ಅಡುಗೆ ಅನಿಲ ಬಳಸುವ ಗ್ರಾಹಕರು ಈ ಸುದ್ದಿಯನ್ನು ಓದಲೇಬೇಕು. ಬರುವ ಡಿಸೆಂಬರ್ 1ರಿಂದ ಸುಮಾರು 1 ಕೋಟಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ.
ಅಡುಗೆ ಅನಿಲ ಬಳಸುವ ಗ್ರಾಹಕರು ಈ ಸುದ್ದಿಯನ್ನು ಓದಲೇಬೇಕು. ಬರುವ ಡಿಸೆಂಬರ್ 1ರಿಂದ ಸುಮಾರು 1 ಕೋಟಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ.
KYC ಅಪ್ಡೇಟ್ ಮಾಡದ ಗ್ರಾಹಕರ ಎಲ್ಪಿಜಿ ಕನೆಕ್ಷನ್ ಸರ್ಕಾರರದ್ದು ಪಡಿಸಲಿದ್ದು, ಎಲ್ಜಿಪಿ ಸೌಲಭ್ಯ ಬಯಸುವವರು ಡಿಸೆಂಬರ್ 1ರ ಒಳಗಾಗಿ ಕೆವೈಸಿ ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ಗ್ಯಾಸ್ ಸಿಗುವುದಿಲ್ಲ. ಫಸಲ್ ಬಿಮಾ ಯೋಜನೆ ಹಗರಣ ನೋಡಿದ್ರೆ ಬೆಚ್ಚಿ ಬೀಳ್ತಿರಾ! ರಾಜ್ಯವಾರು ಅಂಕಿಅಂಶ ಇಲ್ಲಿದೆ ನೋಡಿ..
ನವೆಂಬರ್ 30 ರವರೆಗೆ ಕಾಲಾವಕಾಶ
ಗ್ಯಾಸ್ ಕಂಪನಿಗಳಾದ ಭಾರತ್ ಗ್ಯಾಸ್, ಹೆಚ್ಪಿ ಗ್ಯಾಸ್, ಇಂಡೆನ್ ಗ್ಯಾಸ್ ಗೆ ಎಲ್ಲ ಗ್ರಾಹಕರ KYC ಅಂತಿಮಗೊಳಿಸಲು ನವೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ತುಂಬಾ ಗ್ರಾಹಕರು KYC ಪೂರ್ಣಗೊಳಿಸಿಲ್ಲದಿರುವುದರಿಂದ ಗ್ರಾಹಕರಿಗೆ ನವೆಂಬರ್ 30ರವರೆಗೆ KYCಗೆ ಅವಕಾಶವಿದೆ. ದೇಶದ ಶೇ. 50ರಷ್ಟು ಎಟಿಎಂಗಳು ಬಂದ್ ಆಗಲಿವೆ..
ವಿವರ ನೀಡುವಂತೆ ಸೂಚನೆ
ಗ್ಯಾಸ್ ಕಂಪನಿಗಳ ಬಳಿ KYC ಅಡಿಯಲ್ಲಿ ಆಧಾರ್ ನಂಬರ್ ನೀಡದ ಹಾಗೂ ಗಿವ್ ಇಟ್ ಅಪ್ ಸ್ಕೀಮ್ ಅಳವಡಿಸಿಕೊಳ್ಳದ ಗ್ರಾಹಕರ ಬಗ್ಗೆ ಕೇಂದ್ರ ಸರ್ಕಾರ ವರದಿ ಕೇಳಿದೆ. ಸರ್ಕಾರ ಮೂರು ವರ್ಷಗಳ ಹಿಂದೆಯೇ ಗ್ಯಾಸ್ ಸಂಪರ್ಕ ಪಡೆದವರಿಗೆ ಬ್ಯಾಂಕ್ ಖಾತೆ ವಿವರ ನೀಡುವಂತೆ ಸೂಚನೆ ನೀಡಿದೆ.
ಬ್ಯಾಂಕ್ ಖಾತೆಗೆ ಸಬ್ಸಿಡಿ
ಎಲ್ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹಾಕುವುದು ಸರ್ಕಾರದ ಉದ್ದೇಶ. ಆದರೆ ಈವರೆಗೆ ಅನೇಕರು ಬ್ಯಾಂಕ್ ಖಾತೆ ವಿವರ ನೀಡಿಲ್ಲವಾದರಿಂದ ಸಬ್ಸಿಡಿ ಲಾಭ ಸಿಗುತ್ತಿಲ್ಲ. ಮಾಧ್ಯಮಗಳ ವರದಿ ಪ್ರಕಾರ 1 ಕೋಟಿ ಜನರು KYC ಅಪ್ಡೇಟ್ ಮಾಡಿಲ್ಲ.
ಎಲ್ಪಿಜಿ ಬೆಲೆ ಏರಿಕೆಯ ಶಾಖ!
ಎಲ್ಪಿಜಿ ಗ್ರಾಹಕರಿಗೆ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಸರ್ಕಾರ ಬಿಸಿ ಮುಟ್ಟಿಸಿದೆ. ಶ್ರೀಸಾಮಾನ್ಯರ ಜೇಬಿಗೆ ಎಲ್ಪಿಜಿ ಬೆಲೆ ಏರಿಕೆಯಿಂದ ಕತ್ತರಿ ಬಿದ್ದಿದ್ದು, ನವೆಂಬರ್ ನಲ್ಲಿ ಎರಡನೇ ಬಾರಿ ಅಡುಗೆ ಅನಿಲ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ. ಅಂದರೆ ನವೆಂಬರ್ ತಿಂಗಳ ಮೊದಲ ಎರಡು ವಾರದೊಳಗೆ ಎರಡು ಬಾರಿ ಎಲ್ಪಿಜಿ ದರ ಏರಿದೆ.
ಸತತ ಏಳು ಬಾರಿ ಏರಿಕೆ
ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಸತತ ಏಳು ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 16.13 ಹೆಚ್ಚಳವಾದಂತಾಗಿದೆ. ನವೆಂಬರ್ 1ರಂದು ಸಿಲಿಂಡರ್ ಮೂಲ ಬೆಲೆಯನ್ನು 2.84 ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ದರ ಏರಿಕೆಯಾದ ಕಾರಣ ಜೂನ್ ತಿಂಗಳಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.
ಸಿಲಿಂಡರ್ ಬೆಲೆ ಎಷ್ಟಿದೆ?
14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ಆಗಿದೆ. ಇದರ ಹಿಂದಿನ ಬೆಲೆ ರೂ. 505.34 ಆಗಿತ್ತು. ಈ ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಎರಡನೇ ಬಾರಿ ಹೆಚ್ಚಳ ಕಂಡಿದೆ. ಮುಂಬೈನಲ್ಲಿ ರೂ. 503.11, ಚೆನ್ನೈನಲ್ಲಿ ರೂ. 493.87 ರಷ್ಟಿದ್ದ ಬೆಲೆ ಇದೀಗ ರೂ. 2 ಏರಿಕೆ ಕಂಡಿದೆ.


Click it and Unblock the Notifications