ಆರ್ಬಿಐ ರೆಪೋ ದರ ಶೇ. 6.5

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ರೆಪೋ ದರವನ್ನು ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡದೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ರೆಪೋ ದರವನ್ನು ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡದೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ.

ಆರ್ಬಿಐ ರೆಪೋ ದರ ಶೇ. 6.5

ಕಳೆದ ಬಾರಿಯಂತೆ ರೆಪೋ ದರ ಶೇ. 6.5 ರಷ್ಟು ಉಳಿಸಲಾಗಿದ್ದು, ಯಾವುದೇ ಬದಲಾವಣೆಯಾಗಿಲ್ಲ. ರಿಸರ್ವ್ ರೆಪೋ ದರದಲ್ಲಿ ಕೂಡ ಶೇ. 6.25 ರಷ್ಟಿದೆ. ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ನಿಗದಿತ ಬ್ಯಾಂಕುಗಳ ನಗದು ಮೀಸಲು ಅನುಪಾತವನ್ನು ನಿವ್ವಳ ಬೇಡಿಕೆ ಹಾಗೂ ಸಮಯಾವಕಾಶ ಆಧರಿಸಿ ಶೇ. 4.0 ಕ್ಕೆ ನಿಗದಿಪಡಿಸಿದ್ದಾರೆ.

ಎರಡು ಬಾರಿಯ ಸತತ ರೆಪೋ ದರ ಏರಿಕೆಯ ಬಳಿಕ ಆರ್ಬಿಐ ಈ ಬಾರಿ ದರ ಏರಿಕೆ ಮಾಡಿಲ್ಲ. ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಸದಸ್ಯರ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮತ ಹಾಕಿದ್ದಾರೆ.

ಆರ್ಬಿಐ ಎಸ್ಎಲ್ಆರ್ ನಲ್ಲಿ ಇಳಿಕೆ ಮಾಡಿದ್ದು, ಜನವರಿ ನಂತರ ಎಸ್ಎಲ್ಆರ್ ಶೇ. 0.25 ರಷ್ಟು ಇಳಿಕೆಯಾಗಲಿದೆ. ಎಸ್ಎಲ್ಆರ್ ಪ್ರತಿ ಕ್ವಾರ್ಟರ್ ಗೆ 0.25ನಷ್ಟು ಇಳಿಕೆಯಾಗಲಿದ್ದು, ಪ್ರಸ್ತುತ ಎಸ್ಎಲ್ಆರ್ ದರ ಶೇ. 19.5 ರಷ್ಟಿದೆ. ಜೂನ್ ನಿಂದ ಇಲ್ಲಿಯವರೆಗೆ ಆರ್ಬಿಐ ಎರಡು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ರೆಪೋ ದರ ಹೆಚ್ಚಾದರೆ ಬ್ಯಾಂಕ್ ಗಳು ತಮ್ಮ ಮೇಲಿನ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುತ್ತವೆ.

ರೆಪೋ ದರ ಏರುವುದರಿಂದ ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲಗಳು ದುಬಾರಿಯಾಗುತ್ತವೆ. ಆದರೆ ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗದಿರುವುದರಿಮದ ಸಾಲಗಳು ಕೂಡ ದುಬಾರಿಯಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+