ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! ಮೊಬೈಲ್ ಮೂಲಕ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಸುಲಭ

ರೈಲ್ವೆ ಟಿಕೇಟ್ ಗಳನ್ನು ಕಾಯ್ದಿರಿಸಲು ಉದ್ದನೆಯ ಸಾಲುಗಳಲ್ಲಿ ಕಾಯುವುದೆಂದರೆ ತಲೆನೋವಿನ ಕೆಲಸ ಎಂದು ತುಂಬಾ ಜನರು ಗೊಣಗುವುದುಂಟು! ಆದರೆ ರೇಲ್ವೆ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.

ರೈಲ್ವೆ ಟಿಕೇಟ್ ಗಳನ್ನು ಕಾಯ್ದಿರಿಸಲು ಉದ್ದನೆಯ ಸಾಲುಗಳಲ್ಲಿ ಕಾಯುವುದೆಂದರೆ ತಲೆನೋವಿನ ಕೆಲಸ ಎಂದು ತುಂಬಾ ಜನರು ಗೊಣಗುವುದುಂಟು! ಆದರೆ ರೇಲ್ವೆ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.

ಮೊಬೈಲ್ ಮೂಲಕ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಸುಲಭ

ದೂರದ ಪ್ರಯಾಣಕ್ಕಾಗಿ ನಿಮ್ಮ ಮೀಸಲಿಡದ ಟಿಕೆಟ್ ಗಳನ್ನು ಪಡೆಯಲು ರೈಲ್ವೆ ಟಿಕೆಟ್ ಕೌಂಟರ್ ಗಳಲ್ಲಿ ಉದ್ದನೆಯ ಸಾಲುಗಳಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಭಾರತೀಯ ರೈಲ್ವೆ ಇಂದು ಅಧಿಕೃತವಾಗಿ ಆಲ್-ಇಂಡಿಯಾ ಅನ್ ರಿಸರ್ವ್ಡ್ ಮೊಬೈಲ್ ಟಿಕೇಟ್ ಸೌಲಭ್ಯವನ್ನು (ಯುಟಿಎಸ್ ಮೊಬೈಲ್ ಆಪ್) ಬಿಡುಗಡೆಗೊಳಿಸಿದೆ.

ಯುಟಿಎಸ್ (UTSONMOBILE) ಆಪ್ ಮೂಲಕ ಆನ್ಲೈನ್‌ ನಲ್ಲಿ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಕಾರ್ಯ ಸುಲಭವಾಗಲಿದೆ. ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಯುಟಿಎಸ್ ಮೊಬೈಲ್ ಆಪ್ ಮುಂಬೈ ಹೊರತಾಗಿ ಬೇರೆಡೆಗಳಲ್ಲಿ ಪ್ರಯಾಣಿಕರನ್ನು ಸೆಳೆಯಲು ವಿಫಲವಾಗಿತ್ತು. ದೇಶದ 15 ರೈಲ್ವೆ ವಲಯಗಳಲ್ಲಿ ಯುಟಿಎಸ್ ಅನ್ನು ಹಂತಹಂತವಾಗಿ ಜಾರಿಗೆ ತರಲಾಗಿತ್ತು. ಇದೀಗ ನವೆಂಬರ್ 1ರಿಂದ ಇಡೀ ದೇಶಾದ್ಯಂತ ಯುಟಿಎಸ್ ಆಪ್ ಜಾರಿಗೆ ಬಂದಿದೆ.

ಇದು ಸಂಪೂರ್ಣವಾಗಿ ನಗದು ರಹಿತ ವಿಧಾನವಾಗಿದೆ. ಯುಟಿಎಸ್ ಆಪ್‌ನಲ್ಲಿ ನೋಂದಾಯಿತರಾದವರಿಗೆ ಕೇವಲ ಕಾಯ್ದಿರಿಸದ ಟಿಕೆಟ್ ಅಷ್ಟೇ ಅಲ್ಲ, ಪ್ಲಾಟ್‌ಫಾರಂ ಟಿಕೆಟ್, ಮಾಸಿಕ ಪಾಸ್‌ ಗಳ ಖರೀದಿ ಕೂಡಾ ಸಾಧ್ಯವಿದೆ. ಯುಟಿಎಸ್ ಆಪ್ ಗೂಗಲ್ ಪ್ಲೇ ಸ್ಟೋರ್, ಆಪ್ ಸ್ಟೋರ್, ವಿಂಡೋಸ್ ಸ್ಟೋರ್ ನಲ್ಲಿ ಲಭ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+