ಪಿಎನ್‌ಬಿ ವಂಚನೆ: ನಿರವ್ ಮೋದಿಯ ರೂ. 637 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನಾ ಪ್ರಕರಣದ ಆರೋಪಿ ನಿರವ್ ಮೋದಿ ಕುಟುಂಬಕ್ಕೆ ಸೇರಿದ ರೂ. 637 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನಾ ಪ್ರಕರಣದ ಆರೋಪಿ ನಿರವ್ ಮೋದಿ ಕುಟುಂಬಕ್ಕೆ ಸೇರಿದ ರೂ. 637 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಪಿಎನ್‌ಬಿ ವಂಚನೆ: ನಿರವ್ ಮೋದಿಯ ರೂ. 637 ಕೋಟಿ ಆಸ್ತಿ ಮುಟ್ಟುಗೋಲು

ಭಾರತ, ಯುಕೆ ಮತ್ತು ನ್ಯೂಯಾರ್ಕ್ ನಲ್ಲಿನ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದ್ದು, ಈ ದೇಶಗಳಲ್ಲಿ ಆಸ್ತಿ, ಆಭರಣಗಳು, ಫ್ಲಾಟ್ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಇದೆ ಎಂದು ಏಜೆನ್ಸಿ ಹೇಳಿದೆ. ನ್ಯೂಯಾರ್ಕ್‌ನಲ್ಲಿನ ನೀರವ್ ಮೋದಿ ಮಾಲೀಕತ್ವದ ಸುಮಾರು ರೂ. 216 ಕೋಟಿ ಮೌಲ್ಯದ ಎರಡು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 5ರ ಅಡಿಯಲ್ಲಿಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.

ದೇಶದಲ್ಲಿನ ಬ್ಯಾಂಕುಗಳ 5 ಖಾತೆಗಳಿಂದ ರೂ. 278 ಕೋಟಿ ನಗದು ಮತ್ತು ದಕ್ಷಿಣ ಮುಂಬಯಿಯಲ್ಲಿರುವ ರೂ. 19.50 ಕೋಟಿ ಬೆಲೆಯ ಫ್ಲಾಟ್ ಜಪ್ತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಹಾಂಕಾಂಗ್‌ನಲ್ಲಿ ಬಚ್ಚಿಡಲಾಗಿದ್ದ ರೂ. 22.69 ಕೋಟಿ ಬೆಲೆಯ ವಜ್ರ ಖಚಿತ ಆಭರಣ ಭಾರತಕ್ಕೆ ತರಲಾಗುತ್ತಿದೆ ಎಂದು ವರದಿಯಾಗಿದೆ.
ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ನಿಂದ ರೂ. 13,500 ಕೋಟಿ ಹಣ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+