ಹಬ್ಬದ ಸೀಸನ್ ನಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಗಳನ್ನು ಘೋಷಿಸುತ್ತವೆ.
ಹಬ್ಬದ ಸೀಸನ್ ನಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ಲಾನ್ ಗಳನ್ನು ಘೋಷಿಸುತ್ತವೆ.
ಇದೀಗ ಐಡಿಯಾ ಸಂಸ್ಥೆ ಜಿಯೋ, ಏರ್ಟೆಲ್ ನಂತಹ ಪ್ರಮುಖ ಕಂಪನಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ಜಿಯೋ, ಏರ್ಟೆಲ್, ವೋಡಾಫೋನ್ ಕಂಪನಿಗಳು ಈಗಾಗಲೇ ಹಲವು ಆಕರ್ಷಕ ಆಫರ್ ಗಳನ್ನು ಘೋಷಿಸಿವೆ. ಎಲ್ಪಿಜಿ ಗ್ರಾಹಕರಿಗೆ ಶಾಕ್! ಸಿಲಿಂಡರ್ ಬೆಲೆ ಏರಿಕೆ
ಐಡಿಯಾ ರೂ. 159 ಪ್ಲಾನ್
ವೊಡಾಫೋನ್ ನ ರೂ. 159 ಪ್ಲಾನ್ ಪರಿಚಯಿಸಿದ ನಂತರ ಐಡಿಯಾ ಕೂಡ ರೂ. 159 ರಿಚಾರ್ಜ್ ಪ್ಲಾನ್ ಆರಂಭಿಸಿದೆ. ಈ ಎರಡೂ ಪ್ಲಾನ್ ಮೂಲಕ ಗ್ರಾಹಕರು ಒಂದೇ ರೀತಿಯ ಲಾಭ ಪಡೆಯಲಿದ್ದಾರೆ. ವೊಡಾಫೋನ್ ಮತ್ತು ಐಡಿಯಾ ವಿಲೀನದ ನಂತರ ಎರಡೂ ಕಂಪನಿಗಳು ಒಂದೇ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ.
ರೂ. 159 ಪ್ಲಾನ್ ಪ್ರಯೋಜನ
ಐಡಿಯಾ ರೂ. 159 ಪ್ಲಾನ್ ನಲ್ಲಿ ವೊಡಾಫೋನ್ ನೀಡಿರುವಂತೆ 28 ಜಿಬಿ ಡೇಟಾ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಒದಗಿಸಲಿದೆ.
ಅನಿಯಮಿತ ಕರೆ ಸೌಲಭ್ಯ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. 2ಜಿ, 3ಜಿ ಹಾಗೂ 4ಜಿ ವೇಗದ ಡೇಟಾ ಗ್ರಾಹಕರಿಗೆ ಸಿಗಲಿದೆ. ಪ್ರತಿ ದಿನ 1ಜಿಬಿ ಡೇಟಾ ಆನಂದಿಸಬಹುದು.
ಪ್ಲಾನ್ ಚೆಕ್ ಮಾಡಿ
ಐಡಿಯಾ ಗ್ರಾಹಕರು ಕಂಪನಿ ವೆಬ್ಸೈಟ್ ಅಥವಾ ಮೊಬೈಲ್ ಆಪ್ ನಲ್ಲಿ ನಿಮ್ಮ ನಂಬರ್ ನಮೂದಿಸಿ, ಈ ಪ್ಲಾನ್ ಲಭ್ಯವಿದೆಯೆ ಎಂಬುದನ್ನು ಪರಿಶೀಲಿಸಿ. ಐಡಿಯಾ ರೂ. 159 ರಂತೆ ರೂ. 279 ಹಾಗೂ ರೂ. 189 ಹೊಸ ಪ್ಲಾನ್ ಶುರು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಏರ್ಟೆಲ್ - ಜಿಯೋಗೆ ಟಕ್ಕರ್
ಈಗಾಗಲೇ ಏರ್ಟೆಲ್ ಹಾಗೂ ಜಿಯೋ ಕಂಪನಿಗಳು ತಮ್ಮ ಗ್ರಾಹಕರಿಗೆ ರೂ. 159 ರೂಪಾಯಿ ಪ್ಲಾನ್ ಆರಂಭಿಸಿವೆ. ಹೀಗಾಗಿ ಏರ್ಟೆಲ್ ಹಾಗೂ ಜಿಯೋ ಕಂಪನಿಗಳಿಗೆ ಟಕ್ಕರ್ ನೀಡಲು ಐಡಿಯಾ ಮುಂದಾಗಿದ್ದು, ರೂ. 159 ಪ್ಲಾನ್ ಘೋಷಿಸಿದೆ.


Click it and Unblock the Notifications