For Quick Alerts
ALLOW NOTIFICATIONS  
For Daily Alerts

ಆಯುಷ್ಮಾನ್ ಭಾರತ್ ಯೋಜನೆ: ಪ್ರತಿವರ್ಷ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ

ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ನಲ್ಲಿ ಬಡವರಿಗೆ, ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯದ ವಿಚಾರವಾಗಿ ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ.

By Siddu
|

ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ನಲ್ಲಿ ಬಡವರಿಗೆ, ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯದ ವಿಚಾರವಾಗಿ ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ. ಅರುಣ್ ಜೇಟ್ಲಿ ತಮ್ಮ ಕೊನೆಯ ಬಜೆಟ್ ನಲ್ಲಿ ಆರೋಗ್ಯ ವಲಯ ಹಾಗು ಬಡವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆ

ಆಯುಷ್ಮಾನ್ ಭಾರತ್ ಯೋಜನೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ ಸುಮಾರು 10 ಕೋಟಿ ಬಡ ಕುಟುಂಬಗಳನ್ನು ಒಳಗೊಳ್ಳುವ ಗುರಿ ಹೊಂದಿದೆ. ಪ್ರತಿ ಕುಟುಂಬಕ್ಕೆ ರೂ. 5 ಲಕ್ಷದವರೆಗೆ ವೈದ್ಯಕೀಯ ವಿಮಾ ರಕ್ಷಣೆಯನ್ನು ಒದಗಿಸಲಿದೆ.
ಇದು ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯ ಮುಖ್ಯಾಂಶಗಳು:
- ಆಯುಷ್ಮಾನ್ ಭಾರತ್ ಯೋಜನೆ ಅಡಿ 50 ಕೋಟಿ ಜನರಿಗೆ ಪ್ರಯೋಜನ
- 10 ಕೋಟಿ ಕುಟುಂಬಗಳಿಗೆ ಅನುಕೂಲ
- ವಾರ್ಷಿಕವಾಗಿ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು

ರೂ. 1200 ಕೋಟಿ ಮೀಸಲು

ರೂ. 1200 ಕೋಟಿ ಮೀಸಲು

ಈ ಯೋಜನೆಯ ಆರೋಗ್ಯದ ಭಾಗವಾಗಿ ಆರೋಗ್ಯ ಕ್ಷೇಮ ಕೇಂದ್ರಗಳಿಗಾಗಿ ರೂ. 1200 ಕೋಟಿ ಮೀಸಲಿಡಲಾಗಿದೆ. ಕ್ಷಯ ರೋಗಿಗಳ ಪೌಷ್ಟಿಕತೆಗಾಗಿ 600 ಕೋಟಿ ಮೀಸಲಿಡಲಾಗಿದೆ. ಕೇಂದ್ರ ಬಜೆಟ್ 2018 ಪ್ರಮುಖ ಜನಪ್ರಿಯ ಯೋಜನೆಗಳ ವಿವರ..

ರೂ. 30 ಸಾವಿರ ಕೋಟಿ ಅನುದಾನ

ರೂ. 30 ಸಾವಿರ ಕೋಟಿ ಅನುದಾನ

ರಾಷ್ಟ್ರೀಯ ಆರೋಗ್ಯ ಯೋಜನೆ ಮೂಲಕ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ರಾಷ್ಟ್ರೀಯ ಸ್ವಾಥ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಪ್ರಸಕ್ತ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಕೇವಲ ಬಡ ಭಾರತೀಯ ಕುಟುಂಬಗಳಿಗೆ ರೂ. 30,000 ರಷ್ಟನ್ನು ಒದಗಿಸುತ್ತದೆ. ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಫೆ. 9 ರಿಂದ ಆಗಲಿದೆ ದೊಡ್ಡ ಬದಲಾವಣೆ..

English summary

Ayushman Bharat Yojana: Up to 5 lakhs per family every year

Ayushman Bharat Yojana: Free treatment for up to 5 lakhs per family every year.
Story first published: Monday, February 5, 2018, 14:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X