For Quick Alerts
ALLOW NOTIFICATIONS  
For Daily Alerts

ಜಿಯೋ - ವೋಡಾಫೋನ್ ಕಂಗಾಲು! ಏರ್ಟೆಲ್ ನಿಂದ 2,000 ಕ್ಯಾಶ್ ಬ್ಯಾಕ್ ಆಫರ್..

ಭಾರ್ತಿ ಏರ್ಟೆಲ್ ಸಂಸ್ಥೆ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ನಂತಹ ಸ್ಪರ್ಧಿಗಳನ್ನು ಎದುರಿಸಲು ಹಬ್ಬದ ಪ್ರಯುಕ್ತ ಹೊಸ ಆಫರ್ ನ್ನು ಮಂಗಳವಾರ ಘೋಷಿಸಿದೆ.

|

ಭಾರ್ತಿ ಏರ್ಟೆಲ್ ಸಂಸ್ಥೆ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ನಂತಹ ಸ್ಪರ್ಧಿಗಳನ್ನು ಎದುರಿಸಲು ಹಬ್ಬದ ಪ್ರಯುಕ್ತ ಹೊಸ ಆಫರ್ ನ್ನು ಮಂಗಳವಾರ ಘೋಷಿಸಿದೆ. ಕ್ಯಾಶ್ ಬ್ಯಾಕ್ ಯೋಜನೆಯಡಿ ಗ್ರಾಹಕರು ಹೊಸ ೪ಜಿ ಸ್ಮಾರ್ಟಫೋನ್ ಖರೀದಿ ನಂತರ ರೂ. 2,000 ತ್ವರಿತ ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆಯಲಿದ್ದಾರೆ. ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ (CMEGP) ನೋಂದಣಿ, ಅರ್ಜಿ ಸಲ್ಲಿಸುವುದು ಹೇಗೆ?

ಏರ್ಟೆಲ್ ಥಾಂಕ್ಸ್

ಏರ್ಟೆಲ್ ಥಾಂಕ್ಸ್

ಏರ್ಟೆಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಆಫರ್ #ಏರ್ಟೆಲ್ ಥಾಂಕ್ಸ್ ಉಪಕ್ರಮದ ಒಂದು ಭಾಗವಾಗಿದ್ದು ತನ್ನ ನಿಷ್ಠಾವಂತ ಗ್ರಾಹಕರಿಗೆ ಪ್ರತಿಫಲ ನೀಡುವ ಗುರಿಯನ್ನು ಹೊಂದಿದೆ. ಗ್ರಾಹಕರು ಹೊಸ ೪ಜಿ ಸ್ಮಾರ್ಟಫೋನ್ ಖರೀದಿಸಿದ ನಂತರ ಏರ್ಟೆಲ್ ರೂ. 50 ಮೌಲ್ಯದ 40 ಕೂಪನ್ ಗಳ ರೂಪದಲ್ಲಿ ಕ್ಯಾಶ್ಬ್ಯಾಕ್ ಅನ್ನು ಒದಗಿಸುತ್ತಿದೆ. ನಂತರದ ರೀಚಾರ್ಜ್ ಅಥವಾ ಪೋಸ್ಟ್ಪೇಡ್ ಬಿಲ್ ಪಾವತಿಗಳ ಮೇಲೆ ಬಳಸಬಹುದಾಗಿದೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್

ಈ ಹಿಂದೆ ಜಿಯೋ ತನ್ನ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್ ನೀಡಿದಂತೆಯೇ ಈ ಆಫರ್ ಇದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಸಂದರ್ಭದಲ್ಲಿ ೪ಜಿ ಸ್ಮಾರ್ಟ್ಫೋನ್ ಖರೀಸುವ ಗ್ರಾಹಕರಿಗೆ ಏರ್ಟೆಲ್ ರೂ. 2,500 ಕ್ಯಾಶ್ಬ್ಯಾಕ್ ಘೋಷಿಸಿತ್ತು.

ಕ್ಯಾಶ್ ಬ್ಯಾಕ್ ಪಡೆಯೋದು ಹೇಗೆ?

ಕ್ಯಾಶ್ ಬ್ಯಾಕ್ ಪಡೆಯೋದು ಹೇಗೆ?

ಏರ್ಟೆಲ್ ಹೊಸ ಆಫರ್ ಪ್ರಕಾರ, ಗ್ರಾಹಕರ ಮೈ ಏರ್ಟೆಲ್ ಅಕೌಂಟ್ ಗೆ ರೂ. 50 ಮೌಲ್ಯದ 40 ಕೂಪನ್ ಗಳ ರೂಪದಲ್ಲಿ ಒಟ್ಟು 2,000 ಕ್ಯಾಶ್ ಬ್ಯಾಕ್ ಪ್ರಯೋಜನ ಸಿಗಲಿದೆ. ರೂ. 199, ರೂ. 249, ಮತ್ತು ರೂ. 448 ಪ್ರಿಪೇಯ್ಡ್ ಪ್ಯಾಕ್ಗಳು ​​ಅಥವಾ ಪೋಸ್ಟ್ ಪೇಯ್ಡ್ ಬಿಲ್ ಪಾವತಿ ರೂ. 399 ಮತ್ತು ಅದಕ್ಕಿಂತ ಮೇಲ್ಪಟ್ಟ ರೀಚಾರ್ಜ್ ಗಳ ಮೇಲೆ ಕೂಪನ್ ಗಳನ್ನು ಪುನಹ ಪಡೆದುಕೊಳ್ಳಬಹುದು.

ಕಂಡಿಷನ್

ಕಂಡಿಷನ್

ಮುಖ್ಯವಾಗಿ, ಏಕಕಾಲದಲ್ಲಿ ಒಂದೇ ಕೂಪನ್ ಮಾತ್ರ ಪಡೆಯಬಹುದು. ಇದರರ್ಥ ನೀಡಲಾದ ಕೂಪನ್ ಗಳನ್ನು ಬಳಸಿಕೊಂಡು ಪ್ರತಿ ರೀಚಾರ್ಜ್ ಅಥವಾ ಬಿಲ್ ಪಾವತಿ ಮೇಲೆ ಗ್ರಾಹಕರು 50 ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಾಗುವುದಿಲ್ಲ.

English summary

Airtel Rivals Jio and Vodafone by Offering Rs. 2,000 Cashback

Airtel offering an instant cashback benefit worth Rs. 2,000 to customers upgrading to a new 4G smartphone.
Story first published: Wednesday, October 24, 2018, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X