For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಗ್ರಾಹಕರಿಗೆ ಶಾಕ್! ಸಿಲಿಂಡರ್ ಬೆಲೆ ಏರಿಕೆ

ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳುಗಳಿಂದ ಎಲ್ಪಿಜಿ ದರ ಏರಿಕೆ ಮಾಡುತ್ತಲೇ ಬಂದಿದ್ದು, ಇದೀಗ ನವೆಂಬರ್ ತಿಂಗಳಲ್ಲೂ ಕೂಡ ಎಲ್ಪಿಜಿ ದರ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದೆ.

|

ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳುಗಳಿಂದ ಎಲ್ಪಿಜಿ ದರ ಏರಿಕೆ ಮಾಡುತ್ತಲೇ ಬಂದಿದ್ದು, ಇದೀಗ ನವೆಂಬರ್ ತಿಂಗಳಲ್ಲೂ ಕೂಡ ಎಲ್ಪಿಜಿ ದರ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದೆ.

 

ಅಲ್ಲದೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿ ಹೋಗುವಂತಾಗಿದೆ.
ಸಬ್ಸಿಡಿ ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ನವೆಂಬರ್ 1ರ ಮಧ್ಯ ರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

ಸಬ್ಸಿಡಿ ಸಿಲಿಂಡರ್ ಬೆಲೆ

ಸಬ್ಸಿಡಿ ಸಿಲಿಂಡರ್ ಬೆಲೆ

ಸಬ್ಸಿಡಿ ಇರುವ ಸಿಲಿಂಡರ್ ಗಳ ಬೆಲೆಯಲ್ಲಿ ರೂ. 2.94 ಏರಿಕೆಯಾಗಿದ್ದು, ಇದರಿಂದಾಗಿ 14.2 ಕೆ.ಜಿ. ತೂಕದ ಸಿಲಿಂಡರ್ ಬೆಲೆ ದೆಹಲಿಯಲ್ಲಿ 505.34 ರೂಪಾಯಿಗಳಾಗಿದೆ. ಈ ಹಿಂದೆ ಇದರ ಬೆಲೆ 502.40 ರೂಪಾಯಿಗಳಾಗಿತ್ತು. ಮುಂಬೈನಲ್ಲಿ ರೂ. 503.11, ಚೆನ್ನೈನಲ್ಲಿ ರೂ. 493.87 ರಷ್ಟಿದೆ. ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 502 ಆಗಿತ್ತು.

ಆರು ಬಾರಿ ಏರಿಕೆ

ಆರು ಬಾರಿ ಏರಿಕೆ

ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಸತತ ಆರು ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 14.13 ಹೆಚ್ಚಳವಾದಂತಾಗಿದೆ.

ಸಬ್ಸಿಡಿ ರಹಿತ ಸಿಲಿಂಡರ್
 

ಸಬ್ಸಿಡಿ ರಹಿತ ಸಿಲಿಂಡರ್

ಸಬ್ಸಿಡಿ ರಹಿತ ಡುಗೆ ಅನಿಲ ಬೆಲೆಯಲ್ಲೂ ರೂ. 60 ಹೆಚ್ಚಳವಾಗಿದ್ದು, ಈಗ ಪ್ರತಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 939 ಆದಂತಾಗಿದೆ. ಅಕ್ಟೋಬರ್ ನಲ್ಲಿ ಪ್ರತಿ ಸಿಲಿಂಡರ್ ಬೆಲೆ ರೂ. 879 ಇತ್ತು. ಪ್ರಸ್ತುತ ಮುಂಬೈನಲ್ಲಿ ರೂ. 912, ಚೆನ್ನೈನಲ್ಲಿ ರೂ. 958 ದರ ಇದೆ.

ಸಬ್ಸಿಡಿ ಮೊತ್ತ ನಿಮ್ಮ ಖಾತೆಗೆ

ಸಬ್ಸಿಡಿ ಮೊತ್ತ ನಿಮ್ಮ ಖಾತೆಗೆ

ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತ ವರ್ಗಾವಣೆ ಮಾಡುವ ಮೊತ್ತವನ್ನು ನವೆಂಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 433.66 ಏರಿಸಿದೆ ಎಂದು ಇಂಡಿಯನ್ ಆಯಿಲ್ ಹೇಳಿದೆ.
ಅಕ್ಟೋಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 376.60 ಸಬ್ಸಿಡಿ ಇತ್ತು.. ಇದು ಸೆಪ್ಟೆಂಬರ್‌ ನಲ್ಲಿ ಪ್ರತಿ ಸಿಲಿಂಡರ್ ಗೆ ರೂ. 320.49, ಆಗಸ್ಟ್ ನಲ್ಲಿ ರೂ. 291.48, ಜುಲೈನಲ್ಲಿ ರೂ. 257.74 ಇತ್ತು. ಸಬ್ಸಿಡಿ ಪಡೆಯುವ ಎಲ್ಪಿಜಿ ಗ್ರಾಹಕರು ಬೆಲೆ ಹೆಚ್ಚಳದಿಂದ ಕೊಂಚ ನೆಮ್ಮದಿ ಪಡೆದಿದ್ದಾರೆ ಎನ್ನಬಹುದು.

ಪ್ರತಿವರ್ಷ 12 ಸಿಲಿಂಡರ್

ಪ್ರತಿವರ್ಷ 12 ಸಿಲಿಂಡರ್

ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ.

English summary

LPG Cylinder Gets More Expensive

LPG or cooking gas prices were increased on Wednesday, marking the sixth monthly increase in a row since June. While the hike in subsidised LPG was to the tune of Rs. 2.94 per cylinder in Delhi.
Story first published: Friday, November 2, 2018, 12:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X