ನಂಬಿ ಅಥವಾ ಬಿಡಿ! ನಾಣ್ಯಗಳನ್ನು ಟಂಕಿಸಲು ವೆಚ್ಚವಾಗುವ ಮೊತ್ತ ನೋಡಿದ್ರೆ ಮಾತ್ರ ಶಾಕ್ ಆಗ್ತಿರಾ..

ಮಾಹಿತಿ ಹಕ್ಕು ಕಾಯಿದೆಯಡಿ ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾಹಿತಿ ಕಾಯಿದೆ ಅಡಿಯಲ್ಲಿ (RTI) ಅನೇಕ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದು ಜನಸಾಮಾನ್ಯರ ಹಕ್ಕು.

ನಾಣ್ಯಗಳನ್ನು ಟಂಕಿಸಲು ವೆಚ್ಚವಾಗುವ ಮೊತ್ತ ನೋಡಿದ್ರೆ ಶಾಕ್ ಆಗ್ತಿರಾ..

ಅದೇ ರಿತಿ ಮಾಹಿತಿ ಹಕ್ಕು ಕಾಯಿದೆಯಡಿ ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ ರೂ. 1, 2, 5 ಹಾಗೂ 10 ನಾಣ್ಯಗಳ ತಯಾರಿಕೆಗೆ ವೆಚ್ಚವಾಗುವ ಮೊತ್ತದ ಮಾಹಿತಿ ಇಲ್ಲಿದೆ.

ಮಾಹಿತಿ ಹಕ್ಕು ಕಾಯಿದೆಯಡಿ ಆರ್ಬಿಐಗೆ ಖಾಸಗಿ ಮಾಧ್ಯಮವೊಂದು ಅರ್ಜಿ ಸಲ್ಲಿಸಿತ್ತು. ಅರ್ಜಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮಾಹಿತಿ ನೀಡಿದ್ದು, ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು ರೂ. 1.11 ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ.
ಅದೇ ರೀತಿ ರೂ. 2 ನಾಣ್ಯ ಟಂಕಿಸಲು 1.28 ರೂಪಾಯಿ, ರೂ. 5 ನಾಣ್ಯಕ್ಕೆ 3.69 ಹಾಗೂ ರೂ. 10 ನಾಣ್ಯಕ್ಕೆ 5.54 ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಿದೆ.
2016-17 ಸಾಲಿನಲ್ಲಿ ಅತಿ ಹೆಚ್ಚು ಅಂದರೆ 220.1 ಕೋಟಿ ನಾಣ್ಯಗಳನ್ನು ಟಂಕಿಸಲಾಗಿದ್ದು, 2015-16 ನೇ ಸಾಲಿನಲ್ಲಿ 215.1 ಕೋಟಿ ನಾಣ್ಯಗಳನ್ನು ಟಂಕಿಸಲಾಗಿದೆ.

ಆರ್ಟಿಐ ಪ್ರಕಾರ, ಇಂಡಿಯನ್ ಗವರ್ನಮೆಂಟ್ ಮಿಂಟ್ (ಐಜಿಎಂ) ಮುಂಬೈ ರೂ. 10, ರೂ. 5, ರೂ. 2 ಮತ್ತು ರೂ. 1 ಅನ್ನು ಪ್ರಸ್ತುತ ಮುದ್ರಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಮುಂಬೈನ ಐಜಿಎಂ ಕಳೆದ ಐದು ವರ್ಷಗಳಲ್ಲಿ ವಿವಿಧ ರೀತಿಯ ನಾಣ್ಯಗಳನ್ನು ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+