ದೀಪಾವಳಿ ಧಮಾಕಾ! ಏರ್ಟೆಲ್ ನಿಂದ 5 ಭರ್ಜರಿ ಹೊಸ ಪ್ರಿಪೇಡ್ ಪ್ಲಾನ್ ಘೋಷಣೆ

ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ಕೊಡುಗೆಗಳನ್ನು ಘೋಷಿಸುತ್ತವೆ. ಈ ದೀಪಾವಳಿಯ ಸಂದರ್ಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ 5 ಆಫರ್ ಗಳನ್ನು ಪರಿಚಯಿಸಿದೆ.

ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ಕೊಡುಗೆಗಳನ್ನು ಘೋಷಿಸುತ್ತವೆ. ಈ ದೀಪಾವಳಿಯ ಸಂದರ್ಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ 5 ಆಫರ್ ಗಳನ್ನು ಪರಿಚಯಿಸಿದೆ.

ಭಾರ್ತಿ ಏರ್ಟೆಲ್ ಮೊದಲ ರೀಚಾರ್ಜ್ ಕೂಪನ್ (FRCs) ಗಳನ್ನು ರೂ. 178 ರಿಂದ 559 ವರೆಗೆ ಪ್ರಾರಂಭಿಸಿದೆ. ಇದು 28 ದಿನಗಳಿಂದ 90 ದಿನಗಳವರೆಗಿನ ಅವಧಿಯನ್ನು ಹೊಂದಿದ್ದು, ದಿನಕ್ಕೆ 2GB ಡೇಟಾ ಕೂಡ ನೀಡುತ್ತವೆ.
ಈ ಹೊಸ ಯೋಜನೆಗಳೊಂದಿಗೆ ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು ಏರ್ಟೆಲ್ ಹೊಂದಿದೆ. ಇಲ್ಲಿ ರೀಚಾರ್ಜ್ ಮತ್ತು ಅವು ನೀಡುವ ಪ್ರಯೋಜನಗಳ ವಿವರ ಇಲ್ಲಿದೆ ನೋಡಿ.. ಜಿಯೋ ದೀಪಾವಳಿ ಧಮಾಕಾ! ಒಟ್ಟು 8 ಆಫರ್ ಘೋಷಣೆ, ಯಾವುವು ಗೊತ್ತೆ?

ಏರ್ಟೆಲ್ ಪ್ರಿಪೇಯ್ಡ್ FRC ರೂ. 178

ಏರ್ಟೆಲ್ ಪ್ರಿಪೇಯ್ಡ್ FRC ರೂ. 178

ಏರ್ಟೆಲ್ ಪರಿಚಯಿಸಿರುವ ಪ್ರಿಪೇಡ್ ಯೋಜನೆಯಲ್ಲಿ ರೂ. 178 ಮೊದಲನೆಯದು. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅಪರಿಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಕರೆಗಳು, ಅನಿಯಮಿತ ರೋಮಿಂಗ್ ಸೌಲಭ್ಯ ಇರಲಿದೆ. ದಿನಕ್ಕೆ 100 ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಎಸ್ಎಂಎಸ್ ಮತ್ತು 3ಜಿ/4ಜಿ ವೇಗದ 1 ಜಿಬಿ ಡೇಟಾ ಕೂಡ ಸೇರಿದೆ.

ಏರ್ಟೆಲ್ ಪ್ರಿಪೇಯ್ಡ್ FRC ರೂ. 229

ಏರ್ಟೆಲ್ ಪ್ರಿಪೇಯ್ಡ್ FRC ರೂ. 229

ರೂ. 178 ಯೋಜನೆಯಂತೆಯೇ ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಕರೆಗಳು, ಅನಿಯಮಿತ ರೋಮಿಂಗ್ ಸೌಲಭ್ಯ ಹೊಂದಿದೆ. ದಿನಕ್ಕೆ 100 ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಎಸ್ಎಂಎಸ್ ನೀಡಲಿದೆ.
ಹೆಚ್ಚಿನದಾಗಿ ಪ್ರತಿದಿನ 3ಜಿ/4ಜಿ ವೇಗದ 1.4GB ಡೇಟಾ ಆನಂದಿಸಬಹುದು.

ಏರ್ಟೆಲ್ ಪ್ರಿಪೇಯ್ಡ್ FRC ರೂ. 344

ಏರ್ಟೆಲ್ ಪ್ರಿಪೇಯ್ಡ್ FRC ರೂ. 344

ಮೊದಲ ಬಾರಿಯ ರೀಚಾರ್ಜ್ ಯೋಜನೆ ರೂ. 178 ಮತ್ತು ರೂ. 229ರಂತೆ ಇದು ಕೂಡ ಅದೇ ಪ್ರಯೋಜನಗಳನ್ನು ಒದಗಿಸಲಿದ್ದು, ಹೆಚ್ಚಿನ ಡೇಟಾ ಪಡೆಯಬಹುದು.
28 ದಿನಗಳ ವ್ಯಾಲಿಡಿಟಿ ಇದೆ. ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಮತ್ತು ರೋಮಿಂಗ್ ಕರೆಗಳು, ಪ್ರತಿದಿನ 100 ಉಚಿತ SMS ಇರುತ್ತದೆ. ಆದರೆ, ಪ್ರತಿದಿನ 2 ಜಿಬಿ ಡೇಟಾ ಪಡೆಯಬಹುದು.

ಏರ್ಟೆಲ್ ಪ್ರಿಪೇಯ್ಡ್ FRC ರೂ. 495

ಏರ್ಟೆಲ್ ಪ್ರಿಪೇಯ್ಡ್ FRC ರೂ. 495

ರೂ. 495 ಯೋಜನೆ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1.4 ಜಿಬಿ ವರೆಗೆ 3G / 4G ಡೇಟಾವನ್ನು ನೀಡುತ್ತದೆ. ದಿನನಿತ್ಯ ಅನಿಯಮಿತ ಕರೆಗಳು ಹಾಗು ರೋಮಿಂಗ್ ಸೇರಿದಂತೆ 100 ಉಚಿತ SMS ಒದಗಿಸುತ್ತದೆ.

ಏರ್ಟೆಲ್ ಪ್ರಿಪೇಯ್ಡ್ FRC ರೂ. 559

ಏರ್ಟೆಲ್ ಪ್ರಿಪೇಯ್ಡ್ FRC ರೂ. 559

ಕೊನೆಯದಾಗಿ, ರೂ. 559 ಯೋಜನೆಯು 90 ದಿನಗಳ ಮಾನ್ಯತೆ ಹೊಂದಿದೆ. ಇದು ಪ್ರತಿದಿನ 1.4 ಜಿಬಿ ವರೆಗೆ 3G /4G ಡೇಟಾವನ್ನು ನೀಡುತ್ತದೆ. ದಿನನಿತ್ಯ ಅನಿಯಮಿತ ಕರೆಗಳು ಹಾಗು ರೋಮಿಂಗ್ ಸೇರಿದಂತೆ 100 ಉಚಿತ SMS ಒದಗಿಸುತ್ತದೆ.

FRC ಕಂಡಿಷನ್

FRC ಕಂಡಿಷನ್

ಮೇಲೆ ಹೇಳಿದಂತೆ FRC ಗಳು ಹೊಸ ಸಿಮ್ ಖರೀದಿಸುವ ಸಮಯದಲ್ಲಿ ಮಾತ್ರವೇ ಪಡೆದುಕೊಳ್ಳಬಹುದು ಅಥವಾ ಬೇರೆ ಅಪರೇಟರ್ ಗಳಿಂದ ಪೋರ್ಟ್ ಆಗಿ ಬಂದವರು ಈ ಸೌಲಭ್ಯ ಪಡೆಯಬಹುದು. ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ಏರ್ಟೆಲ್ ಅಧಿಕೃತ ವೆಬ್ಸೈಟ್ ಮೂಲಕ ಗ್ರಾಹಕರು ಈ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+