ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ರೂ. 100 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿರುವುದು ಗೊತ್ತಿದೆ. ಆದರೆ ಮುದ್ರಣ ಸ್ಥಗಿತ ಆಗಿದ್ದರಿಂದ ಕಡಿಮೆಯಾಗಿದ್ದ 100ರ ನೋಟುಗಳು ಈಗ ಮತ್ತೆ ನಿಮ್ಮ ಕೈಗೆ ಸೇರಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ರೂ. 100 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿರುವುದು ಗೊತ್ತಿದೆ. ಆದರೆ ಮುದ್ರಣ ಸ್ಥಗಿತ ಆಗಿದ್ದರಿಂದ ಕಡಿಮೆಯಾಗಿದ್ದ 100ರ ನೋಟುಗಳು ಈಗ ಮತ್ತೆ ನಿಮ್ಮ ಕೈಗೆ ಸೇರಲಿವೆ.
ನೇರಳೆ ಬಣ್ಣದ ನೋಟುಗಳು ಶೀಘ್ರದಲ್ಲಿ ಸಿಗಲಿದ್ದು, ಮಹಾತ್ಮ ಗಾಂಧಿ ಸರಣಿಯ ರೂ. 100 ನೋಟುಗಳು ಫಸ್ಟ್ ಲುಕ್ ನಿಂದ ಎಲ್ಲರ ಮನ ಸೆಳೆದಿವೆ. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ಕೆನ್ನೇರಳೆ ಬಣ್ಣದ ನೋಟು
ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹೊಸ ನೋಟುಗಳು ಕೆನ್ನೇರಳೆ ಬಣ್ಣದಲ್ಲಿ ಮುದ್ರಣವಾಗುತ್ತಿವೆ. ಮಹಾತ್ಮಾ ಗಾಂಧಿಯಿರುವ ಹೊಸ ಸರಣಿಯ ನೋಟುಗಳಲ್ಲಿ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಸಹಿ ಇರಲಿದೆ. ನೋಟಿನ ಬಲಭಾಗದಲ್ಲಿ ಅಶೋಕ ಕಂಬದ ಲಾಂಛನ ಇರಲಿದೆ.
ಇತಿಹಾಸ, ಸಂಸ್ಕೃತಿ, ಪರಂಪರೆ
ಗುಜರಾತಿನ ಪಟಾನ್ ನಲ್ಲಿ ಹರಿಯುವ ಸರಸ್ವತಿ ನದಿ ತೀರದಲ್ಲಿರುವ ಮೆಟ್ಟಿಲುಗಳಿರುವ 'ರಾಣಿ ಕಿ ವಾವ್' ಚಿತ್ರ ನೋಟಿನ ಹಿಂಬದಿಯಲ್ಲಿದೆ. ಇದು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಸಾರಲಿದೆ. ಹನ್ನೊಂದನೇ ಶತಮಾನದ ರಾಜ ಭೀಮನ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ರಾಣಿ ಕಿ ವಾವ್ ವಿಶ್ವ ಪಾರಂಪಾರಿಕ ತಾಣವೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿದೆ.
ನೋಟಿನ ಅಳತೆ
ಪ್ರಸ್ತುತ ಚಲಾವಣೆಯಲ್ಲಿರುವ ರೂ. 100 ನೋಟು 73mm x 157mm ಗಾಳತೆ ಹೊಂದಿದೆ. ಹೊಸ ನೋಟಿನ ಸುತ್ತಳತೆ 66 mm × 142mm ಇರಲಿದೆ. ಹೊಸ ನೋಟು ಅಳತೆಯಲ್ಲಿ ಹತ್ತು ರೂಪಾಯಿ ನೋಟಿಗಿಂತ ಸಲ್ಪ ದೊಡ್ಡದಾಗಿ ಇರಲಿದೆ. ಹಳೆ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರಲಿವೆ.
ಹೊಸ ನೋಟಿನ ಹೆಗ್ಗಳಿಕೆ
ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳ ಹೆಗ್ಗಳಿಕೆ ಎಂದರೆ ಇವು ಮೊದಲ ಮೇಡ್ ಇನ್ ಇಂಡಿಯಾ ನೋಟುಗಳಾಗಿವೆ. ನೋಟು ತಯಾರಿಸಲು ಬೇಕಾಗುವ ಎಲ್ಲಾ ವಸ್ತುಗಳನ್ನು ಸ್ವದೇಶಿ ಕಂಪನಿಗಳಿಂದ ಬಳಸಿಕೊಳ್ಳಲಾಗಿದ್ದು, ನೋಟಿನ ವಿನ್ಯಾಸಕ್ಕೆ ಬಳಸಲಾದ ಕಾಗದ ಭಾರತದಲ್ಲೇ ತಯಾರಾಗಿದೆ. ನೋಟಿನಲ್ಲಿರುವ ಭದ್ರತಾ ಫೀಚರ್ಸ್ ಗಳನ್ನ ಭಾರತೀಯ ಕಂಪನಿಗಳೇ ವಿನ್ಯಾಸ ಮಾಡಿವೆ.
ನೋಟಿನ ಹಿಂಬಾಗದ ವಿಶೇಷತೆ
- ನೋಟಿನ ಎಡಭಾಗದಲ್ಲಿ ಮುದ್ರಣ ವರ್ಷ
- ಘೋಷಣೆಯೊಂದಿಗೆ ಸ್ವಚ್ ಭಾರತ್ ಲೋಗೊ
- ಭಾಷಾ ಫಲಕ
- ರಾನಿ ಕಿ ವಾವ್ ವಿಶಿಷ್ಟ ಚಿತ್ರ
- ದೇವನಾಗರಿಯಲ್ಲಿ १०० ಸಂಖ್ಯೆ


Click it and Unblock the Notifications