ಆಧಾರ್ ಮಾಹಿತಿ ಹಂಚಿಕೊಳ್ಳಬೇಡಿ: ಯುಐಡಿಎಐ ಸೂಚನೆ

ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬಾರದೆಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಸೂಚನೆ ನೀಡಿದೆ.

ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಬಾರದೆಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಸೂಚನೆ ನೀಡಿದೆ.
ಆನ್ಲೈನ್ ಹಾಗು ಸೋಷಿಯಲ್ ಮಿಡಿಯಾ ವಂಚನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಗೌಪ್ಯತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಪ್ರಮುಖ ಸುದ್ದಿ, ಬ್ಯಾಂಕ್ ಖಾತೆ ತೆರೆಯಲು ಈ ನಿಯಮ ಕಡ್ಡಾಯ!

ಅನಧಿಕೃತ ಗೌಪ್ಯತೆ ದಾಳಿ ತಡೆಗಟ್ಟಲು ಸಾಧ್ಯ

ಅನಧಿಕೃತ ಗೌಪ್ಯತೆ ದಾಳಿ ತಡೆಗಟ್ಟಲು ಸಾಧ್ಯ

ಬಳಕೆದಾರರು ತಮ್ಮ ಪ್ಯಾನ್ ನಂಬರ್, ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಹೇಗೆ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲವೋ ಹಾಗೆಯೇ ಆಧಾರ್ ಸಂಖ್ಯೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಯುಐಡಿಎಐ ತಿಳಿಸಿದೆ. ಇದರಿಂದ ಅನಧಿಕೃತ ಗೌಪ್ಯತೆ ದಾಳಿ ತಡೆಗಟ್ಟಲು ಸಾಧ್ಯವಾಗುತ್ತದೆ.

ಆಧಾರ್ ಮಾಹಿತಿ ಹಂಚಿಕೊಳ್ಳಬೇಡಿ

ಆಧಾರ್ ಮಾಹಿತಿ ಹಂಚಿಕೊಳ್ಳಬೇಡಿ

ಯುಐಡಿಎಐ ವೆಬ್ಸೈಟ್ ನಲ್ಲಿ ಬಳಕೆದಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಯುಐಡಿಎಐ ಸಾರ್ವತ್ರಿಕವಾಗಿ ಆಧಾರ್ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಹೇಳಿದೆ. ಪ್ಯಾನ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವಾಗ ವಹಿಸುವ ಮುಂಜಾಗ್ರತಾ, ಸುರಕ್ಷತಾ ಕ್ರಮ ವಹಿಸಿಕೊಳ್ಳಬೇಕು ಎಂದಿದೆ.

ಆಧಾರ್ ದುರ್ಬಳಕೆ ಕಷ್ಟ

ಆಧಾರ್ ದುರ್ಬಳಕೆ ಕಷ್ಟ

ಆಧಾರ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇತರೆ ಐಡಿ ಕಾರ್ಡ್ ಗಳಿಗಿಂತ ಆಧಾರ್ ಹೆಚ್ಚು ವಿಶ್ವಸನೀಯವಾದದ್ದು. ಆಧಾರ್ ಕಾನೂನು ಬದ್ಧ ಗುರುತಿನ ಚೀಟಿಯಾಗಿದ್ದು, ಇದು ವ್ಯಕ್ತಿಯ ಬೆರಳಚ್ಚು, ಐರಿಸ್ ಸ್ಕ್ಯಾನ್, ಒಟಿಪಿ ದೃಢೀಕರಣ ಮತ್ತು ಕ್ಯೂಆರ್ ಕೋಡ್ ಮೂಲಕ ರಚನೆಯಾಗಿದೆ ಎಂದು ಯುಐಡಿಎಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+