For Quick Alerts
ALLOW NOTIFICATIONS  
For Daily Alerts

ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ (CMEGP) ನೋಂದಣಿ, ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರ್ಕಾರ 'ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆ' (CMEGP) ಪರಿಚಯಿಸಿದ್ದು, ರಾಜ್ಯದಲ್ಲಿ ಸ್ವ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ರಾಜ್ಯ ಸರ್ಕಾರ ಸುಮಾರು ಹತ್ತು ಲಕ್ಷದವರೆಗೆ ಸಾಲ ನೀಡಲಿದ್ದು, ಶೇ. ೨೫-೩೫ ರವರೆಗೆ ಸಬ್ಸಿಡಿ.

|

ಸರ್ಕಾರಗಳು ಅನೇಕ ಸಾಮಾಜಿಕ ಭದ್ರತೆಯ ಜನಪರ, ಉದ್ಯೋಗ ನಿರ್ಮಾಣದಂತ ಸ್ಕೀಮ್ ಗಳನ್ನು ಜಾರಿ ತರುತ್ತಿವೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ 'ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆ' (CMEGP) ಪರಿಚಯಿಸಿದ್ದು, ರಾಜ್ಯದಲ್ಲಿ ಸ್ವ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ರಾಜ್ಯ ಸರ್ಕಾರ ಸುಮಾರು 10 ಲಕ್ಷದವರೆಗೆ ಸಾಲ ನೀಡಲಿದ್ದು, ಶೇ. 25-35 ರವರೆಗೆ ಸಬ್ಸಿಡಿ ಸಿಗಲಿದೆ. ಗ್ರಾಮೀಣ ಭಾಗದ ಉದ್ಯಮಿಗಳಿಗೆ ಹೆಚ್ಚು ಅನುಕೂಲಕರವಾಗಲಿ ಎಂಬುದು ಸಿಎಂ ಸ್ವಉದ್ಯೋಗ ಯೋಜನೆಯ ಪ್ರಾಥಮಿಕ ಧ್ಯೇಯವಾಗಿದೆ. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

 

ಅನುಷ್ಠಾನ ಸಹಯೋಗ

ಅನುಷ್ಠಾನ ಸಹಯೋಗ

ಕರ್ನಾಟಕ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ (KVIB) ಹಾಗು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಫಲಾನುಭವಿಗಳು ಯೋಜನೆಯ ಒಟ್ಟು ವೆಚ್ಚದ ಶೇ. 5-10ರಷ್ಟು ಪಾವತಿಸಬೇಕಾಗುತ್ತದೆ. ಸರ್ಕಾರ ಸ್ವಉದ್ಯೋಗ ಯೋಜನೆಗಳ ಸಾಲದ ಮೇಲೆ ಶೇ. 25-35 ರವರೆಗೆ ಸಬ್ಸಿಡಿ ನೀಡಲಿದೆ.  ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಸಾಲ ನೀಡುವ ಬ್ಯಾಂಕುಗಳು

ಸಾಲ ನೀಡುವ ಬ್ಯಾಂಕುಗಳು

ಸಾರ್ವಜನಿಕ ವಲಯದ ಬ್ಯಾಂಕುಗಳು
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB)
ಉದ್ಯಮಿಗಳಿಗೆ CEDOK OR RUSET ಮುಖಾಂತರ ತರಬೇತಿ ನೀಡಲಾಗುವುದು. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಸಿಎಂ ಸ್ವಉದ್ಯೋಗ ಸ್ಕೀಮ್ ಕರ್ನಾಟಕ ಎಂದರೇನು?
 

ಸಿಎಂ ಸ್ವಉದ್ಯೋಗ ಸ್ಕೀಮ್ ಕರ್ನಾಟಕ ಎಂದರೇನು?

ಕರ್ನಾಟಕದಲ್ಲಿನ ಗ್ರಾಮೀಣ ಭಾಗದ ಯುವಕರಲ್ಲಿ ಸ್ವ ಉದ್ಯೋಗ ನಿರ್ಮಾಣ ಮಾಡುವುದು ಈ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ. ಉದ್ಯಮ ಪ್ರಾರಂಭಿಸುವವರಿಗೆ ಸರ್ಕಾರ ಇದಕ್ಕೆ ಬೇಕಾಗುವ ಹಣಕಾಸು ಸಹಕಾರ, ತರಬೇತಿ ನೀಡುತ್ತದೆ.

ಸಿಎಂ ಸ್ವ ಉದ್ಯೋಗ ಯೋಜನೆ ಉದ್ದೇಶ

ಸಿಎಂ ಸ್ವ ಉದ್ಯೋಗ ಯೋಜನೆ ಉದ್ದೇಶ

ಉದ್ಯೋಗ ಸೃಷ್ಟಿ
ಸ್ವ ಉದ್ಯೋಗಕ್ಕೆ ಪೂರಕ ಸಹಕಾರ
ಗ್ರಾಮೀಣ ಯುವಕರ ಸಬಲೀಕರಣ
ಹಣಕಾಸು ಸಹಾಯ

ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆ ಲಾಭ

ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆ ಲಾಭ

- ಉದ್ಯಮ ಆರಂಭಿಸಲು ರೂ. 10 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ
- ಶೇ. 25-35 ರವರೆಗೆ ಸಬ್ಸಿಡಿ
- ಸಾಮಾನ್ಯ ಕೆಟಗರಿ: ಸಬ್ಸಿಡಿ ರೂ. 2.5 ಲಕ್ಷ
- ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆ, ಅಲ್ಪಸಂಖ್ಯಾತ ಕೆಟಗರಿ: ಸಬ್ಸಿಡಿ ರೂ. 3.5 ಲಕ್ಷ
- ಉದ್ಯಮಶೀಲತ್ವ ಅಭಿವೃದ್ಧಿ ತರಬೇತಿ (ಇಡಿಪಿ)

ಸಿಎಂ ಸ್ವಉದ್ಯೋಗ ಯೋಜನೆ ಅರ್ಜಿ ಸಲ್ಲಿಕೆ

ಸಿಎಂ ಸ್ವಉದ್ಯೋಗ ಯೋಜನೆ ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಕೆ ಆರಂಭ: 01-06- 2018
ಅರ್ಜಿ ಸಲ್ಲಿಕೆ ಕೊನೆ ದಿನ: 13-11-2018

ಸಿಎಂ ಸ್ವ ಉದ್ಯೋಗ ಯೋಜನೆ ಅರ್ಹತೆ

ಸಿಎಂ ಸ್ವ ಉದ್ಯೋಗ ಯೋಜನೆ ಅರ್ಹತೆ

- ಯೋಜನೆ ಕರ್ನಾಟಕದ ಮೂಲನಿನಾಸಿಗಳಿಗೆ ಮಾತ್ರ ಅನ್ವಯ
- ಸಾಮಾನ್ಯ ವರ್ಗ
ವಯಸ್ಸು ಮಿತಿ: 21-35 ವರ್ಷ
ಯೋಜನೆಯ ಶೇ. 10ರಷ್ಟು ವೆಚ್ಚ ಪಾವತಿಸಬೇಕು.
- ಪ.ಜಾತಿ, ಪ.ಪಂಗಡ, ಒಬಿಸಿ, ಮಹಿಳೆ, ಅಲ್ಪಸಂಖ್ಯಾತ ವಯಸ್ಸು ಮಿತಿ: 21-45 ವರ್ಷ
ಯೋಜನೆಯ ಶೇ. 5ರಷ್ಟು ವೆಚ್ಚ ಪಾವತಿಸಬೇಕು.
- ಫಲಾನುಭವಿಗಳಿಗೆ ಉದ್ಯಮಶೀಲತ್ವ ಅಭಿವೃದ್ಧಿ ತರಬೇತಿ (ಇಡಿಪಿ) ಕಡ್ಡಾಯ
- ಒಂದು ಕುಟುಂಬ ಕೇವಲ ಒಂದು ಯುನಿಟ್ ಸ್ಥಾಪಿಸಬಹುದು.
- ಮೂರು ವರ್ಷಗಳ ಅವಧಿಗೆ ಗ್ರಾಮೀಣ ಭಾಗದ ಯುವಕರಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು.

ಬೇಕಾಗುವ ದಾಖಲಾತಿಗಳು

ಬೇಕಾಗುವ ದಾಖಲಾತಿಗಳು

ಯೋಜನಾ ವರದಿ (Project plan)
ಪಾಸ್ಪೋರ್ಟ್ ಪೋಟೊ
ಶೈಕ್ಷಣಿಕ ಅರ್ಹತೆ
ವಯಸ್ಸು ದಾಖಲಾತಿ
ರೇಷನ್ ಕಾರ್ಡ್/ವೋಟರ್ ಐಡಿ
ಇಡಿಪಿ ಟ್ರೈನಿಂಗ್ ಸರ್ಟಿಫಿಕೇಟ್
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ಗ್ರಾಮ ಪಂಚಾಯತಿ ಅನುಮತಿ ಪತ್ರ
ಜಾತಿ ಪ್ರಮಾಣ ಪತ್ರ
ಎಕ್ಸ್ ಸರ್ವಿಸ್ ಮೆನ್
ಅಂಗವಿಕಲ ಪ್ರಮಾಣಪತ್ರ
ಉಪಕರಣ ಖರೀದಿ ಪಟ್ಟಿ

ಸಿಎಂ ಸ್ವ ಉದ್ಯೋಗ ಯೋಜನೆ ಅರ್ಜಿ ಫಾರ್ಮ್

ಸಿಎಂ ಸ್ವ ಉದ್ಯೋಗ ಯೋಜನೆ ಅರ್ಜಿ ಫಾರ್ಮ್

ಸಿಎಂ ಸ್ವ ಉದ್ಯೋಗ ಯೋಜನೆಗೆ ಆನ್ಲೈನ್ ಇಲ್ಲವೆ ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕೆಳಗೆ ನೀಡಲಾಗಿರುವ ಲಿಂಕ್ ನಲ್ಲಿನ ಪಿಡಿಎಫ್ ಮಾದರಿಯನ್ನು ಡೌನ್ಲೋಡ್ ಮಾಡಿ ಅರ್ಜಿ ತುಂಬಿ ದಾಖಲಾತಿಗಳೊಂದಿಗೆ ಕರ್ನಾಟಕ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ (KVIB) ಹಾಗು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಿಗೆ ಜಿಲ್ಲಾ ಕಚೇರಿಗೆ ಸಲ್ಲಿಸಿ. https://cmegp.kar.nic.in/Downloads/ANNEXURE-1.pdf

ಆನ್ಲೈನ್ ಅರ್ಜಿ ಸಲ್ಲಿಕೆ

ಆನ್ಲೈನ್ ಅರ್ಜಿ ಸಲ್ಲಿಕೆ

ಆನ್ಲೈನ್ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಂಸ್ಥೆ ಆಯ್ಕೆ / Select Agency:

ಆಧಾರ್ ಸಂಖ್ಯೆ / Aadhaar No: ನಮೂದಿಸಿ ಮುಂದುವರೆಯಿರಿ.
ನಂತರದಲ್ಲಿ ನಿಮಗೆ ಸಿಎಂ ಸ್ವಉದ್ಯೋಗ ಯೋಜನೆ ಆಯ್ಕೆ ಕಾಣುತ್ತದೆ. ಮುಂದಿನ ಭಾಗದಲ್ಲಿ ಸಂಪೂರ್ಣ ಅರ್ಜಿ ವಿವರವನ್ನು ತುಂಬಿ ಸೇವ್ ಮಾಡಿ. ಜೊತೆಗೆ ಒಂದು ಪ್ರಿಂಟ್ ಔಟ್ ತೆಗೆಯಿರಿ. https://cmegp.kar.nic.in/User/OnlineAppForm.aspx

ಪ್ರಿಂಟ್ ಔಟ್ ಸಲ್ಲಿಸಿ

ಪ್ರಿಂಟ್ ಔಟ್ ಸಲ್ಲಿಸಿ

ಆನ್ಲೈನ್ ಮೂಲಕ ಅರ್ಜಿ ತುಂಬಿದ ನಂತರ ಪ್ರಿಂಟ್ ಔಟ್ ತೆಗೆದುಕೊಂಡು ಪೂರಕ ದಾಖಲಾತಿಗಳೊಂದಿಗೆ ಕರ್ನಾಟಕ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ (KVIB) ಹಾಗು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಿಗೆ ಜಿಲ್ಲಾ ಕಚೇರಿಗೆ ಸಲ್ಲಿಸಿ.

ಅರ್ಜಿ ಸ್ಟೇಟಸ್ ಚೆಕ್ ಮಾಡಿ

ಅರ್ಜಿ ಸ್ಟೇಟಸ್ ಚೆಕ್ ಮಾಡಿ

ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆಗೆ (CMEGP) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಲ್ಲಿ ನೀಡಲಾದ ಲಿಂಕ್ ಮೂಲಕ ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು. ಅಪ್ಲಿಕೇಶನ್ ಐಡಿ ನಮೂದಿಸಿ, ಕ್ಯಾಪ್ಚಾ ದಾಖಲಿಸಿ ವ್ಯೂ (VIEW) ಬಟನ್ ಮೇಲೆ ಕ್ಲಿಕ್ ಮಾಡಿ. https://cmegp.kar.nic.in/User/ApplicantStatus.aspx

English summary

CM Self Employment Scheme Karnataka: How to Register and Apply?

Karnataka government introduce CM Self Employment Scheme Karnataka to create self employment in the state.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X