For Quick Alerts
ALLOW NOTIFICATIONS  
For Daily Alerts

ಆರ್ಬಿಐನಿಂದ 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ಕೇಂದ್ರಕ್ಕೆ ವರ್ಗಾವಣೆ ಸಾದ್ಯತೆ!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಗತ್ಯಕ್ಕಿಂತ ಸಾಕಷ್ಟು ಹೆಚ್ಚು ಮೀಸಲು ನಿಧಿ ಹೊಂದಿರುವುದರಿಂದ ಕೇಂದ್ರ ಸರ್ಕಾರಕ್ಕೆ ರೂ. 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ವರ್ಗಾಯಿಸಬಹುದಾಗಿದೆ ಎಂದು ವರದಿ ಹೇಳಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಗತ್ಯಕ್ಕಿಂತ ಸಾಕಷ್ಟು ಹೆಚ್ಚು ಮೀಸಲು ನಿಧಿ ಹೊಂದಿರುವುದರಿಂದ ಕೇಂದ್ರ ಸರ್ಕಾರಕ್ಕೆ ರೂ. 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ವರ್ಗಾಯಿಸಬಹುದಾಗಿದೆ ಎಂದು ವರದಿ ಹೇಳಿದೆ.

ಆರ್ಬಿಐನಿಂದ 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ಕೇಂದ್ರಕ್ಕೆ ವರ್ಗಾವಣೆ

ಆರ್ಬಿಐ ಮಂಡಳಿ ಕಳೆದ ಸೋಮವಾರ ನಡೆದ ಸಭೆಯಲ್ಲಿ ಸಮಿತಿಯನ್ನು ರೂಪಿಸಲು ನಿರ್ಧರಿಸಿದ್ದು, ಈ ವಾರದ ನಂತರ ಪ್ರಕಟಗೊಳ್ಳಲಿದೆ. ಅಂದರೆ ಆರ್ಬಿಐನ ಮೀಸಲು ನಿಧಿಯ ಹೊಸ ನಿಯಮ ರೂಪಿಸಲು ತಜ್ಞರ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಈ ಸಮಿತಿ ಸಾಕಷ್ಟು ಹೆಚ್ಚು ಮೀಸಲು ನಿಧಿಯನ್ನು ಗುರುತಿಸಿದ ನಂತರ ಈ ಮೊತ್ತ ವರ್ಗಾವಣೆ ಮಾಡುವ ಸಾದ್ಯತೆ ಇದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಅಭಿಪ್ರಾಯಿಸಿದೆ.

ಹೆಚ್ಚುವರಿ ಮೀಸಲು ನಿಧಿಯ ಮೊತ್ತ ತುರ್ತು ನಿಧಿಗೆ ಸೀಮಿತವಿದ್ದರೆ ವರ್ಗಾವಣೆ ಮೊತ್ತ ರೂ. 1 ಲಕ್ಷ ಕೋಟಿ ಇರಲಿದೆ. ಈ ಪ್ರಮಾಣ ಹೆಚ್ಚಿದ್ದರೆ ರೂ. 3 ಲಕ್ಷ ಕೋಟಿವರೆಗೆ ಏರಿಕೆಯಾಗಲಿದೆ. ಪ್ರಸ್ತುತ ಆರ್ಬಿಐ ಬಳಿ ಶೇ. ೭ರಷ್ಟು ತುರ್ತು ಮೀಸಲು ಪ್ರಮಾಣವಿದ್ದು, ಆರ್ಬಿಐ ಬಳಿಯಿರುವ ಹೆಚ್ಚುವರಿ ಮೀಸಲು ನಿಧಿ ವರ್ಗಾಯಿಸಲು ಕಾಯಿದೆಯ ನಿರ್ಬಂಧವಿರುವುದಿಲ್ಲ.

Read more about: banking rbi money finance news
English summary

RBI can transfer Rs 1 trillion of excess reserves to government: Report

The Reserve Bank has "more than adequate" reserves and that it can transfer over Rs 1 trillion to the government.
Story first published: Tuesday, November 27, 2018, 12:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X