For Quick Alerts
ALLOW NOTIFICATIONS  
For Daily Alerts

4 ವರ್ಷದಲ್ಲಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದ ಖರ್ಚುವೆಚ್ಚ ಎಷ್ಟು ಗೊತ್ತೆ?

ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚು ವಿದೇಶ ಪ್ರವಾಸಗಳಲ್ಲಿಯೇ ಇರುತ್ತಾರೆ. ಹಾಗಿದ್ದರೆ ಮೋದಿಯವರು ಪ್ರವಾಸಗಳಿಗಾಗಿ ಮಾಡಿರಬಹುದಾದ ಖರ್ಚುವೆಚ್ಚಗಳು ಎಷ್ಟಿರಬಹುದು? ಯಾವ್ಯಾವ ದೇಶಗಳಿಗೆ ಭೇಟಿ ನೀಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಇರುತ್ತದೆ.

By Siddu
|

ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚು ವಿದೇಶ ಪ್ರವಾಸಗಳಲ್ಲಿಯೇ ಇರುತ್ತಾರೆ. ಹಾಗಿದ್ದರೆ ಮೋದಿಯವರು ಪ್ರವಾಸಗಳಿಗಾಗಿ ಮಾಡಿರಬಹುದಾದ ಖರ್ಚುವೆಚ್ಚಗಳು ಎಷ್ಟಿರಬಹುದು? ಯಾವ್ಯಾವ ದೇಶಗಳಿಗೆ ಭೇಟಿ ನೀಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

 

84 ರಾಷ್ಟ್ರಗಳಿಗೆ ಭೇಟಿ

84 ರಾಷ್ಟ್ರಗಳಿಗೆ ಭೇಟಿ

ನರೇಂದ್ರ ಮೋದಿಯವರು ಜೂನ್ 2014ರಲ್ಲಿ ಅಧಿಕಾರಕ್ಕೆ ಬಂದರು. ಜೂನ್ 2014 ರಿಂದ ಇಲ್ಲಿಯವರೆಗೆ ಸುಮಾರು 84 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಪ್ರವಾಸದ ವೇಳೆಯಲ್ಲಿ ಖರ್ಚು ಆಗಿರಬಹುದಾದ ಮೊತ್ತದ ಬಗ್ಗೆ ಮಾಹಿತಿ ಸಿಕ್ಕಿದೆ. ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ರೂ. 1484 ಕೋಟಿ ವೆಚ್ಚ

ರೂ. 1484 ಕೋಟಿ ವೆಚ್ಚ

ಮೋದಿಯವರು ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಟ್ಟು ರೂ. 1484 ಕೋಟಿ ವೆಚ್ಚ ಆಗಿದ್ದು, ಚಾರ್ಟರ್ಡ್ ಫ್ಲೈಟ್ಸ್ ಗಳಿಗಾಗಿ ಮತ್ತು ಹಾಟ್ಲೈನ್ ​​ಸೌಲಭ್ಯಗಳ ನಿರ್ವಹಣೆಗೆ ಖರ್ಚು ಮಾಡಲಾಗಿದೆ.
ಮಾಹಿತಿ ಪ್ರಕಾರ ಪ್ರಧಾನಿ ವಿಮಾನವನ್ನು ನಿರ್ವಹಿಸಲು ಒಟ್ಟು ರೂ. 1088.42 ಕೋಟಿ ಹಾಗು ಚಾರ್ಟರ್ಡ್ ಫ್ಲೈಟ್ ಗಳಿಗಾಗಿ ರೂ. 387.26 ಕೋಟಿ ಮೊತ್ತವನ್ನು ಜೂನ್ 15, 2014 ಮತ್ತು ಜೂನ್ 10, 2018 ರ ಅವಧಿಯಲ್ಲಿ ಖರ್ಚು ಮಾಡಿದ್ದಾರೆ. ಇದರಲ್ಲಿ 2018-19ರಲ್ಲಿ ವಿದೇಶ ಭೇಟಿಗಾಗಿ ಬಳಸಿದ ಚಾರ್ಟರ್ಡ್ ಫ್ಲೈಟ್ ಗಳಳ ವೆಚ್ಚವನ್ನು ಸೇರಿಸಲಾಗಿಲ್ಲ.

ವಿ. ಕೆ. ಸಿಂಗ್ ಮಾಹಿತಿ
 

ವಿ. ಕೆ. ಸಿಂಗ್ ಮಾಹಿತಿ

ಮೋದಿ ಅವರ ವಿದೇಶಿ ಪ್ರಯಾಣ ವೆಚ್ಚದ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವ ವಿ. ಕೆ. ಸಿಂಗ್ ಅವರು ರಾಜ್ಯಸಭೆಯಲ್ಲಿ ಹಂಚಿಕೊಂಡರು. 2018-19ನೇ ಸಾಲಿನಲ್ಲಿ ಇತರ ವಿಮಾನಗಳಿಗೆ ತಗುಲಿದ ವೆಚ್ಚದ ಬಗ್ಗೆ ವಿವರ ನೀಡಿಲ್ಲ. 2014ರಿಂದ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಒಟ್ಟಾರೆ ಪ್ರಧಾನಿ ಮೋದಿಯವರು ಸುಮಾರು 42 ಪ್ರವಾಸಗಳ ಮೂಲಕ 84 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂಬುದು ಮಾಹಿತಿಯಲ್ಲಿ ಬಹಿರಂಗಗೊಂಡಿದೆ.

ವಾರ್ಷಿಕವಾಗಿ ಚಾರ್ಟರ್ಡ್ ವಿಮಾನಗಳ ವೆಚ್ಚ

ವಾರ್ಷಿಕವಾಗಿ ಚಾರ್ಟರ್ಡ್ ವಿಮಾನಗಳ ವೆಚ್ಚ

2014-15ರಲ್ಲಿ ವಿದೇಶ ಪ್ರವಾಸಗಳಿಗಾಗಿ ಚಾರ್ಟರ್ಡ್ ವಿಮಾನಗಳ ವೆಚ್ಚ ರೂ. 93.76 ಕೋಟಿ, 2015-16ರಲ್ಲಿ ರೂ. 117 ಕೋಟಿ, 2016-17ರಲ್ಲಿ ವೆಚ್ಚ ರೂ. 76.27 ಕೋಟಿ ಹಾಗು 2017-18ರಲ್ಲಿ ಚಾರ್ಟರ್ಡ್ ವಿಮಾನಗಳ ವೆಚ್ಚ ರೂ. 99.32 ಕೋಟಿ ಆಗಿದೆ.

ಆರ್ಟಿಐ ಮಾಹಿತಿ ಪಡೆದಿದ್ದ ಭೀಮಪ್ಪ ಗಡಾದ್

ಆರ್ಟಿಐ ಮಾಹಿತಿ ಪಡೆದಿದ್ದ ಭೀಮಪ್ಪ ಗಡಾದ್

ಕಳೆದ ತಿಂಗಳು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಮಾಹಿತಿ ಹಕ್ಕು ಕಾಯಿದೆಯಡಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ಮಾಹಿತಿ ಪಡೆದಿದ್ದರು. ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ವಿದೇಶ ಪ್ರವಾಸದ ವೆಚ್ಚ ಕುರಿತು ಮಾಹಿತಿ ಕೋರಿದ್ದರು. ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚದ ಮಾಹಿತಿ ನೋಡಿ ನನಗೆ ಆಘಾತವಾಗಿ ಎಂದು ಹೇಳಿದ್ದರು. ಅಲ್ಲದೇ ದೇಶಿ ಪ್ರವಾಸದ ಖರ್ಚುವೆಚ್ಚ ಹಾಗು ಭದ್ರತಾ ಸಿಬ್ಬಂದಿ ಖರ್ಚಿನ ಬಗ್ಗೆ ಮಾಹಿತಿ ನೀಡಲು ಪಿಎಂಓ ನಿರಾಕರಿಸಿದೆ ಎಂದು ಗಡಾದ್ ಹೇಳಿದ್ದರು.

English summary

How much does PM Narendra Modi's foreign travel cost?

An expenditure of Rs 1,484 crore was incurred on chartered flights and hotline facilities during Prime Minister Narendra Modi’s visits to 84 countries since June 2014.
Story first published: Saturday, July 21, 2018, 10:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X