For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜನೆವರಿ ೨೦೧೫ ರಲ್ಲಿ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana) ಆರಂಭಿಸಿದೆ.

By Siddu
|

ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜನೆವರಿ 2015 ರಲ್ಲಿ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana) ಆರಂಭಿಸಿದೆ. ಇದು ಹೆಣ್ಣು ಮಕ್ಕಳ ಹೆಸರಲ್ಲಿ ತೆರೆಯಲಾಗುವ ಸಣ್ಣ ಉಳಿತಾಯ ಯೋಜನೆ ಖಾತೆ ಎಂದು ಭಾರತ ಸರಕಾರದ ವೆಬ್‌ಸೈಟ್ india.gov.in ನಲ್ಲಿ ತಿಳಿಸಲಾಗಿದೆ.

 

ಮುಂಚೆ ಈ ಯೋಜನೆಯಲ್ಲಿ ಇದ್ದ 1000 ರೂಪಾಯಿ ಕನಿಷ್ಠ ಕಂತಿನ ಮೊತ್ತವನ್ನು ಇತ್ತೀಚೆಗೆ ರೂ. 250 ಕ್ಕೆ ಇಳಿಸಲಾಗಿದೆ. ಅಂದರೆ ಇನ್ನು ಖಾತೆಯ ವಂತಿಗೆದಾರರು ವರ್ಷಕ್ಕೆ ಕೇವಲ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದಾಗಿದೆ. ಹೆಣ್ಣು ಮಕ್ಕಳ ಪಾಲಕರು ಅಥವಾ ಕಾನೂನಾತ್ಮಕ ಪೋಷಕರು ಹೆಣ್ಣು ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಗರಿಷ್ಠ ಖಾತೆಗಳ ಸಂಖ್ಯೆ

ಗರಿಷ್ಠ ಖಾತೆಗಳ ಸಂಖ್ಯೆ

ಸುಕನ್ಯಾ ಸಮೃದ್ಧಿ ಯೋಜನೆಯಡಿ ಓರ್ವ ಪಾಲಕ ಅಥವಾ ಪೋಷಕ ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದು ಖಾತೆ ಅಥವಾ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಎರಡು ಖಾತೆಗಳನ್ನು ಆರಂಭಿಸಲು ಅವಕಾಶವಿದೆ ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (PIB) ಪ್ರಕಟಣೆಯಲ್ಲಿ ತಿಳಿಸಿದೆ. ಎರಡನೇ ಹೆರಿಗೆ ಸಂದರ್ಭದಲ್ಲಿ ಅವಳಿ ಹೆಣ್ಣು ಮಕ್ಕಳು ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದಲ್ಲಿ ಮೂವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸಬಹುದು ಎಂದು ಈ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಖಾತೆಯ ಕಾಲಾವಧಿ

ಖಾತೆಯ ಕಾಲಾವಧಿ

ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ತದನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ 21 ವರ್ಷದ ಪಕ್ವತಾ ಅವಧಿಯ ನಂತರವೂ ಖಾತೆಯನ್ನು ಬಂದ್ ಮಾಡದಿದ್ದಲ್ಲಿ ಖಾತೆಯಲ್ಲಿನ ಹಣಕ್ಕೆ ಆಯಾ ಕಾಲಕ್ಕೆ ನಿರ್ಧರಿತವಾಗುವ ದರದಲ್ಲಿ ಬಡ್ಡಿಯನ್ನು ಜಮೆ ಮಾಡಲಾಗುತ್ತದೆ. ಒಂದು ವೇಳೆ ಖಾತೆ ಆರಂಭಿಸಿದ ೨೧ ವರ್ಷದೊಳಗೆ ಖಾತೆ ಹೊಂದಿದ ಹೆಣ್ಣು ಮಗಳು ವಿವಾಹವಾದಲ್ಲಿ ಖಾತೆಯನ್ನು ಸ್ವಚಾಲಿತವಾಗಿ ಮುಕ್ತಾಯಗೊಳಿಸಲಾಗುತ್ತದೆ.

ಹಣ ಪಾವತಿಯ ಗರಿಷ್ಠ ಕಾಲಾವಧಿ
 

ಹಣ ಪಾವತಿಯ ಗರಿಷ್ಠ ಕಾಲಾವಧಿ

ಖಾತೆ ತೆರೆದ 14 ವರ್ಷಗಳವರೆಗೆ ಖಾತೆಗೆ ವಂತಿಗೆ ಪಾವತಿಸಬಹುದು. ಈ ಅವಧಿಯ ನಂತರ ಖಾತೆಯಲ್ಲಿ ಹಣಕ್ಕೆ ಬಡ್ಡಿಯನ್ನು ಮಾತ್ರ ಜಮೆ ಮಾಡುತ್ತ ಹೋಗಲಾಗುತ್ತದೆ.

ಹಣ ಹಿಂಪಡೆಯುವಿಕೆ

ಹಣ ಹಿಂಪಡೆಯುವಿಕೆ

ಖಾತೆ ಹೊಂದಿದ ಹೆಣ್ಣು ಮಗಳು ತನಗೆ ೧೮ ವರ್ಷ ವಯಸ್ಸು ಪೂರ್ಣವಾದ ನಂತರ ಒಂದು ವೇಳೆ ಬಯಸಿದಲ್ಲಿ, 21 ವರ್ಷದ ಪಕ್ವತಾ ಅವಧಿಯ ಮುನ್ನವೇ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇ. 50 ರಷ್ಟನ್ನು ಉನ್ನತ ವಿದ್ಯಾಭ್ಯಾಸ ಅಥವಾ ವಿವಾಹಕ್ಕಾಗಿ ಮರಳಿ ಪಡೆಯಬಹುದಾಗಿದೆ.

ತೆರಿಗೆ ವಿನಾಯಿತಿ

ತೆರಿಗೆ ವಿನಾಯಿತಿ

ಆದಾಯ ತೆರಿಗೆ ಕಾಯ್ದೆ 1961 ರ 80 ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ನೀಡಲಾಗಿದ್ದು ಸುಕನ್ಯಾ ಸಮೃದ್ಧಿ ಯೋಜನೆಯ ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇತ್ತೀಚಿನ ಹಣಕಾಸು ಕಾಯ್ದೆಯಲ್ಲಿ ಈ ಯೋಜನೆಗೆ ಒಟ್ಟು ಮೂರು ರೀತಿಯ ತೆರಿಗೆ ವಿನಾಯಿತಿ ನೀಡಲಾಗಿದೆ. ಖಾತೆಯಲ್ಲಿ ಹೂಡಿಕೆ ಮಾಡಿದ ಹಣ, ಈ ಹಣ ಗಳಿಸುವ ಬಡ್ಡಿ ಹಾಗೂ ಹಿಂಪಡೆಯುವ ಮೊತ್ತ ಹೀಗೆ ಈ ಮೂರೂ ರೀತಿಯ ಮೊತ್ತಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ.

ಅವಧಿಪೂರ್ವ ಖಾತೆ ನಿಲುಗಡೆ

ಅವಧಿಪೂರ್ವ ಖಾತೆ ನಿಲುಗಡೆ

ಖಾತೆಯ ಪಕ್ವತಾ ಅವಧಿಯ ಮುನ್ನ ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ಖಾತೆಯನ್ನು ಮುಕ್ತಾಯಗೊಳಿಸಲು ಅವಕಾಶವಿದೆ.
ಮೊದಲನೆಯದಾಗಿ, ಖಾತೆ ಹೊಂದಿದ ಹೆಣ್ಣುಮಗಳು ಮರಣ ಹೊಂದಿದಲ್ಲಿ ಮಾತ್ರ ಖಾತೆಯನ್ನು ಮುಕ್ತಾಯಗೊಳಿಸಬಹುದು ಹಾಗೂ ಆಕೆಯ ಪಾಲಕರು ಅಥವಾ ಪೋಷಕರು ಖಾತೆಯಲ್ಲಿನ ಮೊತ್ತ ಹಾಗೂ ಅದು ಗಳಿಸಿದ ಬಡ್ಡಿಯ ಮೇಲೆ ತಮ್ಮ ಹಕ್ಕು ಮಂಡಿಸಬಹುದು. ಖಾತೆಯಲ್ಲಿ ಜಮೆಯಾದ ಮೊತ್ತವನ್ನು ನಾಮಿನಿ ಅಕೌಂಟಿಗೆ ಜಮೆ ಮಾಡಲಾಗುವುದು.
ಎರಡನೆಯದಾಗಿ, ಖಾತೆಯ ವಂತಿಗೆದಾರರು ಇನ್ನು ಯಾವುದೇ ವಂತಿಗೆಯನ್ನು ನೀಡುವ ಪರಿಸ್ಥಿತಿಯಲ್ಲಿ ಇಲ್ಲ ಅಥವಾ ಇದರಿಂದ ವಂತಿಗೆದಾರರಿಗೆ ತೀರಾ ಆರ್ಥಿಕ ಹೊರೆಯಾಗುತ್ತಿದೆ ಎಂಬುದು ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆಯಾದಲ್ಲಿ ಮಾತ್ರ ಖಾತೆ ಮುಕ್ತಾಯಗೊಳಿಸಲು ಅವಕಾಶ ನೀಡಲಾಗುತ್ತದೆ.
ಈ ಎರಡು ಸಂದರ್ಭಗಳನ್ನು ಬಿಟ್ಟರೆ ಮತ್ತಾವ ಸಂದರ್ಭಗಳಲ್ಲಿಯೂ ಖಾತೆಯನ್ನು ಮುಕ್ತಾಯಗೊಳಿಸಲು ಸಾಧ್ಯವಿಲ್ಲ.

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಹೆಣ್ಣು ಮಗು ಹುಟ್ಟಿದ 10 ವರ್ಷಗಳ ಅವಧಿಯೊಳಗೆ ಮಗುವಿನ ಪಾಲಕರು ಅಥವಾ ಕಾನೂನಾತ್ಮಕ ಪೋಷಕರು ಮಗುವಿನ ಹೆಸರಲ್ಲಿ ಖಾತೆ ಆರಂಭಿಸಬಹುದು. ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದೇ ಖಾತೆಯನ್ನು ತೆರೆಯಬಹುದು. ಗರಿಷ್ಠ ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಪಾಲಕರು ಅಥವಾ ಪೋಷಕರು ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬಹುದು. ಆದರೂ ಎರಡನೇ ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳು ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದಲ್ಲಿ ಮೂರು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು.

ಖಾತೆ ಆರಂಭಿಸಲು ಬೇಕಾದ ದಾಖಲೆಗಳು

ಖಾತೆ ಆರಂಭಿಸಲು ಬೇಕಾದ ದಾಖಲೆಗಳು

- ಖಾತೆ ಆರಂಭಿಸುವ ಅರ್ಜಿ ಫಾರಂ
- ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ
- ಗುರುತಿನ ದಾಖಲೆ (ಆರ್‌ಬಿಐನ ಕೆವೈಸಿ ನಿಯಮಗಳ ಅನುಸಾರ)
- ವಿಳಾಸದ ಪುರಾವೆ (ಆರ್‌ಬಿಐನ ಕೆವೈಸಿ ನಿಯಮಗಳ ಅನುಸಾರ)

ಸುಕನ್ಯಾ ಸಮೃದ್ಧಿ ಖಾತೆಯನ್ನು ಎಲ್ಲಿ ತೆರೆಯಬಹುದು?

ಸುಕನ್ಯಾ ಸಮೃದ್ಧಿ ಖಾತೆಯನ್ನು ಎಲ್ಲಿ ತೆರೆಯಬಹುದು?

ದೇಶದ ಪ್ರಮುಖ ಬ್ಯಾಂಕ್ ಶಾಖೆಗಳು ಅಥವಾ ಅಂಚೆ ಕಚೇರಿ ಶಾಖೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ಆರಂಭಿಸಲು ನಿಗದಿಪಡಿಸಲಾದ ಬ್ಯಾಂಕ್‌ಗಳ ಅಧಿಕೃತ ಪಟ್ಟಿ ಹೀಗಿದೆ;
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ ಆಫ್ ಬಿಕಾನೇರ ಆಂಡ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ವಿಜಯಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೊ ಬ್ಯಾಂಕ್, ಸಿಂಡಿಕೇಟ ಬ್ಯಾಂಕ್, ಪಂಜಾಬ ನ್ಯಾಷನಲ್ ಬ್ಯಾಂಕ್, ಪಂಜಾಬ ಆಂಡ್ ಸಿಂಧ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಇಂಡಿಯನ್ ಓವರಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ದೇನಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಅಲಹಾಬಾದ ಬ್ಯಾಂಕ್.

English summary

Sukanya Samriddhi Yojana: New Rules And All Details

The central government launched the 'Sukanya Samriddhi Account' programme in January 2015 with an objective to promote the welfare of girl child.
Story first published: Thursday, August 23, 2018, 11:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X