ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸರ್ಕಾರವು ಮೂರನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್ 1 ರಿಂದ ಡಿಸೆಂಬರ್ 31 ರ ವರೆಗೆ) ಹಲವಾರು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 40 ಬಿಪಿಎಸ್ ಗಳಷ್ಟು ಏರಿಸಿದೆ.
ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸರ್ಕಾರವು ಮೂರನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್ 1 ರಿಂದ ಡಿಸೆಂಬರ್ 31 ರ ವರೆಗೆ) ಹಲವಾರು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 40 ಬಿಪಿಎಸ್ ಗಳಷ್ಟು ಏರಿಸಿದೆ. ಈ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಸುಕಾನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಮತ್ತು ಪೋಸ್ಟ್ ಆಫೀಸ್ ಅವಧಿ ಠೇವಣಿಗಳು ಸೇರಿವೆ.
ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ದರಗಳು ಬದಲಾಗಿರಲಿಲ್ಲ. ಸ್ಥಿರ ಆದಾಯದ ಹೂಡಿಕೆದಾರರಿಗೆ ಇದು ಖುಷಿಯ ವಿಷಯವಾಗಿದೆ. ಜನವರಿ 2018, ತ್ರೈಮಾಸಿಕದಲ್ಲಿ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿಮೆ ಮಾಡಿತು. ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..
ಬಡ್ಡಿದರ ಹೆಚ್ಚಳದ ಪ್ರಮಾಣ
ಸೆಪ್ಟೆಂಬರ್ 19 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 30 ಬೇಸಿಕ್ ಪಾಯಿಂಟ್ ಮತ್ತು 40 ಬೇಸಿಸ್ ಪಾಯಿಂಟ್ ಗಳ ನಡುವೆ ಹೆಚ್ಚಿಸಲಾಗಿದೆ. (ಒಂದು ಶೇಕಡಾವಾರು ಪಾಯಿಂಟ್ 100 ಬೇಸಿಸ್ ಪಾಯಿಂಟ್ ಗಳಿಗೆ ಸಮಾನವಾಗಿದೆ.)
30/ 40 ಬೇಸಿಸ್ ಪಾಯಿಂಟ್ ಏರಿಕೆ
ಒಂದು ವರ್ಷ, ಎರಡು ವರ್ಷ ಮತ್ತು ಮೂರು ವರ್ಷಗಳ ಸಮಯದ ಠೇವಣಿ ಬಡ್ಡಿಯನ್ನು 30 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಾಗಿದೆ.
ಐದು ವರ್ಷಗಳ ಸಮಯದ ಠೇವಣಿ, ಸುಕಾನ್ಯಾ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್ ನಂತಹ ಇತರ ಯೋಜನೆಗಳ ಬಡ್ಡಿಯನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಾಗಿದೆ.
ಪಿಪಿಎಫ್, ಸುಕನ್ಯಾ, ಎನ್ಪಿಎಸ್, ಹಿರಿಯ ನಾಗರಿಕರ ಬಡ್ಡಿದರ
ಪಿಪಿಎಫ್ ಮತ್ತು ಎನ್ಎಸ್ಸಿ ಯೋಜನೆಗಳು ಶೇ. 8ರಷ್ಟು ಬಡ್ಡಿದರ ಗಳಿಸಲಿದ್ದು, ಸುಕಾನ್ಯಾ ಸಮೃದ್ಧಿ ಯೋಜನೆ ವಾರ್ಷಿಕ ಶೇ. 8.5 ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 8.7 ರಷ್ಟು ಬಡ್ಡಿದರ ಸಿಗಲಿದೆ.
ಆದಾಗ್ಯೂ, ಅಂಚೆ ಕಚೇರಿ ಉಳಿತಾಯ ಖಾತೆ ಮೇಲಿನ ಬಡ್ಡಿದರದ ದರವು ಮೊದಲಿನಷ್ಟೆ ಶೇ. 4 ರಷ್ಟು ಇಡಲಾಗಿದೆ.


Click it and Unblock the Notifications