಮಾ ಕಾರ್ಡು ಬಂದು ತಲುಪುತ್ತದೆ ಹಾಗೂ ಈ ಕಾರ್ಡ್ ಉಪಯೋಗಿಸಿ ಸುಮಾರು ಐದು ಲಕ್ಷ ರೂಪಾಯಿಯವರೆಗಿನ ವೈದ್ಯಕೀಯ ವೆಚ್ಚಗಳನ್ನು ಭರಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ತಾಣವನ್ನು ಆಗಾಗ ಪರಿಶೀಲಿಸುತ್ತಿರಿ ಹಾಗೂ ಮೋದಿ ಆರೋಗ್ಯ ವಿಮಾ ಯೋಜನೆಯಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.

English summary

Modi Health Insurance Scheme, How to apply Online

Ayushman Bharat Scheme” or National Health Protection Scheme. Most people Simply Call it – Modi 5 Lakh Rs. Health Insurance (Bima) Yojana or Modi Care Scheme. Recently, i have written Articles on Ayushman Bharat Yojana & National Health Protection Scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X